Rashmika ಬದಲು ʻಸೀತಾರಾಮಂʼ ನಟಿ ಮೃಣಾಲ್‌ಗೆ ಒಲಿದ ಅದೃಷ್ಟ- ಏನದು?
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಅವರು ವಿಜಯ್ ದೇವರಕೊಂಡ (Vijay Devarakonda) ಜೊತೆ ಮದುವೆಯಾಗ್ತಿದ್ದಂತೆ ಬಿಗ್ ಪ್ರಾಜೆಕ್ಟ್‌ವೊಂದರಿಂದ ಹೊರಬಂದಿದ್ದಾರೆ. ರಶ್ಮಿಕಾ ಮಂದಣ್ಣ ಕೈಬಿಟ್ಟ ಪ್ರಾಜೆಕ್ಟ್‌ಗೆ ಮೃಣಾಲ್ ಠಾಕೂರ್ (Mrunal Thakur) ಎಂಟ್ರಿ ಕೊಟ್ಟಿದ್ದಾರೆ. ಐಟಂ ಹಾಡಿಗೆ ಡ್ಯಾನ್ಸ್ ಮಾಡಲು ಓಕೆ ಎಂದಿದ್ದಾರೆ.

ರಾಮ್ ಚರಣ್ ನಟನೆಯ ‘ಪೆಡ್ಡಿ’ (Peddi) ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಲು ರಶ್ಮಿಕಾ ಮಂದಣ್ಣಗೆ ಅವಕಾಶ ಸಿಕ್ಕಿತ್ತು, ಒಂದು ಹಂತದ ಮಾತುಕತೆ ಆಗಿತ್ತು. ಕಾರಣಾಂತರಗಳಿಂದ ಅವರು ಈ ಸಿನಿಮಾದಿಂದ ಅವರು ಹೊರನಡೆದಿದ್ದಾರೆ. ರಶ್ಮಿಕಾ ಬದಲು ಮೃಣಾಲ್ ಠಾಕೂರ್‌ಗೆ ಬಂಪರ್ ಅವಕಾಶ ಅರಸಿ ಬಂದಿದೆ.

ಸೀತಾ ಆಗಿ ಪ್ರೇಕ್ಷಕರ ಮನಗೆದ್ದಿದ್ದ ಸುಂದರಿ ಮೃಣಾಲ್ ಈಗ ರಾಮ್ ಚರಣ್ (Ram Charan) ಜೊತೆ ಡ್ಯಾನ್ಸ್ ಮಾಡಲು ಒಪ್ಪಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಕೂಡ ಶುರುವಾಗಲಿದೆ. ಒಂದೊಳ್ಳೆ ಸಂಭಾವನೆಗೆ ಮಾತುಕತೆ ಆಗಿದೆ.

ಈ ಮೂಲಕ ಸಮಂತಾ (Samantha) ಹಾದಿಯಲ್ಲೇ ಮೃಣಾಲ್ ಕೂಡ ಹೆಜ್ಜೆ ಹಾಕ್ತಿದ್ದಾರೆ. ಸ್ಟಾರ್ ನಟಿಯಾಗಿ ಬೇಡಿಕೆ ಇರೋವಾಗಲೇ ಐಟಂ ಹಾಡಿಗೆ ಹೆಜ್ಜೆ ಹಾಕಿ ಮತ್ತಷ್ಟು ಜನಪ್ರಿಯತೆ ಗಳಿಸಿದ್ರು ಸ್ಯಾಮ್. ಈಗ ಅದೇ ಸೂತ್ರವನ್ನೇ ಮೃಣಾಲ್ ಕೂಡ ಫಾಲೋ ಮಾಡ್ತಿದ್ದಾರೆ. ರಶ್ಮಿಕಾ ಬಿಟ್ಟ ಅವಕಾಶವನ್ನು ಸೀತಾರಾಮಂ ಬೆಡಗಿ ಸದುಪಯೋಗಪಡಿಸಿಕೊಳ್ತಿದ್ದಾರೆ.

