‘Cocktail 2’ ಚಿತ್ರದ ರಿಲೀಸ್‌ಗೂ ಮುನ್ನ ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣಗೆ ಬಿಗ್ ಆಫರ್
ಬಾಲಿವುಡ್‌ನಲ್ಲಿ ಕನ್ನಡತಿಯ ಹವಾ ಜೋರಾಗಿದೆ. ಶಾಹಿದ್ ಕಪೂರ್ (Shahid Kapoor) ಜೊತೆ ಮತ್ತೊಮ್ಮೆ ನಾಯಕಿಯಾಗಿ ನಟಿಸೋದಕ್ಕೆ ಕೊಡಗಿನ ಬ್ಯೂಟಿ ರಶ್ಮಿಕಾ ಮಂದಣ್ಣಗೆ (Rashmika Mandanna) ಬುಲಾವ್ ಬಂದಿದೆ.

ಇತ್ತೀಚೆಗಷ್ಟೇ ಶಾಹಿದ್ ಜೊತೆಗಿನ ‘ಕಾಕ್‌ಟೈಲ್ 2’ ಚಿತ್ರವನ್ನು (Cocktail 2) ನಟಿ ಮುಗಿಸಿಕೊಟ್ಟಿದ್ದಾರೆ. ಈ ಚಿತ್ರವು ಕೂಡ ಲವ್ ಸ್ಟೋರಿಯನ್ನು ಒಳಗೊಂಡಿದೆ. ಶಾಹಿದ್ ಕಪೂರ್, ರಶ್ಮಿಕಾ, ಕೃತಿ ಸನೋನ್ ಜೊತೆಯಾಗಿ ನಟಿಸಿದ್ದಾರೆ. ಈ ಬೆನ್ನಲ್ಲೇ ಮತ್ತೊಂದು ಸಿನಿಮಾ ಶಾಹಿದ್ ಜೊತೆ ನಟಿಸುವ ಚಾನ್ಸ್ ರಶ್ಮಿಕಾಗೆ ಸಿಕ್ಕಿದೆ.

ʻಬದಾಯಿ ಹೋ’, ‘ಮೈದಾನ್’ ಚಿತ್ರದ ನಿರ್ದೇಶಕ ರವಿಂದ್ರನಾಥ್ ಶರ್ಮಾ ಅವರು ಶಾಹಿದ್, ರಶ್ಮಿಕಾ ಡೈರೆಕ್ಷನ್ ಮಾಡಲು ಸಜ್ಜಾಗಿದ್ದಾರೆ. ಈ ಬಾರಿ ರೊಮ್ಯಾನ್ಸ್ ಕಮ್ ಕಾಮಿಡಿ ಕಂಟೆಂಟ್ ತೋರಿಸಲು ಪ್ಲ್ಯಾನ್ ಮಾಡಲಾಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಒಂದೇ ಆಗಬೇಕಿದೆ.
ದೇವರಕೊಂಡ ಜೊತೆಗಿನ ಮದುವೆ ತಯಾರಿ ನಡುವೆ ಪುಷ್ಪ 3, ಅನಿಮಲ್ ಪಾರ್ಕ್, ಅಲ್ಲು ಅರ್ಜುನ್ ಜೊತೆಗಿನ ಹೊಸ ಸಿನಿಮಾ, ವಿಜಯ್ ನಟನೆಯ ʻರಣಬಾಲಿ’ ಚಿತ್ರಗಳು ರಶ್ಮಿಕಾ ಕೈಯಲ್ಲಿದೆ.

