BBK 12ರ ಜಾಹ್ನವಿ ನಟನೆಯ ʻಯುವ ಸರ್ಕಾರ್ʼ ಚಿತ್ರದ ಟೀಸರ್ ಔಟ್
ʻಬಿಗ್ ಬಾಸ್ʼ (BBK 12) ಖ್ಯಾತಿಯ ಜಾಹ್ನವಿ (Jhanvi) ಅವರು ‘ಯುವ ಸರ್ಕಾರ್’ ಚಿತ್ರದ ಮೂಲಕ ಬರುತ್ತಿದ್ದಾರೆ. ವೀರೆನ್‌ಗೆ ಜೋಡಿಯಾಗಿ ನಟಿಸಿರುವ ಜಾಹ್ನವಿ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಈ ಈವೆಂಟ್‌ನಲ್ಲಿ ʻಬಿಗ್ ಬಾಸ್ʼ ಖ್ಯಾತಿಯ ಅಶ್ವಿನಿ ಗೌಡ (Ashwini Gowda) ಭಾಗಿಯಾಗಿ ತಂಡಕ್ಕೆ ಶುಭಕೋರಿದ್ದಾರೆ.

ನಿರ್ಮಾಪಕಿ ಪಾರ್ವತಮ್ಮ ರಾಜ್‌ಮಾರ್ ಅವರ ತಂಗಿಯ ಪುತ್ರ ಸಂತೋಷ್ ಕುಮಾರ್ (Santhosh Kumar) ಅವರು ʻಯುವ ಸರ್ಕಾರ್ʼ ಚಿತ್ರದ ನಿರ್ದೇಶನದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡ್ತಿದ್ದಾರೆ. ಈಗಾಗಲೇ ಹೀರೋ ವೀರೆನ್ ಕೇಶವ್, ʻಬಿಗ್ ಬಾಸ್ʼ ಖ್ಯಾತಿಯ ಜಾಹ್ನವಿ ನಟಿಸಿರುವ ಈ ಸಿನಿಮಾದ ಟೀಸರ್ ಅನ್ನು ನೋಡಿ ಶಿವಣ್ಣ (Shivarajkumar) ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

ತಾಯಿ ಮಗನ ಮಧ್ಯೆ ನಡೆಯುವ ಎಮೋಷನಲ್ ಕಥೆಯಿದು. ತಮಿಳಲ್ಲಿ ಯುವನ್ ರಾಬಿನ್ ಹುಡ್, ಹಿಂದಿಯಲ್ಲಿ ಅದೇ ಯುವ ಸರ್ಕಾರ್ ಎಂದು ಹೆಸರಿಟ್ಟಿದ್ದಾರೆ. ತಾಯಿ ತನ್ನ ಮಗನನ್ನು ಗಾಂಧಿಯ ಥರ ಬೆಳೆಸುತ್ತಾಳೆ, ಆದರೆ ಆ ಮಗ ಯಾಕೆ ರಾಬಿನ್ ಹುಡ್ ರೀತಿ ಆಗ್ತಾನೆ ಅನ್ನೋದೇ ಈ ಸಿನಿಮಾ ಕಥೆ. ಆ ರಾಬಿನ್ ಹುಡ್ ಬಡವರಿಗೆ ಸಹಾಯ ಮಾಡ್ತಿದ್ದನು. ಈ ಕಥೆಯನ್ನು ನೇರವಾಗಿ ಮೂರು ಭಾಷೆಯಲ್ಲಿ ಚಿತ್ರೀಕರಿಸಿದ್ದಾರೆ.

ಅಸಹಾಯಕರಿಗೆ ಸಹಾಯ ಮಾಡುವುದೇ ಆತನ ವ್ಯಕ್ತಿತ್ವ. ಆತನ ತಂದೆ ಒಬ್ಬ ದರೋಡೆಕೋರ, ಆದರೆ ತಾಯಿ ಆತನನ್ನು ಗಾಂಧಿ ಥರ ಬೆಳೆಸ್ತಾಳೆ. ಆದರೆ ಆತ ಈ ಕಲಿಯುಗದಲ್ಲಿ ನಾನು ಗಾಂಧಿ ಥರ ಇರಲಿಕ್ಕಾಗಲ್ಲ ಎಂದು ಒಳ್ಳೆಯ ಕೆಲಸ ಮಾಡ್ತಾ ಹೋಗ್ತಾನೆ. ಮಧುವಂತಿ ಅವರ ಅಡ್ವೋಕೇಟ್ ಪಾತ್ರ ಮಾಡಿದ್ದಾರೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಚಿತ್ರದಲ್ಲಿ 5 ಹಾಡುಗಳಿದ್ದು, 4 ಫೈಟ್‌ಗಳಿವೆ.

ಈ ಸಿನಿಮಾದಲ್ಲಿ ವೀರೆನ್ ಕೇಶವ್, ಜಾಹ್ನವಿ, ಧರ್ಮ ಕೀರ್ತಿರಾಜ್ , ಅಲ್ಫಿಯಾ ಶೇಖ್ ನಟಿಸಿದ್ದಾರೆ. ಕನ್ನಡ, ಹಿಂದಿ, ತಮಿಳಿನಲ್ಲಿ ಸಿನಿಮಾ ರಿಲೀಸ್ ಆಗಲಿದೆ.

