ದಿಯಾ ಪಾತ್ರ ದಿ ಎಂಡ್?- ಮದುವೆ ಹುಡುಗಿ ಶ್ವೇತಾ ಕೊಟ್ರು ಬಿಗ್ ನ್ಯೂಸ್

ದಿಯಾ ಪಾತ್ರ ದಿ ಎಂಡ್?- ಮದುವೆ ಹುಡುಗಿ ಶ್ವೇತಾ ಕೊಟ್ರು ಬಿಗ್ ನ್ಯೂಸ್

ನ್ನಡದ ನಂಬರ್‌ ಒನ್‌ ʻಅಮೃತಧಾರೆʼ (Amruthadaare) ಸೀರಿಯಲ್‌ನಲ್ಲಿ ದಿಯಾ ಆಗಿ ಫೇಮಸ್‌ ಆಗಿರೋ ಶ್ವೇತಾ ಗೌಡ (Shwetha Gowda) ಮೇ 14ರಂದು ಹಸೆಮಣೆ ಏರೋದ್ದಕ್ಕೆ (Wedding) ರೆಡಿಯಾಗಿದ್ದಾರೆ. ವೃತ್ತಿ ಜೀವನ, ಮದುವೆಯ ಕುರಿತು Sandalwood Times ಜೊತೆ ನಟಿ ಮಾತನಾಡಿದ್ದಾರೆ.

ಶ್ವೇತಾ ಗೌಡ ಮೂಲತಃ ಏಲ್ಲಿನವರು? ‘ಅಮೃತಧಾರೆ’ ದಿಯಾ ಕೆಡಿ JD ಜೋಡಿಯಾಗಿದ್ದು ಹೇಗೆ?

ನಾನು ಓದಿ, ಬೆಳೆದಿದ್ದು ಬೆಂಗಳೂರಿನಲ್ಲಿ ಆದರೆ ನನ್ನ ತಂದೆ ಮೂಲತಃ ಹಾಸನದ ಹಳೇಬೀಡಿನವರು. ತಂದೆ ನಾಗರಾಜ್‌ ಅವರು ಡೆಲ್‌ನಲ್ಲಿ ಕೆಲಸ ಮಾಡುತ್ತಾರೆ. ಅಮ್ಮ ಮಂಜುಳ ಅವರು ಬ್ಯೂಟಿ ಪಾರ್ಲರ್‌ ಇಟ್ಟುಕೊಂಡಿದ್ದಾರೆ. ತಮ್ಮ ಗೌತಮ್ ಇದ್ದಾನೆ ಸದ್ಯ ಡಿಗ್ರಿ ಮುಗಿಸಿದ್ದಾನೆ. ನಾನು ಮೊದಲು ʻಶಾಂತಂ ಪಾಪಂʼನಲ್ಲಿ ಲೀಡ್‌ ಆಗಿ 3 ಏಪಿಸೋಡ್‌ನಲ್ಲಿ ನಟಿಸಿದ್ದೇ, ಅಲ್ಲಿಂದ ಅಮೃತಧಾರೆಯಲ್ಲಿ ನಟಿಸಲು ಚಾನ್ಸ್‌ ಸಿಕ್ತು. ಆಡಿಷನ್ ಕೊಟ್ಟಿದ್ದು ಮಲ್ಲಿ ಪಾತ್ರಕ್ಕೆ ಆ ನಂತರ ಸೆಲೆಕ್ಟ್‌ ಆಗಿದ್ದು ದಿಯಾ ರೋಲ್‌ಗೆ. ಕೆಲವು ದಿನಗಳಷ್ಟೇ ಈ ಪಾತ್ರ ಎಂದು ಹೇಳಲಾಗಿತ್ತು. ವೀಕ್ಷಕರು ನನ್ನ ಪಾತ್ರಕ್ಕೆ ಕೊಡ್ತಿರೋ ರೆಸ್ಪಾನ್ಸ್‌ ನೋಡಿ ನನ್ನ ಪಾತ್ರ ಮುಂದುವರೆಯಿತು. ಇದಕ್ಕೆಲ್ಲಾ ಕಾರಣ ನಮ್ಮ ವೀಕ್ಷಕರು ಎಂದಿದ್ದಾರೆ.

ಸುನೀಲ್‌ ಚಂದ್ರ ಜೊತೆಗಿನ ಮದುವೆ ಬಗ್ಗೆ ಶ್ವೇತಾ ಹೇಳೋದೇನು?

