Rashmika Mandanna ಹಳದಿ ಶಾಸ್ತ್ರದ ಸಂಭ್ರಮ- ಫೋಟೋ ಹಂಚಿಕೊಂಡ ಚುಟು ಚುಟು ಬೆಡಗಿ

Rashmika Mandanna ಹಳದಿ ಶಾಸ್ತ್ರದ ಸಂಭ್ರಮ- ಫೋಟೋ ಹಂಚಿಕೊಂಡ ಚುಟು ಚುಟು ಬೆಡಗಿ

ವಿಜಯ್‌ ದೇವರಕೊಂಡ- ರಶ್ಮಿಕಾ ಮಂದಣ್ಣ (Rashmika Mandanna) ಮದುವೆಯ ವಿವಾಹಪೂರ್ವ ಕಾರ್ಯಕ್ರಮ ಅದ್ಧೂರಿಯಾಗಿ ಜರುಗುತ್ತಿದೆ. ಇಂದು (ಫೆ.25) ಹಳದಿ ಶಾಸ್ತ್ರ ನೆರವೇರಿದ್ದು, ನಟಿ ಆಶಿಕಾ ರಂಗನಾಥ್‌ ಕೂಡ ಸಂಭ್ರಮಿಸಿದ್ದಾರೆ. ಈ ಕುರಿತ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ.

ಹಳದಿ ಶಾಸ್ತ್ರದ ಫೋಟೋ ಶೇರ್‌ ಮಾಡಿ, ಇದು ಹಳದಿಯೋ ಹೋಳಿಯೋ ಎಂದು ನಟಿ ಸ್ಟೋರಿಯಲ್ಲಿ ಅಡಿಬರಹ ನೀಡಿದ್ದಾರೆ. ಗೆಳತಿ ಮದುವೆ ಸಂಭ್ರಮದಲ್ಲಿ ಆಶಿಕಾ ಹಳದಿ ಸೀರೆಯುಟ್ಟು ಮಸ್ತ್‌ ಆಗಿ ಮಿಂಚಿದ್ದಾರೆ.

ರಶ್ಮಿಕಾ- ಆಶಿಕಾ ಹಲವು ವರ್ಷಗಳಿಂದ ಪರಿಚಿತರು. ಹಾಗಾಗಿಯೇ ಫೆ.24ರಂದೇ ಉದಯಪುರಗೆ ನಟಿ ಆಗಮಿಸಿದ್ದಾರೆ. ಇನ್ನೂ ಇಬ್ಬರೂ ಕನ್ನಡ ಚಿತ್ರದಿಂದ ಸಿನಿ ಕೆರಿಯರ್‌ ಶುರು ಮಾಡಿದವರು. ಈಗ ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ.

ಇಂದಿಗೂ ರಶ್ಮಿಕಾ ಬೆಂಗಳೂರಿನಲ್ಲಿರೋ ಸ್ನೇಹಿತರ ಒಡನಾಟ ಹೊಂದಿದ್ದಾರೆ. ತಮ್ಮ ಮದುವೆ ಸಂಭ್ರಮಕ್ಕೆ ಸಾಕ್ಷಿಯಾಗಲು ಎಲ್ಲರನ್ನೂ ಮರಿಯದೇ ಆಹ್ವಾನ ನೀಡಿದ್ದಾರೆ. ಇದು ಕನ್ನಡಿಗರಿಗೂ ಖುಷಿ ಕೊಟ್ಟಿದೆ.

ಈಗಾಗಲೇ ಆಶಿಕಾ ಜೊತೆ ತೆಲುಗು ಡೈರೆಕ್ಟರ್‌ ರಾಹುಲ್‌, ಇಶಾ ರೆಬ್ಬಾ, ಸೆಲೆಬ್ರಿಟಿ ಸ್ಟೈಲೀಸ್ಟ್‌ ಶ್ರಾವ್ಯ ವರ್ಮಾ ಸೇರಿದಂತೆ ಮದುವೆ ಲೋಕೇಷನ್‌ ಉದಯಪುರಗೆ ಬಂದಿಳಿದಿದ್ದಾರೆ.

News Desk Sandalwood Times

error: Content is protected !!