ದ್ವೇಷಿಸೋರ ನಡುವೆಯೂ ದಾಖಲೆ ಬರೆಯಿತು ವಿರೋಷ್ ಮದುವೆ
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ- ವಿಜಯ್ (Vijay Devarakonda) ಮದುವೆ ಅದ್ಧೂರಿಯಾಗಿ ಜರುಗಿದೆ. ದ್ವೇಷ, ಟೀಕೆಯ ನಡುವೆಯೂ ವಿರೋಷ್ ಜೋಡಿ ಅಪಾರ ಪ್ರೀತಿ ಗಳಿಸಿ ದಾಖಲೆ ಬರೆದಿದೆ. ಹಾಗಾದ್ರೆ ಏನದು ಅಂತೀರಾ? ಇಲ್ಲಿದೆ ಮಾಹಿತಿ.
ರಶ್ಮಿಕಾ, ವಿಜಯ್ ಮದುವೆ ವಿಚಾರದ ಬೆನ್ನಲ್ಲೇ ಅನೇಕರು ತಕರಾರು ತೆಗೆದಿದ್ದರು. ರಕ್ಷಿತ್ ಶೆಟ್ಟಿ ಜೊತೆ ರಶ್ಮಿಕಾ (Rashmika Mandanna) ಮದುವೆ ಮುರಿದು 7 ವರ್ಷಗಳು ಕಳೆದಿವೆ. ಇಬ್ಬರೂ ತಮ್ಮ ಬದುಕಿನಲ್ಲಿ ಮೂವ್ ಆನ್ ಆಗಿದ್ದಾರೆ. ಆದರೆ ಅವರ ಬ್ರೇಕಪ್ ಕಥೆಯನ್ನ ಜನತೆ ಮರೆತ್ತಿಲ್ಲ. ಈಗಲೂ ರಶ್ಮಿಕಾ ಮೇಲೆ ಕಿಡಿಕಾರೋ ಮಂದಿ ಅನೇರಿದ್ದಾರೆ. ಆದರೆ ನಟಿ ಮಾತ್ರ ತಾನು ಆಯ್ತು ತನ್ನ ಕೆಲಸ ಆಯ್ತು ಎಂದು ಸಿನಿಮಾ ಸಕ್ಸಸ್ ಮೂಲಕ ಹೇಟರ್ಸ್‌ಗೆ ಉತ್ತರ ಕೊಟ್ಟಿದ್ದಾರೆ.

ವಿಜಯ್ ಜೊತೆಗಿನ ಮದುವೆ ಅನೇಕರ ಕೋಪಕ್ಕೆ ಕಾರಣವಾಗಿದ್ದು, ದ್ವೇಷದ ಕಾಮೆಂಟ್‌ಗಳು ಕೂಡ ಹರಿದು ಬರುತ್ತಿದೆ. ಹೀಗಿದ್ರೂ ಕೂಡ ಅವರ ಮದುವೆ ಪೋಸ್ಟ್ ದಾಖಲೆ ಬರೆದಿದೆ. ರಶ್ಮಿಕಾ ಪೇಜ್‌ನಲ್ಲಿ ಮದುವೆ ಪೋಸ್ಟ್ 24 ಮಿಲಿಯನ್, ವಿಜಯ್ ಪೇಜ್‌ನಲ್ಲಿ 19.2 ಮಿಲಿಯನ್ ಲೈಕ್ಸ್ ಸಿಕ್ಕಿದೆ. ಕೋಟಿಗಟ್ಟಲೇ ಮಂದಿ ಈ ಜೋಡಿಗೆ ಶುಭಾಶಯ ತಿಳಿಸಿದ್ದಾರೆ.
View this post on Instagram
ಇದು ಈ ದಂಪತಿ ಮೇಲೆ ಅಭಿಮಾನಿಗಳಿಗೆ ಇರೋ ಪ್ರೀತಿಯನ್ನು ತೋರಿಸುತ್ತದೆ. ಒಂದು ವರ್ಗ ಹಬ್ಬಿಸುತ್ತಿರುವ ದ್ವೇಷದ ಮಧ್ಯೆಯೂ ರಶ್ಮಿಕಾ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಪ್ರೀತಿ ಸಿಕ್ಕಿದೆ. 24 ಗಂಟೆಯಲ್ಲಿ ಅತೀ ಹೆಚ್ಚು ಲೈಕ್ಸ್ ಗಿಟ್ಟಿಸಿಕೊಂಡಿರೋ ಜೋಡಿ ಆಗಿದ್ದಾರೆ.

