ಮಾಂಸಾಹಾರ ಸೇವನೆ ಬಗ್ಗೆ ಡಾಲಿ ಟ್ರೋಲ್- ನನ್ನ ಊಟ, ನನ್ನ ಚಟ, ನನ್ನಿಷ್ಟ ಎಂದ ನಟ
ನಟ ಡಾಲಿ (Daali Dhananjay) ಅವರು ಮಾಂಸಾಹಾರ ಸೇವನೆ ವಿವಾದಕ್ಕೆ ಮೌನ ಮುರಿದಿದ್ದಾರೆ. ಆಹಾರದ ಆಯ್ಕೆ ನನ್ನ ವೈಯಕ್ತಿಕ ಎಂದಿದ್ದಾರೆ. ಸ್ನೇಹಿತನ ಹೋಟೆಲ್‌ಗೆ ಊಟಕ್ಕೆ ಹೋಗಿದ್ದನ್ನು ಜಾತಿ, ಸಮುದಾಯದೊಂದಿಗೆ ತಳುಕು ಹಾಕಿರುವುದು ಬೇಸರ ತಂದಿದೆ. ಚಿತ್ರರಂಗಕ್ಕಾಗಿ ಮಾಡುತ್ತಿರುವ ಕೆಲಸದ ಬಗ್ಗೆ ಚರ್ಚೆಯಾಗಬೇಕು. ನಮ್ಮ ವೈಯಕ್ತಿಕ ವಿಚಾರವಲ್ಲ ಎಂದಿದ್ದಾರೆ.
View this post on Instagram
ತಮ್ಮ ಗೆಳೆಯನ ಹೋಟೆಲ್‌ಗೆ ಹೋಗಿ ಊಟ ಮಾಡಿದ್ದನ್ನು ಇಷ್ಟೊಂದು ದೊಡ್ಡ ಚರ್ಚೆಯಾಗುತ್ತೆ ಎಂದು ಊಹಿಸಿರಲಿಲ್ಲ. ಸಹಜವಾಗಿ ತಮ್ಮ ಸ್ನೇಹಿತನ ಹೋಟೆಲ್‌ಗೆ ಹೋಗಿ ಪ್ರೀತಿಯಿಂದ ಊಟ ಮಾಡಿ ಬಂದಿದ್ದೇನೆ. ನಾನು ಮಾಂಸಾಹಾರಿ ಅಂತ ಹೇಳಿದ್ದರೆ ನಡೆಯುತ್ತಿತ್ತು. ಆದರೆ, ಇದರ ಮಧ್ಯೆ ಜಾತಿಯನ್ನು ಎಳೆದು ತಂದಿದ್ದು ಯಾಕೆ? ಎಂದು ಪ್ರಶ್ನೆ ಮಾಡಿದ್ದಾರೆ. ನಾನು ಎಂದೂ ಲಿಂಗ ಹಾಕಿ ಊಟ ಮಾಡುವುದಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
View this post on Instagram
ನಾನು ಆಗಾಗ ಪಾರ್ಟಿಗಳನ್ನು ಮಾಡುತ್ತೇನೆ. ಈ ಹಿಂದೆ ಸ್ಮೋಕ್ ಮಾಡುತ್ತಿದ್ದೆ, ಈಗ ನಿಲ್ಲಿಸಿದ್ದೇನೆ. ನನಗೆ ಸೀ ಫುಡ್ ಬಹಳ ಇಷ್ಟ. ತಮ್ಮ ಆಹಾರದ ಆಯ್ಕೆ ವೈಯಕ್ತಿಕವಾಗಿದ್ದು, ಅದನ್ನು ಬೇರೆ ಬೇರೆ ಕೋನಗಳಲ್ಲಿ ವಿಶ್ಲೇಷಿಸಿ, ಜಾತಿ ಮತ್ತು ಸಮುದಾಯದ ವಿಷಯಗಳನ್ನು, ಇತರೆ ನಟರನ್ನು ಎಳೆದು ತರುವುದು ಸರಿಯಲ್ಲ. ತಾವು ಊಟ ಮಾಡಿದ ವಿಚಾರವನ್ನೂ ಮಾತನಾಡುತ್ತಾರೆ ಎಂದರೆ ತಪ್ಪಲ್ಲವೇ ಎಂದು ಡಾಲಿ ಗರಂ ಆಗಿದ್ದಾರೆ.
ಈ ವೇಳೆ, ಬಡವರ ಮಕ್ಕಳ ಬೆಳೆಯಬೇಕು ಎಂಬ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ. ಈ ಟ್ರೋಲ್ ಬಗ್ಗೆಯೂ ಮಾತನಾಡಿದ್ದಾರೆ.

