‘ಅಶ್ವಮೇಧ’ ಚಿತ್ರದ ಸಂಗೀತ ನಿರ್ದೇಶಕ ಎಸ್‌ಪಿ ವೆಂಕಟೇಶ್ ನಿಧನ

‘ಅಶ್ವಮೇಧ’ ಚಿತ್ರದ ಸಂಗೀತ ನಿರ್ದೇಶಕ ಎಸ್‌ಪಿ ವೆಂಕಟೇಶ್ ನಿಧನ

‘ಅಶ್ವಮೇಧ’ ಚಿತ್ರದಲ್ಲಿನ ‘ಹೃದಯ ಸಮುದ್ರ ಕಲಕಿ’ ಹಾಡು ಸಂಗೀತ ನಿರ್ದೇಶಕ ಮಾಡಿದ್ದ ಎಸ್‌ಪಿ ವೆಂಕಟೇಶ್ ಅವರು ಫೆ.3ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ವೆಂಕಟೇಶ್ ಅವರು ಚೆನ್ನೈನ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಸಂಗೀತ ನಿರ್ದೇಶಕನ ನಿಧನಕ್ಕೆ ಸಿನಿಮಾ ತಾರೆಯರು ಮತ್ತು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಅಶ್ವಮೇಧ, ಪ್ರೇಮಯುದ್ಧ, ಶರವೇಗ, ಸುಂದರಕಾಂಡ, ಮೇಘ ಮಂದಾರ ಸೇರಿದಂತೆ ಹಲವಾರು ಕನ್ನಡದ ಸಿನಿಮಾಗಳಿಗೆ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಕನ್ನಡದ ಜೊತೆ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಕೂಡ ಅವರು ಕೆಲಸ ಮಾಡಿದ್ದಾರೆ.

News Desk Sandalwood Times

error: Content is protected !!