ಚೊಚ್ಚಲ ಸಿನಿಮಾದ ಶೂಟಿಂಗ್ ಮುಗಿಸಿದ ಕುಂಭಮೇಳದ ವೈರಲ್ ಹುಡುಗಿ ಮೊನಲಿಸಾ
ಕುಂಭಮೇಳದಲ್ಲಿ ವೈರಲ್ ಆದ ನೀಲಿ ಕಂಗಳ ಚೆಲುವೆ ಮೊನಲಿಸಾ (Monalisa) ಫ್ಯಾನ್ಸ್ಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ಅವರು ನಟಿಸಿರೋ ಚೊಚ್ಚಲ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದೆ.

ಕುಂಭಮೇಳದಲ್ಲಿ ಮಣಿಸರ ಮಾರುತ್ತಿದ್ದ ಹುಡುಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ಮೊನಾಲಿಸಾಗೆ ಆಲ್ಬಂ ಸಾಂಗ್ ಮತ್ತು ಬಾಲಿವುಡ್ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ತು. ಅದರಂತೆ ಈಗ ತಾವು ಒಪ್ಪಿಕೊಂಡ ಚಿತ್ರದ ಶೂಟಿಂಗ್ ಮುಗಿಸಿಕೊಟ್ಟಿದ್ದಾರೆ. ಹೀರೋಯಿನ್ ಆಗಿ ನಟಿಸಿ ಬಂದಿದ್ದಾರೆ.
View this post on Instagram
ಮೊನಾಲಿಸಾ ನಟಿಸುತ್ತಿರುವ ಮೊದಲ ಸಿನಿಮಾದ ಹೆಸರು ʻದಿ ಡೈರಿ ಆಫ್ ಮಣಿಪುರ್’. ಈ ಚಿತ್ರಕ್ಕೆ ಸನೋಜ್ ಮಿಶ್ರಾ ಅವರು ನಿರ್ದೇಶನ ಮಾಡಿದ್ದಾರೆ. ಬಾಲಿವುಡ್ ಚಿತ್ರಂಗದ ಖ್ಯಾತ ನಟ ರಾಜ್ಕುಮಾರ್ ರಾವ್ ಅವರ ಸಹೋದರ ಅಮಿತ್ ರಾವ್ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇನ್ನೂ ಮೊನಾಲಿಸಾ ನಟನೆಯ ಕುರಿತು ತರಬೇತಿ ಪಡೆದು ಸಿನಿಮಾ ಮಾಡಿದ್ದಾರೆ. ತೆರೆಮರೆಯಲ್ಲಿ ತಯಾರಿ ಮಾಡಿಕೊಂಡೇ ಅವರು ಕ್ಯಾಮೆರಾ ಮುಂದೆ ಬಂದಿದ್ದಾರೆ.

