ಬಿಡಿಗಾಸು ಬೇಡ ಎಂದ ಕನ್ನಡದ ʻಬಿಂದಾಸ್ʼ ನಟಿ- ಡಿವೋರ್ಸ್ ಪಡೆದ Hansika Motwani
ಕನ್ನಡದ ʻಬಿಂದಾಸ್ʼ ನಟಿ ಹನ್ಸಿಕಾ ಮೋಟ್ವಾನಿ (Hansika Motwani) ಅವರ 4 ವರ್ಷಗಳ ದಾಂಪತ್ಯ ಜೀವನ ಅಂತ್ಯವಾಗಿದೆ. ಪತಿ ಸೊಹೈಲ್ ಖತುರಿಯಾ ಕಡೆಯಿಂದ ಜೀವನಾಂಶ ಪಡೆಯದೇ ನಟಿ ಡಿವೋರ್ಸ್ ಪಡೆದಿದ್ದಾರೆ.

ಕಳೆದ ಒಂದೂವರೆ ವರ್ಷದಿಂದ ನಟಿ ಹನ್ಸಿಕಾ ದಾಂಪತ್ಯದ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ಈ ಜೋಡಿ ದೂರವಾಗಿದೇ ಎಂದು ಹೇಳಲಾಗಿತ್ತು. ಆದರೆ ಈ ಬಗ್ಗೆ ನಟಿ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಇಬ್ಬರ ಡಿವೋರ್ಸ್ ಬಗ್ಗೆ ವಿಚಾರ ಖಾತ್ರಿಯಾಗಿದೆ. ಮುಂಬೈನ ಬಾಂದ್ರಾ ಫ್ಯಾಮಿಲಿ ಕೋರ್ಟ್ ಹನ್ಸಿಕಾ ಮತ್ತು ಉದ್ಯಮಿ ಸೊಹೈಲ್ (Sohael Khaturiya) ಅವರಿಗೆ ಡಿವೋರ್ಸ್ (Divorce) ಮಂಜೂರು ಮಾಡಿದೆ.
ಸೊಹೈಲ್ ಜತೆ ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಭಿನ್ನಾಭಿಪ್ರಾಯ ಮೂಡಿದೆ. ಕುಟುಂಬಸ್ಥರು, ಸ್ನೇಹಿತರು ಇಬ್ಬರ ಸಂಬಂಧವನ್ನು ಅದೆಷ್ಟೇ ಸರಿ ಮಾಡಲು ಪ್ರಯತ್ನಿಸಿದ್ದರು. ಇಬ್ಬರ ದಾಂಪತ್ಯ ಸರಿಹೋಗಲೇ ಇಲ್ಲ. ಈ ಹಿನ್ನೆಲೆ 2024ರ ಜುಲೈ 2ರಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈಗ ಕಾನೂನುಬದ್ಧವಾಗಿ ಬೇರ್ಪಟ್ಟಿದ್ದಾರೆ. ಈ ದಂಪತಿಗೆ ಮಕ್ಕಳಿಲ್ಲ. ಪರಸ್ಪರ ಯಾವುದೇ ಜೀವನಾಂಶ ನೀರೀಕ್ಷೆ ಮಾಡಿಲ್ಲ.

ನಟಿ ಹನ್ಸಿಕಾಗೆ ಇದು ಮೊದಲ ಮದುವೆಯಾಗಿತ್ತು. ಸೊಹೈಲ್‌ಗೆ ಈ ಹಿಂದೆ ರಿಂಕಿ (Rinki) ಎಂಬುವವರ ಜೊತೆ ಮದುವೆ ಆಗಿತ್ತು. ಇವರ ಮದುವೆಗೆ ಹನ್ಸಿಕಾ ಕೂಡ ಭಾಗಯಾಗಿದ್ರು. ಗೆಳತಿ ರಿಂಕಿ ಪತಿಯನ್ನೇ ಹನ್ಸಿಕಾ 2022ರಲ್ಲಿ ಜೈಪುರ ಅರಮನೆಯಲ್ಲಿ ಅದ್ಧೂರಿಯಾಗಿ ಮದುವೆಯಾದ್ದರು. ಸೊಹೈಲ್ ಮೊದಲ ಮದುವೆ ಮುರಿಯಲು ನಟಿಯೇ ಕಾರಣ ಎಂದು ದೂರಲಾಗಿತ್ತು. ಈಗ 2ನೇ ಮದುವೆಯೂ ಮುರಿದು ಬಿದ್ದಿದೆ. ಪತಿ ನೀಡೋ ಜೀವನಾಂಶ ತಮಗೆ ಬೇಡ ಎಂದು ಶಾಂತಿಯುತವಾಗಿ ದಾಂಪತ್ಯಕ್ಕೆ ನಟಿ ಫುಲ್ ಸ್ಟಾಪ್ ಇಟ್ಟಿದ್ದಾರೆ.

