ರಶ್ಮಿಕಾ, ಶ್ರೀಲೀಲಾರಂತೆ ಸೌತ್‌ನತ್ತ ಕನ್ನಡತಿಯರು

ರಶ್ಮಿಕಾ, ಶ್ರೀಲೀಲಾರಂತೆ ಸೌತ್‌ನತ್ತ ಕನ್ನಡತಿಯರು

ಲೆಗೆ ಕಲಾವಿದರಿಗೆ ಭಾಷೆಯ ಬೇಲಿಯಿಲ್ಲ ಎಂಬ ಮಾತು ಅದೆಷ್ಟು ಸತ್ಯ ಎಂಬುದು ಮತ್ತೆ ಪ್ರೂವ್ ಆಗಿದೆ. ಟ್ಯಾಲೆಂಟ್ ಜೊತೆ ಲಕ್ ಇರೋ ಕನ್ನಡದ ನಟಿಮಣಿಯರು ಈಗ ಸೌತ್‌ನತ್ತ ಮುಖ ಮಾಡಿದ್ದಾರೆ. ಸ್ಟಾರ್ ನಟರ ಜೊತೆ ಕನ್ನಡದ ನಟಿಯರು ಮಿಂಚುತ್ತಿದ್ದಾರೆ.

ಕನ್ನಡ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿ ಸೌತ್‌ನಲ್ಲಿ ಬೇಡಿಕೆಯ ನಟಿಯರಾಗಿದ್ದಾರೆ. ಕನ್ನಡದ ‘ಕಿರಿಕ್ ಪಾರ್ಟಿ’ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿದ್ದಾರೆ. ಶ್ರೀಲೀಲಾ (Sreeleela) ಕೂಡ ತೆಲುಗು, ತಮಿಳಿನಲ್ಲೇ ಸೆಟಲ್ ಆಗಿದ್ದಾರೆ. ಕನ್ನಡದ ನಟಿಯರಿಗೆ ಪರಭಾಷೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಹೀಗಿರುವಾಗ ರುಕ್ಮಿಣಿ ವಸಂತ್, ಚೈತ್ರಾ ಆಚಾರ್, ಆಶಿಕಾ ರಂಗನಾಥ್, ಖುಷಿ ರವಿ ಕೂಡ ರಶ್ಮಿಕಾ ಹಾದಿಯಲ್ಲೇ ಸಾಗುತ್ತಿದ್ದಾರೆ.

ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆಯ ನಟಿ. ಕನ್ನಡದ ಜೊತೆ ತೆಲುಗು ಹಾಗೂ ತಮಿಳಿನಲ್ಲೂ ಅವರು ಆಕ್ಟೀವ್ ಆಗಿದ್ದಾರೆ. 2025ರಲ್ಲಿ ರಜನಿಕಾಂತ್ ನಟನೆಯ ‘ಕೂಲಿ’ ಚಿತ್ರದಲ್ಲಿ ಲೇಡಿ ವಿಲನ್ ಆಗಿ ನಟಿಸಿ ಗೆದ್ದಿದ್ದಾರೆ. ಹೀಗಾಗಿ ಒಂದಷ್ಟು ಪರಭಾಷಾ ಸಿನಿಮಾಗಳಿಂದ ಅವರಿಗೆ ಬುಲಾವ್ ಬರುತ್ತಿದೆ.

