KVN ಭತ್ತಳಿಕೆಯಲ್ಲಿ ʻಬಿಗ್ʼ ಸ್ಟಾರ್ ಪಿಚ್ಚರ್ಸ್- ಯಾವೆಲ್ಲಾ ಸಿನಿಮಾಗಳು ರಿಲೀಸ್‌ಗೆ ರೆಡಿ?
ಕನ್ನಡದ ಹೆಸರಾಂತ ಸಂಸ್ಥೆ KVN Productions ಭತ್ತಳಿಕೆಯಲ್ಲಿ ಸೂಪರ್ ಸ್ಟಾರ್‌ಗಳು ನಟಿಸಿರೋ ಸಿನಿಮಾಗಳಿವೆ. ಯಾವೆಲ್ಲಾ ಚಿತ್ರಗಳು ಯಾವಾಗ ಬಿಡುಗಡೆ ಸಿದ್ಧವಾಗಿದೆ ಎಂಬುದರ ವಿವರ ಇಲ್ಲಿದೆ.

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಇದೇ ಮಾ.19ರಂದು ರಿಲೀಸ್ ಆಗಬೇಕಿತ್ತು. ಯುದ್ಧದ ಪರಿಣಾಮ ರಿಲೀಸ್ ಮುಂದಕ್ಕೆ ಹಾಕಿದೆ. ಜೊತೆಗೆ ʻಟಾಕ್ಸಿಕ್ʼ (Toxic) ಚಿತ್ರವು ಜೂನ್ 4ರಂದು ರಿಲೀಸ್ ಮಾಡೋದಾಗಿ ಚಿತ್ರತಂಡ ತಿಳಿಸಿದೆ.

ಧ್ರುವ ಸರ್ಜಾ- ರೀಷ್ಮಾ ನಾಣಯ್ಯ KD ಸಿನಿಮಾ ಇದೇ ಏಪ್ರಿಲ್‌ಗೆ ರಿಲೀಸ್ ಆಗಲಿದೆ. ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಮಲ್ಟಿ ಸ್ಟಾರ್ ಸಿನಿಮಾ ಕೆಡಿ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.
View this post on Instagram
ವಿಜಯ್ ದಳಪತಿ (Vijay Thalapathy) ಕೊನೆಯ ಚಿತ್ರ ʻಜನನಾಯಗನ್ʼ ಕಾರಣಾಂತಗಳಿಂದ ವಿಳಂಬವಾಗ್ತಿದೆ. ಆದರೆ ಸದ್ಯದಲ್ಲೇ ತೆರೆ ಹಿಂದಿನ ಕೆಲಸ ಮುಗಿಸಿ ರಿಲೀಸ್ ಬಗ್ಗೆ ಡೇಟ್ ತಿಳಿಸಲಿದೆ KVN Productions. ಮೇನಲ್ಲಿ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ. ರಿಲೀಸ್‌ಗೆ ರೆಡಿಯಿರೋ ಇವಿಷ್ಟು ಸಿನಿಮಾಗಳ ಮಧ್ಯೆ ಬಿಗ್ ಸ್ಟಾರ್‌ಗಳ ಜೊತೆ ಹೊಸ ಸಿನಿಮಾಗಳಿಗೆ ನಿರ್ಮಾಣ ಸಂಸ್ಥೆ ಕೈಜೋಡಿಸಿದೆ.
View this post on Instagram
ಬಾಲಿವುಡ್ ನಟ ಅಕ್ಷಯ್ ಕುಮಾರ್, ಮಾಲಿವುಡ್‌ನಲ್ಲಿ ʻಮಂಜುಮಲ್ ಬಾಯ್ಸ್ʼ ಟೀಮ್ ಜೊತೆಗೊಂದು ಸಿನಿಮಾ ಸಿದ್ದವಾಗ್ತಿದೆ. ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಅತಿದೊಡ್ಡ ಸಿನಿಮಾ ಶುರುವಾಗಿದೆ. ಹೀಗೆ ಸಿನಿಮಾಗಳ ಮೇಲೆ 1000 ಕೋಟಿ ಬಂಡವಾಳ ಹೂಡಿಕೆ ಮಾಡಿರೋ ಕೀರ್ತಿ ಕನ್ನಡದ KVN Productions ಅವರದ್ದಾಗಿದೆ. ಇನ್ನೂ ಈ ಸಂಸ್ಥೆ ದೊಡ್ಡಮಟ್ಟದಲ್ಲಿ ಬ್ಯುಸಿನೆಸ್ ಮಾಡಿದೆ. ಇನ್ನೇನಿದ್ರೂ ಚಿತ್ರಗಳ ರಿಲೀಸ್ ಮೂಲಕ ರಿಸಲ್ಟ್ ಬರೋದು ಅಷ್ಟೇ ಬಾಕಿ. ಹೀಗಾಗಿ KVN ಸಂಸ್ಥೆಗೆ ಕೆವಿಎನ್‌ಯೇ ಸಾಟಿ ಎಂದರೆ ತಪ್ಪಾಗಲಾರದು.

