ರಶ್ಮಿಕಾ ಮಂದಣ್ಣ, ವಿಜಯ್ ಆರತಕ್ಷತೆಗೆ ಬಂದ ಕನ್ನಡದ ತಾರೆಯರು

ರಶ್ಮಿಕಾ ಮಂದಣ್ಣ, ವಿಜಯ್ ಆರತಕ್ಷತೆಗೆ ಬಂದ ಕನ್ನಡದ ತಾರೆಯರು

ನ್ನಡದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಆರತಕ್ಷತೆ ಕಾರ್ಯಕ್ರಮದಲ್ಲಿ ಕನ್ನಡದ ಕಲಾವಿದರು ಕೂಡ ಭಾಗಿಯಾಗಿದ್ದಾರೆ. ಕನ್ನಡದಿಂದ ಕೆರಿಯರ್‌ ಶುರು ಮಾಡಿದ್ದ ನಟಿಯ ಮದುವೆ ಆರತಕ್ಷತೆಯಲ್ಲಿ ಕನ್ನಡದ ತಾರೆಯರು ಭಾಗಿಯಾಗಿರೋ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಈ ಬಗ್ಗೆ ವಿವರ ಇಲ್ಲಿದೆ ನೋಡಿ.

ಕನ್ನಡದ ನಟಿ ಆಶಿಕಾ ರಂಗನಾಥ್‌ (Ashika Ranganath) ತೆಲುಗಿನಲ್ಲಿ ಈಗ ಸದ್ದು ಮಾಡ್ತಿದ್ದಾರೆ. ವಿರೋಷ್‌ ಆರತಕ್ಷತೆಯಲ್ಲಿ ಭಾಗಿಯಾಗಿ ನವಜೋಡಿಗೆ ಶುಭಕೋರಿ ಬಂದಿದ್ದಾರೆ. ಇವರ ಮದುವೆಯ ಹಳದಿ ಕಾರ್ಯಕ್ರಮದಲ್ಲಿ ನಟಿ ಭಾಗಿಯಾಗಿದ್ರು. ಆದರೆ ಮದುವೆ ದಿನ ಗೈರಾಗಿದ್ರು. ಅದೇ ದಿನ ಕನ್ನಡದ ʻಗತವೈಭವʼ ನಟ ದುಷ್ಯಂತ್‌ ಮದುವೆಯಲ್ಲಿದ್ರು. ಇದೀಗ ಮತ್ತೆ ರಶ್ಮಿಕಾ ಮದುವೆ ಕಾರ್ಯಕ್ರಮದಲ್ಲಿ ಆಶಿಕಾ ಕಾಣಿಸಿಕೊಂಡಿದ್ದಾರೆ.

ಕನ್ನಡದ ಮತ್ತೋರ್ವ ನಟಿ ಶ್ರೀಲೀಲಾ (Sreeleela) ಕೂಡ ತಮ್ಮ ತಾಯಿ ಸ್ವರ್ಣಲತಾ ಜೊತೆ ಆಗಮಿಸಿ ರಶ್ಮಿಕಾ ದಂಪತಿಗೆ ವಿಶ್‌ ಮಾಡಿದ್ದಾರೆ. `ಪುಷ್ಪ 2’ರಲ್ಲಿ ರಶ್ಮಿಕಾ ಜತೆ ಶ್ರೀಲೀಲಾ ತೆರೆಹಂಚಿಕೊಂಡಿದ್ರು. ಹಾಗಾಗಿ ಅವರೊಂದಿಗೆ ನಟಿಗೆ ಉತ್ತಮ ಒಡನಾಟವಿದೆ.

ಇತ್ತೀಚೆಗೆ ತೆರೆಕಂಡ ʻದಿ ಗರ್ಲ್‌ಫ್ರೆಂಡ್‌ʼ ಚಿತ್ರದಲ್ಲಿ ರಶ್ಮಿಕಾ ಜತೆ ನಟಿಸಿದ್ದ ದೀಕ್ಷಿತ್‌ ಶೆಟ್ಟಿ ಆಗಮಿಸಿ ವಿರೋಷ್‌ಗೆ ವಿಶ್‌ ಮಾಡಿದ್ದಾರೆ. ಅದಷ್ಟೇ ಅಲ್ಲ, ಕೊಡಗಿನ ಬೆಡಗಿ ವರ್ಷ ಬೊಳ್ಳಮ್ಮ, ಕೃತಿ ಶೆಟ್ಟಿ, ಕರ್ನಾಟಕದ ಡಿಸಿಎಂ ಡಿಕೆಶಿ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.

ಆರತಕ್ಷತೆಯಲ್ಲಿ ಕರ್ನಾಟಕದ ಹೆಮ್ಮೆ ಮೈಸೂರು ಸಿಲ್ಕ್‌ ಸೀರೆಯುಟ್ಟು ಅದಕ್ಕೆ ಒಪ್ಪುವ ಆಭರಣ ಧರಿಸಿ ರಶ್ಮಿಕಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಮದುವೆಯಲ್ಲಿ ನಟಿ ತೆಲುಗು ಅಮ್ಮಾಯಿಯಂತೆ ಮಿಂಚಿದ್ರು. ಈಗ ಕನ್ನಡತಿಯಾಗಿ ಕರ್ನಾಟಕದ ಪರಂಪರೆಯನ್ನು ಸೀರೆ ಉಡುವ ಮೂಲಕ ತಮ್ಮ ಪ್ರೀತಿಯನ್ನು ತೋರಿಸಿದ್ದಾರೆ ನಟಿ. ಇದು ಕನ್ನಡಿಗರ ಮನಗೆದ್ದಿದೆ.

ಇನ್ನೂ ಕರ್ನಾಟಕದ ಅಳಿಯ ಆಗಿರೋ ವಿಜಯ್‌ ಅವರು ಸಿಲ್ಕ್‌ ಶರ್ಟ್‌ ಮತ್ತು ಪಂಚೆ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

News Desk Sandalwood Times

error: Content is protected !!