Love Mocktailನಿಂದ ನನಗೆ Fame ಅಲ್ಲ, Shame ಸಿಕ್ತು- ‘ಬ್ರಹ್ಮಗಂಟು’ ನಟಿ Geetha ಗರಂ

Love Mocktailನಿಂದ ನನಗೆ Fame ಅಲ್ಲ, Shame ಸಿಕ್ತು- ‘ಬ್ರಹ್ಮಗಂಟು’ ನಟಿ Geetha ಗರಂ

ʻಲವ್‌ ಮಾಕ್ಟೈಲ್‌ʼ ಸಿನಿಮಾ ಮಾಡಿದ್ದಕ್ಕೆ ನನಗೆ ಫೇಮ್‌ ಅಲ್ಲ, ಶೇಮ್‌ ಸಿಕ್ತು ಎಂದು ಡಾರ್ಲಿಂಗ್‌ ಕೃಷ್ಣ ದಂಪತಿ ಮೇಲೆ ಗೀತಾ ಭಾರತಿ ಭಟ್ ಕೆಂಡಕಾರಿದ್ದಾರೆ. ಸಿನಿಮಾ ಮಾಡೋ ಮೊದಲೇ ಹೇಳಿದ್ವಿ, ಅಷ್ಟಿದ್ರೆ Love Mocktail ಚಿತ್ರ ಒಪ್ಪಿಕೊಳ್ಳಲೇಬಾರದಿತ್ತು ಎಂದಿದ್ದ ನಟಿ, ನಿರ್ಮಾಪಕಿ ಮಿಲನಾ (Milana) ಹೇಳಿಕೆಗೆ ಫೇಮ್‌ ಅಲ್ಲ, ಶೇಮ್‌ ಸಿಕ್ತು ಎನ್ನುವ ಮೂಲಕ ಗೀತಾ ತಿರುಗೇಟು ನೀಡಿದ್ದಾರೆ.

ನಾನು ಮೊದಲು ಬಾಡಿ ಶೇಮಿಂಗ್‌ ಇರುವ ಸೀರಿಯಲ್‌ನಲ್ಲಿ ನಟಿಸಿದ್ದೆ ಎಂದವರಿಗೆ ಈ ಸ್ಪಷ್ಟನೆ. ಬ್ರಹ್ಮಗಂಟು ಸೀರಿಯಲ್‌ನಲ್ಲಿ ದಪ್ಪ ಹುಡುಗಿ ಸಮಾಜದಲ್ಲಿ ಎದುರಿಸುವ ಸಮಸ್ಯೆಗಳ ಬಗ್ಗೆ ತೋರಿಸಲಾಗಿತ್ತು. ಸಮಾಜ ಅವಳನ್ನು ಹಾಸ್ಯದ ವಿಷಯವಾಗಿಸಿದರೂ ಕೂಡ ಅವಳ ಬಲ, ದಯೆ, ಮಾನವೀಯತೆಯನ್ನು ತೋರಿಸೋದಾಗಿತ್ತು. ‘ಹೂ ತರ ಇದ್ಲು, ಹೂಕೋಸ್ ತರ ಆಗಿದ್ದಾಳೆ ಅನ್ನೋ ಡೈಲಾಗ್‌ ಫೇಮಸ್‌ ಆಯ್ತು, ಬಾಡಿ ಶೇಮಿಂಗ್‌ ಅನ್ನು ಹಾಸ್ಯವಾಗಿ ತೋರಿಸಲಾಯ್ತು. ಅದು ಫೇಮ್‌ ಅಲ್ಲ, ನನಗೆ ಆಗಿದ್ದು ಶೇಮ್‌ ಎಂದು ಮಿಲನಾ ವಿರುದ್ಧ ಗೀತಾ (Geetha Bharathi Bhat) ಗುಡುಗಿದ್ದಾರೆ.

ನಾನು ಆ ಅವಕಾಶಕ್ಕಾಗಿ ಹುಡುಕಿಕೊಂಡು ಹೋಗಲಿಲ್ಲ. ಆ ಪಾತ್ರಕ್ಕಾಗಿ audition ಕೂಡ ಕೊಡಲಿಲ್ಲ. ಆ ದೃಶ್ಯದಲ್ಲಿ ಸೇರಿಸಿದ back shot & sound effects ಬಗ್ಗೆ ಕೂಡ ನನಗೆ ತಿಳಿದಿರಲಿಲ್ಲ ಎಂದು ಮಿಲನಾ, ಕೃಷ್ಣ ಜೋಡಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ʻರವಿಕೆ ಪ್ರಸಂಗʼ ಸಿನಿಮಾದಲ್ಲಿ ಗೀತಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.ಈ ಸಿನಿಮಾದಲ್ಲಿ ಮದುವೆಯ ಸುತ್ತಲಿನ ಜಂಜಾಟ, ದೇಹದ ಕಾರಣಕ್ಕೆ ಅನುಭವಿಸುವ ಅವಮಾನ, ಬಾಡಿ ಶೇಮಿಂಗ್‌ ಬಗ್ಗೆ ಒಳಗೊಂಡಿತ್ತು. ಆ ಪಾತ್ರಕ್ಕೂ ನಟಿ ಜೀವತುಂಬಿದ್ದರು.

News Desk Sandalwood Times

error: Content is protected !!