ಕಲೆಗಿಂತ ನಟಿಯರ ದೇಹದ ಮೇಲೆ ಜೂಮ್‌- ‘ಕಾಂತಾರ’ ಬೆಡಗಿ ಫುಲ್‌ ರಾಂಗ್

ಕಲೆಗಿಂತ ನಟಿಯರ ದೇಹದ ಮೇಲೆ ಜೂಮ್‌- ‘ಕಾಂತಾರ’ ಬೆಡಗಿ ಫುಲ್‌ ರಾಂಗ್

ಚಿತ್ರರಂಗದಲ್ಲಿ ನಟಿಯರನ್ನ ಕೆಲವರು ನೋಡೋ ರೀತಿನೇ ಬೇರೇ. ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅವರ ದೇಹದ ಭಾಗವನ್ನು ಜೂಮ್‌ ಮಾಡಿ ಪಾಪರಾಜಿಗಳು ಸೋಷಿಯಲ್‌ ಮೀಡಿಯಾದಲ್ಲಿ ಹಾಕಿ ವಿವ್ಸ್‌ ಗಿಟ್ಟಿಸಿಕೊಳ್ಳೋ ಪ್ರಯತ್ನ ಮಾಡ್ತಾರೆ. ಅಂತಹದ್ದೇ ಸನ್ನಿವೇಶ ಈಗ ನಟಿ ಸಪ್ತಮಿ ಗೌಡ ಎದುರಿಸಿದ್ದಾರೆ. ಕಲೆಗಿಂತ ನಟಿಯರ ದೇಹದ ಮೇಲೆ ಜೂಮ್ ಮಾಡ್ತಾರೆ ಎಂದು ಸಪ್ತಮಿ ಫುಲ್‌ ರಾಂಗ್ ಆಗಿದ್ದಾರೆ.‌ ಈ ನಡೆಯ ವಿರುದ್ಧ ನಟಿ ಸಿಡಿದೆದ್ದಿದ್ದಾರೆ.


ಇನ್ಸ್ಟಾಗ್ರಾಂನಲ್ಲಿ ಈ ಕುರಿತು ನಟಿ ಸುದೀರ್ಘ ಪೋಸ್ಟ್‌, ಚಿತ್ರರಂಗದಲ್ಲಿರುವ ಮಹಿಳೆಯರಾಗಿ ನಿರಂತರವಾಗಿ ನಡೆಯುತ್ತಿರುವ ಒಂದು ಗಂಭೀರ ಸಮಸ್ಯೆಯನ್ನು ಎದುರಿಸಲು ಒಟ್ಟಾಗಿ ನಿಂತಿದ್ದೇವೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಹಿಳಾ ಕಲಾವಿದರ ವಿಡಿಯೋಗಳು ಮತ್ತು ಫೋಟೋಗಳನ್ನು ಅಸಭ್ಯ ಕೋನಗಳಿಂದ ಚಿತ್ರಿಕರಿಸಿ, ನಮ್ಮ ಕಲೆಗಿಂತ ನಮ್ಮ ದೇಹದ ಮೇಲೆ ಅನಾವಶ್ಯಕವಾಗಿ ಜೂಮ್ ಮಾಡಿ ಪ್ರಸಾರ ಮಾಡುವ ಘಟನೆಗಳು ಪುನಃ ಪುನಃ ನಡೆಯುತ್ತಿವೆ. ಇಂತಹ ವರ್ತನೆ ಕೆಲವರಿಂದ ನಡೆಯುತ್ತಿರುವುದಾದರೂ ಅದು ಅಸಭ್ಯ, ಅವಮಾನಕಾರಿ ಮತ್ತು ಸಂಪೂರ್ಣವಾಗಿ ಅಸ್ವೀಕಾರಾರ್ಹವಾಗಿದೆ.

ನಾವು ಇಲ್ಲಿ ನಮ್ಮ ಕಲೆಗಾಗಿ ಬಂದಿದ್ದೇವೆ ನಾವು ಇಲ್ಲಿ ನಮ್ಮ ಸಿನಿಮಾ ಸಿನಿಮಾಕ್ಕಾಗಿ ಬಂದಿದ್ದೇವೆ. ಉದ್ದೇಶಪೂರ್ವಕವಾಗಿ ಜೂಮ್ ಮಾಡುವುದು ಮತ್ತು ಅಸಭ್ಯ ಕೋನಗಳಿಂದ ಚಿತ್ರೀಕರಿಸುವುದು, ನಮ್ಮ ಗೌರವಕ್ಕೆ ಸ್ಪಷ್ಟ ಧಕ್ಕೆಯೇ ಸರಿ. ಇದನ್ನು ಸಾಮಾನ್ಯ ವಿಚಾರವೆಂದು ಸ್ವೀಕರಿಸಲು ಸಾಧ್ಯವಿಲ್ಲ ಕಾರ್ಯಕ್ರಮಗಳನ್ನು ವರದಿ ಮಾಡುವವರು ವೃತ್ತಿಪರತೆ ಮೂಲಭೂತ ಗೌರವ ಮತ್ತು ಶಿಸ್ತನ್ನು ಕಾಪಾಡಬೇಕು ಎಂದು ನಾವು ನಿರೀಕ್ಷಿಸುತ್ತೇವೆ . ಈ ಗಡಿರೇಖೆಯನ್ನು ಸ್ಪಷ್ಟವಾಗಿ ಎಳೆದು, ನಾವು ಒಟ್ಟಾಗಿ ನಿಂತಿದ್ದೇವೆ. ಇಂತಹ ಅನುಭವವನ್ನು ಎದುರಿಸಿದ ಪ್ರತಿಯೊಬ್ಬ ಮಹಿಳೆಯೊಂದಿಗೂ ನಾವು ಐಕ್ಯತೆಯಲ್ಲಿ ನಿಂತಿದ್ದೇವೆ. ಗೌರವವನ್ನು ಬೇಡುವ ನಮ್ಮ ಧ್ವನಿ ಮುಂದುವರಿಯುತ್ತದೆ ಎಂದು ಸಪ್ತಮಿ ಬರೆದುಕೊಂಡಿದ್ದಾರೆ.


ನಟಿಯ ಈ ಪೋಸ್ಟ್‌ಗೆ ಮೋಹಕ ತಾರೆ ರಮ್ಯಾ, ಯುವ ರಾಜ್‌ಕುಮಾರ್‌ ಸೇರಿದಂತೆ ಅನೇಕರು ಬೆಂಬಲಿಸಿದ್ದಾರೆ.

News Desk Sandalwood Times

error: Content is protected !!