‘ಬೀರ್‌ಬಲ್’ ಚಿತ್ರದ ಮೂಲಕ ಕನ್ನಡ ಸಿನಿ ಜಗತ್ತಿಗೆ ಕಾಲಿಟ್ಟ ನಟಿ ರುಕ್ಮಿಣಿ (Rukmini Vasanth) ಆ ನಂತರ ರಕ್ಷಿತ್ ಶೆಟ್ಟಿಗೆ ಜೋಡಿಯಾಗಿ ‘ಸಪ್ತಸಾಗರದಾಚೆ ಎಲ್ಲೋ’ ಭಾಗ 1 & ಭಾಗ 2ರಲ್ಲಿ ನಟಿಸಿದ್ದರು. ಸೌತ್‌ನಲ್ಲಿ ವಿಜಯ್ ಸೇತುಪತಿ, ಶಿವಕಾರ್ತಿಕೇಯನ್‌ಗೆ ನಾಯಕಿಯಾಗಿ ಸೈ ಎನಿಸಿಕೊಂಡರು. ಇತ್ತ ರಿಷಬ್‌ಗೆ ಹೀರೋಯಿನ್ ಆಗಿ ‘ಕಾಂತಾರ ಚಾಪ್ಟರ್ 1’ರಲ್ಲಿ ಕಾಣಿಸಿಕೊಂಡರು. ಕನಕವತಿ ರೋಲ್ ನೆಗೆಟಿವ್ ಆಗಿದ್ರು ಕೂಡ ಅಚ್ಚುಕಟ್ಟಾಗಿ ನಟಿಸಿದರು. ಯಶಸ್ಸಿನ ಬಳಿಕ ಜ್ಯೂ.ಎನ್‌ಟಿಆರ್ ಸಿನಿಮಾದಲ್ಲಿ ನಾಯಕಿ ಆಗಿ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಯಶ್ (Yash) ನಟನೆಯ ‘ಟಾಕ್ಸಿಕ್’ ಚಿತ್ರದಲ್ಲೂ ಪವರ್‌ಫುಲ್ ಪಾತ್ರ ಮಾಡ್ತಿದ್ದಾರೆ. ಒಟ್ನಲ್ಲಿ ರುಕ್ಕು ಲಕ್ಕು, ಲುಕ್ಕು ಎರಡು ಬದಲಾಗಿದೆ.

ಆಶಿಕಾ ರಂಗನಾಥ್ (Ashika Ranganath) ಇದೀಗ ತೆಲುಗಿನತ್ತ ವಾಲಿದ್ದಾರೆ. ಕನ್ನಡದ ಜೊತೆಗೆ ಪರಭಾಷೆಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ರವಿತೇಜ ಜೊತೆಗಿನ ಸಿನಿಮಾ, ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ವಿಶ್ವಂಭರ’ ಸೇರಿದಂತೆ ಹಲವು ಚಿತ್ರಗಳು ಪಟಾಕಿ ಪೋರಿಯ ಕೈಯಲ್ಲಿದೆ.

ಚೈತ್ರಾ ಆಚಾರ್ (Chaithra Achar) ಇತ್ತೀಚೆಗೆ ತಮಿಳು ನಟ ಸಿದ್ಧಾರ್ಥ್ ನಟನೆಯ ‘3 ಬಿಹೆಚ್‌ಕೆ’ ಚಿತ್ರದಲ್ಲಿ ನಟಿಸಿ ಗಮನ ಸೆಳೆದರು. ಈಗ ಶಶಿ ಕುಮಾರ್ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ನಟಿಯ ಕೈಯಲ್ಲಿದೆ.

‘ದಿಯಾ’ ನಟಿ ಖುಷಿ ರವಿ (Kushee Ravi) ಕೂಡ ಸೌತ್‌ನತ್ತ ಮುಖ ಮಾಡಿದ್ದಾರೆ. ಸೆಲ್ವ ರಾಘವನ್ ಸಿನಿಮಾದಲ್ಲಿ ಅವರು ಖುಷಿ ನಟಿಸಿ ಬಂದಿದ್ದಾರೆ. ತೆಲುಗು ಮತ್ತು ತಮಿಳು ಸಿನಿಮಾಗಳ ಮಾತುಕತೆ ಕೂಡ ನಡೆಯುತ್ತಿದೆ.

ಕನ್ನಡದ ನಟಿಮಣಿಯರು ಸೌತ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರೋದು ಇದೇ ಮೊದಲೇನಲ್ಲ. ಈಗಾಗಲೇ ಅನುಷ್ಕಾ ಶೆಟ್ಟಿ, ನಿತ್ಯಾ ಮೆನನ್, ಶ್ರದ್ಧಾ ಶ್ರೀನಾಥ್ ಸೇರಿದಂತೆ ಸೌತ್‌ನಲ್ಲಿ ಸೈ ಎನಿಸಿಕೊಂಡಿದ್ದಾರೆ. ಅದರಂತೆ ಈಗಲೂ ಕೂಡ ಪರಭಾಷೆಯಲ್ಲಿ ನಟಿಸೋದು ಕಾಮನ್ ಆಗಿದೆ.

News Desk Sandalwood Times

error: Content is protected !!