ಪ್ರಜ್ವಲ್ ದೇವರಾಜ್ ರೊಮ್ಯಾನ್ಸ್‌ಗೆ ನಾಚಿ ನೀರಾದ ಮೇಘಾ ಶೆಟ್ಟಿ
ಪ್ರಜ್ವಲ್ ದೇವರಾಜ್, ಮೇಘಾ ಶೆಟ್ಟಿ (Megha Shetty) ನಟನೆಯ ʻಚೀತಾʼ (Cheetah) ಚಿತ್ರದ ರೊಮ್ಯಾಂಟಿಕ್ ಸಾಂಗ್ ಶೂಟಿಂಗ್ ಚಿತ್ರೀಕರಿಸಲಾಗಿದೆ. ವೈಟ್ ಕಲರ್ ಡ್ರೆಸ್‌ನಲ್ಲಿ ಇಬ್ಬರೂ ಮಾದಕವಾಗಿ ಕಾಣಿಸಿಕೊಂಡಿದ್ದಾರೆ.

ಮೊದಲ ಬಾರಿಗೆ ಹೀರೋ ಪ್ರಜ್ವಲ್ (Prajwal Devraj) ಜೊತೆ ಮೇಘಾ ನಟಿಸುತ್ತಿದ್ದು, ಅವರ ಪಾತ್ರಕ್ಕೂ ಸ್ಕೋಪ್ ಇದೆ. ಸದ್ಯ ಅದ್ಧೂರಿಯಾಗಿ ಸಾಂಗ್ ಶೂಟಿಂಗ್ ನೆರವೇರಿದೆ.

ಈ ಸಿನಿಮಾಗೆ ರಾಜ ಕಲೈ ಕುಮಾರ್ ಮೊದಲ ಬಾರಿಗೆ ನಿರ್ದೇಶನ ಮಾಡ್ತಿದ್ದಾರೆ. ಈ ಹಿಂದೆ ಅವರು ನೃತ್ಯ ನಿರ್ದೇಶಕರಾಗಿದ್ದರು. ಈಗ ನಿರ್ದೇಶನದ ಕ್ಯಾಪ್ ತೊಟ್ಟಿದ್ದಾರೆ.

ರಾಜ ಕಲೈ ಅವರು ಕಳೆದ 23 ವರ್ಷಗಳಿಂದ ನೃತ್ಯ ನಿರ್ದೇಶಕರಾಗಿ, ಡ್ಯಾನ್ಸ್ ಮಾಸ್ಟರ್ ಆಗಿ ಗುರುತಿಸಿಕೊಂಡಿದ್ದಾರೆ.

ಇನ್ನೂ ಮಾರುಕಟ್ಟೆಯಲ್ಲಿ ಹುಟ್ಟಿ ಬೆಳೆದ ಹುಡುಗನೊಬ್ಬನ ಕಥೆಯನ್ನು ಸಿನಿಮಾ ರೂಪದಲ್ಲಿ ತೋರಿಸಲು ರಾಜ ಕಲೈ ಹೊರಟಿದ್ದಾರೆ.

ಮಾರುಕಟ್ಟೆಯಲ್ಲಿ ನಡೆಯುವ ಅವ್ಯವಹಾರಗಳ ವಿರುದ್ಧ ಹೋರಾಟ ಮಾಡುವ ಹೋರಾಟಗಾರನ ಪಾತ್ರದಲ್ಲಿ ಪ್ರಜ್ವಲ್ ಬಣ್ಣ ಹಚ್ಚಿದ್ದಾರೆ.

ಪ್ರಜ್ವಲ್, ಮೇಘಾ ಜೊತೆ ಶೃತಿ ಹರಿಹರನ್, ಶಿವರಾಜ್ ಕೆ.ಆರ್ ಪೇಟೆ, ರಂಗಾಯಣ ರಘು, ಟೆನ್ನಿಸ್ ಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

