Kantara Chapter 1ರ ಯಶಸ್ಸಿನ ಬಳಿಕ 80 ಕೋಟಿ ಸಂಭಾವನೆಗೆ ರಿಷಬ್ ಪಟ್ಟು?
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ʻಕಾಂತಾರ ಚಾಪ್ಟರ್ 1’ರ (Kantara Chapter 1) ಚಿತ್ರ ಯಶಸ್ಸಿನ ಬಳಿಕ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಹಲವಾರು ಸಿನಿಮಾ ಅವಕಾಶಗಳು ಬೇರೇ ಭಾಷೆಗಳಿಂದಲೂ ಅರಸಿ ಬರುತ್ತಿವೆ. ಇದರ ನಡುವೆ ಅವರ ಸಂಭಾವನೆ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಹೊಸ ಪ್ರಾಜೆಕ್ಟ್‌ಗಳಿಗೆ 80 ಕೋಟಿ ರೂ. ಸಂಭಾವನೆ ಡಿಮ್ಯಾಂಡ್ ಮಾಡ್ತಿದ್ದಾರೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಈ ವಿಚಾರ ಕೇಳಿ ನಿರ್ಮಾಪಕರು ಶಾಕ್ ಆಗಿದ್ದಾರೆ.

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿದ್ದ ʻಕಾಂತಾರ ಚಾಪ್ಟರ್ 1′ ಸಿನಿಮಾಗೆ ಬಾಕ್ಸ್ ಆಫೀಸ್‌ನಲ್ಲಿ 850 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ. ಅವರನ್ನು ನಂಬಿಕೊಂಡು ಹಣ ಹೂಡುವ ನಿರ್ಮಾಪಕರಿಗೆ ನಷ್ಟ ಆಗುವುದಿಲ್ಲ ಎಂಬುದು ಚಿತ್ರರಂಗದಲ್ಲಿ ಖಚಿತ ಆಗಿದೆ. ಈ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ಅವರು ಪ್ರತಿ ಸಿನಿಮಾಗೆ 80 ಕೋಟಿ ರೂಪಾಯಿ ಸಂಭಾವನೆ ಕೇಳುತ್ತಿದ್ದಾರೆ ಎಂದು ವರದಿ ಆಗಿದೆ. ಈ ಸುದ್ದಿ ನಿಜನಾ ಎಂಬುದನ್ನು ರಿಷಬ್ ಶೆಟ್ಟಿ ಅವರೇ ಖಚಿತಪಡಿಸಬೇಕಿದೆ.
ಸದ್ಯ ಅವರು ಛತ್ರಪತಿ ಶಿವಾಜಿ ಮಹಾರಾಜ್, ಜೈ ಹನುಮಾನ್ ಸೇರಿದಂತೆ ಹಲವು ಚಿತ್ರಗಳು ನಟನ ಕೈಯಲ್ಲಿವೆ. ಅದಷ್ಟೇ ಅಲ್ಲ, ತಮ್ಮದೇ ನಿರ್ಮಾಣ ಸಂಸ್ಥೆ ಮೂಲಕ ಹೊಸಬರ ಸಿನಿಮಾವನ್ನು ನಿರ್ಮಾಣ ಕೂಡ ಮಾಡ್ತಿದ್ದಾರೆ.

