ಅಪ್ಪ ಮಗಳ ಬಂಧ ಸಾರೋ ‘ಲವ್ ಮಾಕ್ಟೈಲ್ 3’ ಚೆಂದದ ಹಾಡು ರಿಲೀಸ್

ಅಪ್ಪ ಮಗಳ ಬಂಧ ಸಾರೋ ‘ಲವ್ ಮಾಕ್ಟೈಲ್ 3’ ಚೆಂದದ ಹಾಡು ರಿಲೀಸ್

ಡಾರ್ಲಿಂಗ್ ಕೃಷ್ಣ ಇತ್ತೀಚೆಗಷ್ಟೇ ತಮ್ಮ ‘ಲವ್ ಮಾಕ್ಟೇಲ್ 3’ (Love Mocktail 3) ಚಿತ್ರದ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಬಿಟ್ಟುಕೊಟ್ಟಿದ್ದ ಒಂದಷ್ಟು ವಿಚಾರಗಳೇ ಈ ಸಿನಿಮಾ ಬಗ್ಗೆ ಕುತೂಹಲ ಮೂಡುವಂತೆ ಮಾಡಿದೆ. ಇದೀಗ ‘ಲವ್ ಮಾಕ್ಟೇಲ್ 3’ ಚಿತ್ರದ ಲಿರಿಕಲ್ ಹಾಡೊಂದು ರಿಲೀಸ್ ಆಗಿದೆ. ಇದರೊಂದಿಗೆ ಒಂದಿಡೀ ಕಥೆಯ ಸೂಕ್ಷ್ಮ ಬಿಂದುವೊಂದು ಪ್ರೇಕ್ಷಕರ ಮುಂದೆ ತೆರೆದುಕೊಂಡಂತಾಗಿದೆ. ಅಪ್ಪ- ಮಗಳ ಬಂಧದ ಭಾವಗಳ ಸಾಹಿತ್ಯ ಮತ್ತು ಅದಕ್ಕೆ ಪೂರಕವಾದ ಸಂಗೀತದೊಂದಿಗೆ ಈ ಹಾಡು ಬಿಡುಗಡೆಗೊಂಡಿದೆ.

‘ನೀನೇನೆ ನೀನೇನೆ ನನ್ನೆಲ್ಲ ಆಸೆ, ನನ್ನ ಕನಸೆ ನನ್ನೆಲ್ಲ ಸೊಗಸೆ’ ಎಂಬ ಈ ಹಾಡಿಗೆ ಶಶಾಂಕ್ ಸಾಹಿತ್ಯ ಬರೆದಿದ್ದಾರೆ. ನಕುಲ್ ಅಭಯಂಕರ್ ಸಂಗೀತ ಸಂಯೋಜನೆ ಮಾಡಿ, ಅವರೇ ಹಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅಪ್ಪ-ಮಗಳ ಬಾಂಧವ್ಯವನ್ನು ಸಾರುವ ಒಂದಷ್ಟು ಹಾಡುಗಳು ಈಗಲೂ ಜನಮಾನಸದಲ್ಲಿ ಹಸಿರಾಗಿವೆ. ಸದಾ ನೆನಪಲ್ಲಿಟ್ಟುಕೊಳ್ಳುವ ಈ ಸಾಲಿನ ಹಾಡುಗಳಲ್ಲಿ ‘ಲವ್ ಮಾಕ್ಟೇಲ್ 3’ ಚಿತ್ರದ ಹಾಡು ಕೂಡ ಹಿಟ್ ಲಿಸ್ಟ್ ಸೇರಲಿದೆ. ಅಷ್ಟರ ಮಟ್ಟಿಗೆ ಸಾಂಗ್ ಅನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ‘ಲವ್ ಮಾಕ್ಟೇಲ್’ ಮೊದಲ ಭಾಗದಿಂದಲೂ ಡಾರ್ಲಿಂಗ್ ಕೃಷ್ಣ ಹಾಡುಗಳ ಸೃಷ್ಟಿಗೆ ವಿಶೇಷ ಒತ್ತು ಕೊಟ್ಟಿದ್ದರು. ಮೂರನೇ ಆವೃತ್ತಿಯಲ್ಲಿಯೂ ಅದು ಮುಂದುವರೆದಂತಿದೆ.

 

View this post on Instagram

 

A post shared by Anand Audio (@aanandaaudio)

‘ಲವ್ ಮಾಕ್ಟೇಲ್’ ಚಿತ್ರದ ಈ ಹಿಂದಿನ ಸರಣಿಗಿಂತಲೂ ಮೂರನೇ ಭಾಗ ವಿಶೇಷವಾಗಿರಲಿದೆ ಎಂಬ ಸೂಚನೆಯನ್ನು ಡಾರ್ಲಿಂಗ್ ಕೃಷ್ಣ ರವಾನಿಸಿದ್ದಾರೆ. ಹಾಡಿನ ಮೂಲಕ ಅಪ್ಪ- ಮಗಳ ಬಾಂಧವ್ಯದ ಭಾವುಕ ಕಥೆ ಇದೆ ಎಂಬ ಸುಳಿವು ನೀಡಿದ್ದಾರೆ. ಇದೀಗ ಬಿಡುಗಡೆಗೊಂಡಿರುವ ಹಾಡಿನ ಮೂಲಕ ಅದು ಋಜುವಾತಾಗಿದೆ. ಕ್ರಿಸ್‌ಮಿ ಬ್ಯಾನರಿನಡಿಯಲ್ಲಿ ಕೃಷ್ಣ (Darling Krishna) ಮತ್ತು ಮಿಲನಾ ನಾಗರಾಜ್ (Milana Nagaraj) ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ರಚೆಲ್ ಡೇವಿಡ್, ಅಭಿಲಾಶ್ ದಳಪತಿ ಮುಂತಾದವರ ತಾರಾಗಣವಿರುವ ಈ ಚಿತ್ರ ಏಪ್ರಿಲ್ 10ರಂದು ರಾಜ್ಯಾದ್ಯಂತ ತೆರೆಗಾಣಲಿದೆ.

News Desk Sandalwood Times

error: Content is protected !!