ರಶ್ಮಿಕಾ, ದೇವರಕೊಂಡ ಮದುವೆ- ಉದಯಪುರಗೆ ಬಂದಿಳಿದ ಆಶಿಕಾ ರಂಗನಾಥ್‌

ರಶ್ಮಿಕಾ, ದೇವರಕೊಂಡ ಮದುವೆ- ಉದಯಪುರಗೆ ಬಂದಿಳಿದ ಆಶಿಕಾ ರಂಗನಾಥ್‌

ನ್ಯಾಷನಲ್ ಕ್ರಶ್‌ ರಶ್ಮಿಕಾ ಮಂದಣ್ಣ, ವಿಜಯ್‌ ದೇವರಕೊಂಡ (Vijay Devarakonda) ಮದುವೆಗೆ ಕೌಂಟ್‌ಡೌನ್‌ ಶುರುವಾಗಿದೆ. ಫೆ.26ರಂದು ನಡೆಯಲಿರುವ ಈ ಮದುವೆಗೆ 100 ಮಂದಿ ಗೆಸ್ಟ್‌ಗೆ ಆಹ್ವಾನ ನೀಡಲಾಗಿದೆ. ಅದರಲ್ಲಿ ಕನ್ನಡತಿ ಆಶಿಕಾ ರಂಗನಾಥ್‌ಗೂ ಆಮಂತ್ರಣ ನೀಡಿದ್ದು, ಅವರು ಇದೀಗ ಉದಯಪುರಗೆ ಬಂದಿಳಿದಿದ್ದಾರೆ. ವಿರೋಷ್ (VIROSH) ಮದುವೆ ಸಂಭ್ರಮದಲ್ಲಿ ಭಾಗಿಯಾಗ್ತಿದ್ದಾರೆ.

ರಶ್ಮಿಕಾ (Rashmika Mandanna) ಮದುವೆಗೆ ಭಾಗಿಯಾಗಲು ಆಶಿಕಾ ರಂಗನಾಥ್‌ (Ashika Ranganath) ಉದಯಪುರಗೆ ಬಂದಿಳಿದಿದ್ದಾರೆ. ಹೊಸ ಜೋಡಿಗೆ ಶುಭಕೋರಲು ತೆರಳಿದ್ದಾರೆ. ರಶ್ಮಿಕಾ- ಆಶಿಕಾ ಹಲವು ವರ್ಷಗಳಿಂದ ಪರಿಚಿತರು. ಇಬ್ಬರೂ ಕನ್ನಡ ಚಿತ್ರದಿಂದ ಸಿನಿ ಕೆರಿಯರ್‌ ಶುರು ಮಾಡಿದವರು. ಈಗ ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ.

ಇಂದಿಗೂ ರಶ್ಮಿಕಾ ಬೆಂಗಳೂರಿನಲ್ಲಿರೋ ಸ್ನೇಹಿತರ ಒಡನಾಟ ಹೊಂದಿದ್ದಾರೆ. ತಮ್ಮ ಮದುವೆ ಸಂಭ್ರಮಕ್ಕೆ ಸಾಕ್ಷಿಯಾಗಲು ಎಲ್ಲರನ್ನೂ ಮರಿಯದೇ ಆಹ್ವಾನ ನೀಡಿದ್ದಾರೆ.ಇದು ಕನ್ನಡಿಗರಿಗೂ ಖುಷಿ ಕೊಟ್ಟಿದೆ.

ಈಗಾಗಲೇ ಆಶಿಕಾ ಜೊತೆ ತೆಲುಗು ಡೈರೆಕ್ಟರ್‌ ರಾಹುಲ್‌, ಇಶಾ ರೆಬ್ಬಾ, ಸೆಲೆಬ್ರಿಟಿ ಸ್ಟೈಲೀಸ್ಟ್‌ ಶ್ರಾವ್ಯ ವರ್ಮಾ ಸೇರಿದಂತೆ ಮದುವೆ ಲೋಕೇಷನ್‌ ಉದಯಪುರಗೆ ಬಂದಿಳಿದಿದ್ದಾರೆ.

News Desk Sandalwood Times

error: Content is protected !!