ದರ್ಶನ್‌ ನಮ್ಮ ಮದುವೆಗೆ ಬರಬೇಕು- ಮನದಾಸೆ ಬಿಚ್ಚಿಟ್ಟ ‘ಭಾರ್ಗವಿ‌ LLB’ ನಟಿ ರಾಧಾ

ದರ್ಶನ್‌ ನಮ್ಮ ಮದುವೆಗೆ ಬರಬೇಕು- ಮನದಾಸೆ ಬಿಚ್ಚಿಟ್ಟ ‘ಭಾರ್ಗವಿ‌ LLB’ ನಟಿ ರಾಧಾ

ಕಿರುತೆರೆ ಜನಪ್ರಿಯ ನಟಿ ರಾಧಾ ಭಗವತಿ (Radha Bhagavati) ಅವರು ರಾಣವ್‌ ಗೌಡ (Raanav Gowda) ಜೊತೆ ಹಸೆಮಣೆ (Wedding) ಏರಲು ಸಜ್ಜಾಗಿದ್ದಾರೆ. ಈ ನಡುವೆ ಸಂದರ್ಶನವೊಂದರಲ್ಲಿ ನಟಿ, ನಮ್ಮ ಮದುವೆಗೆ ದರ್ಶನ್ (Darshan) ಬರಬೇಕು ಎಂದು ಮನದ ಆಸೆಯನ್ನು ಬಿಚ್ಚಿಟ್ಟಿದ್ದಾರೆ.

ರಾಧಾ ನಾಯಕಿಯಾಗಿ ನಟಿಸಿರುವ ʻನಾನು ಕರುಣಾಕರʼ ಚಿತ್ರವು ಏ.2ಕ್ಕೆ ರಿಲೀಸ್‌ಗೆ ಸಜ್ಜಾಗಿದೆ. ಈ ಹಿನ್ನೆಲೆ ಪ್ರಚಾರ ಕಾರ್ಯದಲ್ಲಿ ಅವರು ಬ್ಯುಸಿಯಾಗಿದ್ದಾರೆ. ಈ ವೇಳೆ, ರಾಣವ್‌ ಜೊತೆಗಿನ ಮದುವೆ, ತಮ್ಮ ಪ್ರೇಮಕಥೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ತಾವು ಚಾಲೆಂಜಿಂಗ್‌ ದರ್ಶನ್‌ (Darshan) ಅವರ ಅಪ್ಪಟ ಅಭಿಮಾನಿ. ಅವರು ನಮ್ಮ ಮದುವೆಗೆ ಬರಬೇಕು ಅನ್ನೋದು ನಮ್ಮ ಆಸೆ. ಅಷ್ಟೇ ಅಲ್ಲ, ಕ್ರೇಜಿ ಸ್ಟಾರ್‌ ರವಿಚಂದ್ರನ್‌ (Crazy Star Ravichandran) ಅವರನ್ನು ಆಹ್ವಾನಿಸುವ ಪ್ಲ್ಯಾನ್‌ ಇದೆ ಎಂದಿದ್ದಾರೆ. ನಟಿಯ ಅಭಿಮಾನ ಕಂಡು ಡಿಬಾಸ್‌ ಫ್ಯಾನ್ಸ್‌ ಖುಷಿಪಟ್ಟಿದ್ದಾರೆ.

ಅಂದಹಾಗೆ, ಅಮೃತಧಾರೆ ಸೀರಿಯಲ್‌ನಲ್ಲಿ ರಾಧಾ, ರಾಣವ್‌ ಗಂಡ- ಹೆಂಡ್ತಿಯಾಗಿ ನಟಿಸಿದ್ದರು. ಈ ಪರಿಚಯವೇ ಪ್ರೀತಿಗೆ ಮುನ್ನುಡಿ ಬರೆಯಿತು. ಹೀಗಾಗಿ ಕಳೆದ ವರ್ಷ ಅಂತ್ಯದಲ್ಲಿ ರಾಣವ್‌ ಮತ್ತು ರಾಧಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಲಾಯ್ತು. ಸದ್ಯದಲ್ಲೇ ಮದುವೆ ಡೇಟ್‌ ಕೂಡ ಅನೌನ್ಸ್‌ ಮಾಡ್ತಾರೆ.

ಪ್ರಸ್ತುತ ಕಲರ್ಸ್‌ ವಾಹಿನಿ ಭಾರ್ಗವಿ‌ LLBನಲ್ಲಿ ನಾಯಕಿಯಾಗಿ ರಾಧಾ ಮಿಂಚ್ತಿದ್ದರೆ, ಇತ್ತ ವಿಲನ್ ಕೆಡಿ ಜೆಡಿಯಾಗಿ ಅಮೃತಧಾರೆಯಲ್ಲಿ (Amruthadaare) ರಾಣವ್‌ ಅಬ್ಬರಿಸುತ್ತಿದ್ದಾರೆ.

News Desk Sandalwood Times

error: Content is protected !!