ಸುನೀಲ್‌ (Sunil Chandra) ಅವರು ರೈತರು, ಬೆಂಗಳೂರಿನಲ್ಲಿ ಅವರಿಗೆ ಎರಡು ಬೇಕರಿಯಿದೆ. ನನ್ನ ತಂದೆ ಕಡೆಯ ಸಂಬಂಧಿ, ಹಳೇಬೀಡಿನವರು. ನನಗೆ ಇಷ್ಟು ಬೇಗ ಮದುವೆಯಾಗೋ ಪ್ಲ್ಯಾನ್‌ ಇರಲಿಲ್ಲ. ಆದರೆ ಅವರು ಮುಂದೆ ಓದಿಸುತ್ತೇವೆ ಎಂದಿದ್ದು ಖುಷಿಯಾಯ್ತು. ನಮ್ಮ ಅತ್ತೆ, ಮಾವ ಇಬ್ಬರೂ ನನ್ನ ಸೀರಿಯಲ್‌ ಫ್ಯಾನ್ಸ್. ನಿನಗೆ ಆಕ್ಟಿಂಗ್‌ ಮಾಡಲು ಇಷ್ಟವಿದ್ರೆ ಮಾಡು ಎಂದಿದ್ದಾರೆ. ಪತಿಯ ಕುಟುಂಬದಿಂದ ಒಳ್ಳೆಯ ಬೆಂಬಲವಿದೆ ಎಂದಿದ್ದಾರೆ.

ಮದುವೆ ಎಲ್ಲಿ ನಡೀತಾ ಇರೋದು?

ಮೇ 14ರಂದು ಹಳೇಬೀಡಿನ ಬನಶಂಕರಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಬೆಳಗ್ಗೆ 9:30ರಂದು ಮುಹೂರ್ತ. ಅದೇ ದಿನ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.

ದಿಯಾ ಪಾತ್ರಕ್ಕೆ ಬೀಳಲಿದ್ಯಾ ಬ್ರೇಕ್‌?

ಈ ತಿಂಗಳು ಕೆಲವು ದಿನಗಳು ಅಷ್ಟೇ ದಿಯಾ ಪಾತ್ರ ಮೂಡಿ ಬರಲಿದೆ. ನನ್ನ ಪಾತ್ರ ಅಂತ್ಯವಾಗಲಿದೆ. ನನ್ನ ಪಾತ್ರ ಎಂಟ್ರಿ ಅದೆಷ್ಟು ಚೆನ್ನಾಗಿತ್ತೋ, ಅಷ್ಟೇ ದಿಯಾ ಪಾತ್ರ ಅದ್ಭುತವಾಗಿ ಎಂಡ್‌ ಆಗ್ತಿದೆ ಎಂದಿದ್ದಾರೆ. ಜೆಡಿಗೆ ನಾನು ಮೋಸ ಮಾಡೋ ಪಾತ್ರಕ್ಕೆ ಹೈಯ್‌ ವಿವ್ಸ್‌ ಬಂದಿತ್ತು. ನನ್ನ ಪಾತ್ರವನ್ನು ರಿಪ್ಲೇಸ್‌ ಮಾಡಿದ್ರೆ ಜನ ಒಪ್ಪಲ್ಲ ಅಂತ, ಒಂದೊಳ್ಳೆಯ ರೀತಿಯಲ್ಲಿ ಎಂಡ್‌ ಮಾಡ್ತಿದ್ದಾರೆ. ಅದು ಕೂಡ ಜನರಿಗೆ ಇಷ್ಟವಾಗುತ್ತೆ ಎಂದಿದ್ದಾರೆ. ಅವಕಾಶ ಕೊಟ್ಟ ಅಮೃತಧಾರೆ ಟೀಮ್‌ಗೆ ಥ್ಯಾಂಕ್ಯೂ.

ಮದುವೆಯ ಬಳಿಕವೂ ಶ್ವೇತಾ ನಟಿಸುತ್ತಾರಾ?

ನನ್ನದು MCOM ಆಗಿದೆ, ಮದುವೆಯ ಬಳಿಕ ಕಂಡ ಕನಸಿನಂತೆ 2 ವರ್ಷ PHD ಮಾಡಲಿದ್ದೇನೆ. ಮತ್ತೆ ಸೀರಿಯಲ್‌ ಮಾಡಲ್ಲ. ಆದರೆ ಸಿನಿಮಾ ಮಾಡುತ್ತೇನೆ. ಕನ್ನಡದ ಜೋಡಿ ಖಡ್ಗ, ತಮಿಳಿನಲ್ಲೊಂದು ಚಿತ್ರದಲ್ಲಿ ನಟಿಸಿದ್ದೇನೆ. ಈ ಬಗ್ಗೆ ಸದ್ಯದಲ್ಲೇ ಅಪ್‌ಡೇಟ್‌ ಸಿಗಲಿದೆ.

ಬ್ಯಾಚುಲರ್‌ ಲೈಫ್‌ಗೆ ಗುಡ್‌ ಬೈ ಹೇಳಿ.. ಹಸಮಣೆ ಏರುತ್ತಿರೋ ದಿಯಾ ಅಲಿಯಾಸ್‌ ಶ್ವೇತಾ ಮದುವೆಯ ಶುಭಾಶಯಗಳು. ನಟಿಯ ಬದುಕು ಬಂಗಾರವಾಗಲಿ ಎಂಬುದೇ ಅಭಿಮಾನಿಗಳ ಆಶಯ. 

News Desk Sandalwood Times

error: Content is protected !!