‘ಮಿಲನಾ’ ನಟಿ ಟ್ರೋಲ್- ಬಾಡಿ ಶೇಮಿಂಗ್ಗೆ ಒಳಗಾದ ಪಾರ್ವತಿ ಮೆನನ್
ಕನ್ನಡದ ಮಿಲನಾ, ಪೃಥ್ವಿ, ಅಂದರ್ ಬಾಹರ್ ಸಿನಿಮಾಗಳ ಮೂಲಕ ಕನ್ನಡಿಗರ ಮನಗೆದ್ದಿರೋ ಮಲಯಾಳಂ ಬ್ಯೂಟಿ ಪಾರ್ವತಿ ಮೆನನ್ (Parvathy Thiruvothu) ಮತ್ತೆ ಟ್ರೋಲ್ಗೆ ಒಳಗಾಗಿದ್ದಾರೆ. ಬಾಡಿ ಶೇಮಿಂಗ್ಗೆ ಒಳಗಾಗಿದ್ದಾರೆ. ಈ ಕುರಿತ ವಿಡಿಯೋವೊಂದು ಸಖತ್ ವೈರಲ್ ಆಗ್ತಿದೆ.

ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಕಪ್ಪು ಬಣ್ಣದ ಶೋಲ್ಡರ್ಲೆಸ್ ಧಿರಿಸಿನಲ್ಲಿ ಮಿಂಚಿದ್ದರು. ಆದರೆ ನಟಿಯ ಲುಕ್ ನೋಡಿ, ಮೊದಲಿಗಿಂತ ದಪ್ಪ ಕಾಣಿಸುತ್ತಿದ್ದಾರೆ ಎಂದು ನೆಟ್ಟಿಗರು ಟೀಕಿಸಲು ಶುರು ಮಾಡಿದರು. ಪಾರ್ವತಿ ಬಾಡಿ ಬಗ್ಗೆ ಕೆಟ್ಟ ಕಾಮೆಂಟ್ಗಳು ಹರಿದು ಬರುತ್ತಿವೆ. ಆದರೆ ನಟಿ ಈ ಬಗ್ಗೆ ರಿಯಾಕ್ಟ್ ಮಾಡಿಲ್ಲ.
View this post on Instagram
ʻಮಿಲನಾ’ ಸಿನಿಮಾ (Milana) ತೆರೆಕಂಡು 20 ವರ್ಷಗಳು ಕಳೆದರೂ ಪಾರ್ವತಿ ಮೇಲೆ ಫ್ಯಾನ್ಸ್ಗೆ ಇನ್ನೂ ಕ್ರೇಜ್ ಇದೆ. ಅಪ್ಪುಗೆ ನಾಯಕಿಯಾಗಿ ಮಲಯಾಳಂ ನಟಿ ಗಮನ ಸೆಳೆದಿದ್ದರು.
ಪ್ರಸ್ತುತ ನಟಿ ಮಲಯಾಳಂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ಚಿತ್ರಗಳಲ್ಲಿ ಅವರು ಕಾಣಿಸಿಕೊಳ್ತಿಲ್ಲ. ಆದರೆ ಕನ್ನಡದ ಸಿನಿಮಾಗಳ ವಿಶೇಷ ಒಲವು ಹೊಂದಿದ್ದಾರೆ.

