ಮಗುವನ್ನು ಎದೆಗವಚಿಕೊಂಡು ಆಸ್ಪತ್ರೆಗೆ ಬಂದ ರಾಮ್ ಚರಣ್- ಫ್ಯಾನ್ಸ್ ವರ್ತನೆಗೆ ನಟ‌ ಶಾಕ್

ಮಗುವನ್ನು ಎದೆಗವಚಿಕೊಂಡು ಆಸ್ಪತ್ರೆಗೆ ಬಂದ ರಾಮ್ ಚರಣ್- ಫ್ಯಾನ್ಸ್ ವರ್ತನೆಗೆ ನಟ‌ ಶಾಕ್

ಟ ರಾಮ್ ಚರಣ್ (Ram Charan) ಮತ್ತು ಉಪಾಸನಾ (Upasana) ದಂಪತಿ ಅವಳಿ‌ ಮಕ್ಕಳ ಪಾಲಕರಾಗಿದ್ದಾರೆ. ಈ ಗುಡ್ ನ್ಯೂಸ್ ನಡುವೆ ಅವರು ನಲುಗಿ ಹೋಗುವ ಘಟನೆಯೊಂದು ನಡೆದಿದೆ.

ಪ್ಯಾನ್ ಇಂಡಿಯಾ ಸ್ಟಾರ್ ನಟ ರಾಮ್ ಚರಣ್ ಕೈಯಲ್ಲಿ 2 ವರ್ಷದ ಮಗಳನ್ನು ಎತ್ತಿಕೊಂಡು ಬರುವಾಗ ಆಸ್ಪತ್ರೆ ಬಳಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಇದನ್ನು ನೋಡಿ ರಾಮ್ ಚರಣ್ ಗಾಬರಿ ಆಗಿದ್ದಾರೆ. ರಾಮ್ ಚರಣ್ ಅವರ ಭದ್ರತಾ ಸಿಬ್ಬಂದಿ, ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಅಭಿಮಾನಿಗಳನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ.

ಅಭಿಮಾನಿಗಳ ಕಿರುಚಾಟ, ತಳ್ಳಾಟದ ಮಧ್ಯೆಯೇ ಅವರು ಮಗುವಿನೊಂದಿಗೆ ಆಸ್ಪತ್ರೆ ಒಳಗೆ ಬಂದಿದ್ದಾರೆ. ರಾಮ್ ಚರಣ್ ಒಬ್ಬರೇ ಇದ್ದಿದ್ದರೆ ಇದನ್ನು ಹೇಗೋ ನಿಭಾಯಿಸುತ್ತಿದ್ದರು. ಮಗುವನ್ನು ಕರೆದುಕೊಂಡು ಒಳ ಹೋಗುವ ವೇಳೆಗೆ ಅವರು ಸುಸ್ತಾಗಿ ಹೋಗಿದ್ದಾರೆ. ಈ ಸನ್ನಿವೇಶ ಫ್ಯಾನ್ಸ್ ಗೆ ಆತಂಕವುಂಟು‌ ಮಾಡಿದೆ.

News Desk Sandalwood Times

error: Content is protected !!