ಮೆಗಾಸ್ಟಾರ್ ಸಿನಿಮಾದಲ್ಲಿ ʼಧುರಂಧರ್’ ನಟಿ ಸಾರಾ ಅರ್ಜುನ್

ಮೆಗಾಸ್ಟಾರ್ ಸಿನಿಮಾದಲ್ಲಿ ʼಧುರಂಧರ್’ ನಟಿ ಸಾರಾ ಅರ್ಜುನ್

‘ಧುರಂಧರ್’ ಚಿತ್ರದ (Dhurandhar) ಮೂಲಕ ಸಕ್ಸಸ್ ಕಂಡಿರುವ ಸಾರಾ ಅರ್ಜುನ್ (Sara Arjun) ತೆಲುಗಿನತ್ತ ಮುಖ ಮಾಡಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಜೊತೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ನಿರ್ದೇಶಕ ಬಾಬಿ ಕೊಲ್ಲಿ ನಿರ್ದೇಶನದ ಹೊಸ ಸಿನಿಮಾದಲ್ಲಿ ಮೆಗಾಸ್ಟಾರ್ ಚಿರಂಜೀವಿ ನಟಿಸಲಿದ್ದು, ಅವರ ಮಗಳ ಪಾತ್ರದಲ್ಲಿ ಸಾರಾ ಜೀವ ತುಂಬಲಿದ್ದಾರೆ. ತಂದೆ- ಮಗಳ ಬಾಂಧವ್ಯ ಸಾರುವ ಸಿನಿಮಾ ಇದಾಗಿದೆ. ವಿಶೇಷ ಅಂದ್ರೆ, ಈ ಚಿತ್ರಕ್ಕೆ ಕನ್ನಡದ ಕೆವಿಎನ್ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಲಿದೆ.

ʻಮನ ಶಂಕರ ವರಪ್ರಸಾದ್ ಗಾರು’ ಚಿತ್ರದ ಮೂಲಕ ಚಿರಂಜೀವಿ ಸಕ್ಸಸ್ ಕಂಡಿದ್ದಾರೆ. ಹಾಗಾಗಿ ಅವರ ಹೊಸ ಚಿತ್ರಗಳ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ. ಈ ಚಿತ್ರದಲ್ಲಿ ಚಿರಂಜೀವಿಗೆ ನಾಯಕಿಯಾಗಿ ಕನ್ನಡದ ನಟಿ ಪ್ರಿಯಾಮಣಿ (Priyamani) ಜೊತೆಯಾಗ್ತಿದ್ದಾರೆ. ಒಟ್ನಲ್ಲಿ ಚಿರಂಜೀವಿ, ಪ್ರಿಯಾಮಣಿ, ಸಾರಾ ಮೂವರ ಕಾಂಬೋ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.

News Desk Sandalwood Times

error: Content is protected !!