ಪತಿ ಯಶ್‌ಗೆ ರಾಧಿಕಾ ಪಂಡಿತ್ Valentine’s Day ಲವ್ಲಿ ವಿಶ್

ಪತಿ ಯಶ್‌ಗೆ ರಾಧಿಕಾ ಪಂಡಿತ್ Valentine’s Day ಲವ್ಲಿ ವಿಶ್

ನ್ನಡ ಚಿತ್ರರಂಗದ ದಿ ಬೆಸ್ಟ್‌ ಜೋಡಿಗಳಲ್ಲಿ ಯಶ್‌ (Yash) ಮತ್ತು ರಾಧಿಕಾ ಪಂಡಿತ್‌ (Radhika Pandit) ದಂಪತಿ ಕೂಡ ಒಬ್ಬರು. ಇಂದು ಪ್ರೇಮಿಗಳ ದಿನದ ವಿಶೇಷವಾಗಿ ಪತಿಗೆ ರಾಧಿಕಾ ಕ್ಯೂಟ್‌ ಆಗಿ ವಿಶ್ ಮಾಡಿದ್ದಾರೆ.

ಪ್ರೇಮಿಗಳ ದಿನಕ್ಕೆ ಪತಿ ಯಶ್‌ಗೆ ರಾಧಿಕಾ ಪಂಡಿತ್‌ ವಿಶೇಷವಾಗಿ ವಿಶ್ ಮಾಡಿ, ಯಾರೂ ನೋಡುತ್ತಿಲ್ಲವೆಂಬಂತೆ ನಾನು ನೃತ್ಯ ಮಾಡಲು ಸಾಧ್ಯವಾಗುವಂತೆ ಮಾಡಿದ ವ್ಯಕ್ತಿ. ನಿನ್ನ ಕಣ್ಣುಗಳಲ್ಲಿ ಕಾಣಿಸುವ ದಣಿವು ನನಗೆ ಕಾಣುತ್ತದೆ. ಇನ್ನಾರಿಗೂ ಗೊತ್ತಾಗದ ನಿನ್ನ ತ್ಯಾಗಗಳು ನನಗೆ ತಿಳಿದಿವೆ. ದೂರು ಹೇಳದೆ ನೀನು ಹೊತ್ತುಕೊಂಡು ನಡೆಯುವ ಆ ದೀರ್ಘ ದಿನಗಳ ಭಾರವನ್ನು ನಾನು ಅನುಭವಿಸುತ್ತೇನೆ. ಇದು ನಮಗಾಗಿ ಎನ್ನುವುದು ನನಗೆ ಗೊತ್ತು. ಪ್ರತಿ ದಿನವೂ ನನ್ನನ್ನೇ ಆಯ್ಕೆ ಮಾಡಿಕೊಳ್ಳುವುದಕ್ಕಾಗಿ ಧನ್ಯವಾದಗಳು. ಹ್ಯಾಪಿ ವ್ಯಾಲೆಂಟೈನ್ಸ್ ಡೇ, ನನ್ನ ಜೊತೆ ಎಂದೆಂದಿಗೂ ಇರುವವನೇ ಎಂದು ರಾಧಿಕಾ ಭಾವನಾತ್ಮಕ ಪೋಸ್ಟೊಂದನ್ನು ಹಾಕಿದ್ದಾರೆ.

 

View this post on Instagram

 

A post shared by Radhika Pandit (@iamradhikapandit)

ʻನಂದಗೋಕುಲʼ ಸೀರಿಯಲ್‌ ಮೂಲಕ ಪರಿಚಯವಾದ್ರು ರಾಧಿಕಾ ಮತ್ತು ಯಶ್.‌ ಬಳಿಕ ಮೊಗ್ಗಿನ ಮನಸ್ಸು, ಡ್ರಾಮಾ ಸೇರಿದಂತೆ ಕೆಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ರು. ಈ ಸ್ನೇಹವೇ ಪ್ರೀತಿಗೆ ಮುನ್ನುಡಿ ಬರೆಯಿತು. ಹಲವು ವರ್ಷಗಳು ಗುಟ್ಟಾಗಿ ಡೇಟಿಂಗ್‌ ಮಾಡಿದ್ದ ಜೋಡಿ 2016ರಲ್ಲಿ ಮದುವೆಯಾದರು.

ಈ ಜೋಡಿಯ ಸುಂದರ ದಾಂಪತ್ಯಕ್ಕೆ ಇಬ್ಬರೂ ಮಕ್ಕಳು ಸಾಕ್ಷಿಯಾಗಿದ್ದಾರೆ. ಮದುವೆಯ ಬಳಿಕ ಯಶ್‌ ಪಕ್ಕಾ ಫ್ಯಾಮಿಲಿ ಮ್ಯಾನ್‌ ಆಗಿದ್ದಾರೆ.

News Desk Sandalwood Times

error: Content is protected !!