Peddi ಗ್ಲಿಂಪ್ಸ್‌ಗೆ ಶಿವಣ್ಣ ವಾಯ್ಸ್- ರಾಮ್ ಚರಣ್ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಗುಡ್ ನ್ಯೂಸ್
ರಾಮ್ ಚರಣ್ ಬರ್ತಡೇಗೆ ‘ಪೆದ್ದಿʼ ಗ್ಲಿಂಪ್ಸ್ ರಿಲೀಸ್- ಪೈಲ್ವಾನ್ ಅವತಾರದಲ್ಲಿ ಗ್ಲೋಬಲ್ ಸ್ಟಾರ್
ಗ್ಲೋಬಲ್ ಸ್ಟಾರ್ ರಾಮ್ ಚರಣ್ ನಟಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ಪೆದ್ದಿ. ಈ ಚಿತ್ರದ ಸ್ಪೆಷಲ್ ಗ್ಲಿಂಪ್ಸ್ ಇಂದು ರಾಮ್ ಚರಣ್ ಬರ್ತಡೇ ವಿಶೇಷವಾಗಿ ಬಿಡುಗಡೆ ಮಾಡಲಾಗಿದೆ. ದೇಹ ಹುರಿಗೊಳಿಸಿ ಖಡಕ್ ಪೈಲ್ವಾನ್ ಅವತಾರದಲ್ಲಿ ರಾಮ್ ಚರಣ್ (Ram Charan) ಕಾಣಿಸಿಕೊಂಡಿದ್ದಾರೆ. ಟೀಸರ್ ನಲ್ಲಿ ಅವರು ತಮ್ಮ ಭುಜ ಬಲದ ಪರಾಕ್ರಮ ಪ್ರದರ್ಶಿಸಿದ್ದು, ಕನ್ನಡದ ಟೀಸರ್ ಗೆ ಶಿವಣ್ಣ ಧ್ವನಿಯಾಗಿದ್ದಾರೆ. ಕುಸ್ತಿ ಅಂದರೆ ಏನೂ ಅನ್ನೋದನ್ನ ಶಿವಣ್ಣ (Shivarajkumar) ವಿವರಿಸಿದ್ದಾರೆ. ಪೆದ್ದಿ ಪೈಲ್ವಾನ್ ಗೆಟಪ್ ನಲ್ಲಿ ರಾಮ್ ಚರಣ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
View this post on Instagram
‘ಉಪ್ಪೆನ’ ಸಿನಿಮಾವನ್ನು ನಿರ್ದೇಶಿಸಿದ್ದ ಬುಚ್ಚಿ ಬಾಬು ಸನಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಪೆದ್ದಿ ಸಿನಿಮಾದಲ್ಲಿ ರಾಮ್ ಚರಣ್‌ಗೆ ಬಾಲಿವುಡ್ ನಟಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವಕುಮಾರ್ ಸ್ಪೆಷಲ್ ರೋಲ್ ಪ್ಲೇ ಮಾಡಿದ್ದಾರೆ. ಇನ್ನುಳಿದಂತೆ, ಜಗಪತಿ ಬಾಬು, ದಿವೇಂದು ಶರ್ಮಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಪೆದ್ದಿ ಸ್ಪೋರ್ಟ್ ಆಕ್ಷನ್ ಡ್ರಾಮಾ ಸಿನಿಮಾವಾಗಿದ್ದು, ಈ ಚಿತ್ರಕ್ಕೆ ಎ. ಆರ್. ರೆಹಮಾನ್ ಸಂಗೀತ ನಿರ್ದೇಶನ ಮಾಡುತ್ತಿದ್ದು, ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ನಿರ್ಮಾಣ ಮಾಡುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಬ್ಯಾನರ್‌ಗಳು ಚಿತ್ರಕ್ಕೆ ಬೆಂಬಲವಾಗಿ ನಿಂತಿವೆ. ಆರ್. ರತ್ನವೇಲು ಛಾಯಾಗ್ರಹಣ ಮಾಡುತ್ತಿದ್ದು, ಏಪ್ರಿಲ್ 30ಕ್ಕೆ ‘ಪೆದ್ದಿ’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ.

