ಇನ್ಮುಂದೆ Rashmika Devarakonda- ಸಿನಿಮಾಗೆ ಗುಡ್ ಬೈ ಹೇಳ್ತಾರಾ ಶ್ರೀವಲ್ಲಿ.!?
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ, ವಿಜಯ್ (Vijay Devarakonda) ಮದುವೆ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ದೇವರಕೊಂಡ ಪತ್ನಿ ಆಗಿರೋ ರಶ್ಮಿಕಾ ಇನ್ಮುಂದೆ ನಟನೆಗೆ ಗುಡ್ ಬೈ ಹೇಳ್ತಾರಾ? ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ವಿರೋಷ್ ಫ್ಯಾನ್ಸ್ ಈ ಬಗ್ಗೆ ಕಂಗಲಾಗಿದ್ದಾರೆ.

ಕನ್ನಡದ ʻಕಿರಿಕ್ ಪಾರ್ಟಿʼ ಚಿತ್ರದಿಂದ ಸಿನಿ ಪಯಣ ಶುರು ಮಾಡಿದ್ದ ನಟಿ ರಶ್ಮಿಕಾ (Rashmika Mandanna) ಈಗ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ಹೀರೋಯಿನ್. ಬಾಲಿವುಡ್ ಮತ್ತು ಸೌತ್‌ನಲ್ಲಿ ಕನ್ನಡದ ಬಾವುಟ ಹಾರಿಸಿದ ಕೊಡವತಿ. ಸ್ಟಾರ್ ಪಟ್ಟ ಇರೋವಾಗಲೇ ಬಹುಕಾಲದ ಗೆಳೆಯ ವಿಜಯ್ ಜೊತೆ ನಟಿ ಮದುವೆಯಾಗಿದ್ದಾರೆ. ಒಂದ್ ಕಡೆ ವಿರೋಷ್ ಫ್ಯಾನ್ಸ್ ಈ ವಿಚಾರ ಖುಷಿ ಕೊಟ್ಟಿದ್ರೆ, ಮತ್ತೊಂದೆಡೆ ಶ್ರೀವಲ್ಲಿ ನಟನೆಗೆ ಗುಡ್ ಬೈ ಹೇಳಿದ್ರೆ ಅಂತ ಕಂಗಲಾಗಿದ್ದಾರೆ.

ಪಡ್ಡೆಹುಡುಗರ ಪಾಲಿನ ಕ್ರಶ್ಮಿಕಾ ಆಗಿರೋ ನಟಿ, ಮುಂದೆ ಸಿನಿಮಾ ಮಾಡಲ್ವಾ? ಅನ್ನೋ ಪ್ರಶ್ನೆಗೆ ಇಲ್ಲಿದೆ ಉತ್ತರ. ನಟಿಯ ಬೇಡಿಕೆ ನೋಡಿದರೆ ನಟನೆಯಿಂದ ದೂರ ಸರಿಯುವುದು ಅಷ್ಟು ಸುಲಭವಲ್ಲ. ಪ್ರಸ್ತುತ ರಶ್ಮಿಕಾ ಕೈಯಲ್ಲಿ ದೊಡ್ಡ ಬಜೆಟ್ ಸಿನಿಮಾಗಳಿವೆ.

ಸದ್ಯ ವಿಜಯ್ ದೇವರಕೊಂಡ ಜೊತೆ ‘ರಣಬಲಿ’, ‘ಮೈಸಾ’,’ಕಾಕ್ಟೇಲ್ 2′ ಚಿತ್ರಗಳಿವೆ. ಈ ಹಿಂದೆ ನಟಿಯರು ಮದುವೆಯಾದ ಬಳಿಕ ಸಿನಿಮಾಗೆ ಗುಡ್ ಬೈ ಹೇಳುತ್ತಿದ್ರು, ಈಗ ಕಾಲ ಬದಲಾಗಿದೆ.

ಸ್ಟಾರ್ ನಟಿಯರಾದ ಆಲಿಯಾ, ಸಮಂತಾ, ನಯನತಾರಾ, ದೀಪಿಕಾ ಪಡುಕೋಣೆ ಮದುವೆಯ ಬಳಿಕವೂ ಹಿಟ್ ಕೊಟ್ಟಿದ್ದಾರೆ. ಅವರಂತೆಯೇ ರಶ್ಮಿಕಾ ಕೂಡ ಮದುವೆ ಜೀವನ & ವೃತ್ತಿರಂಗ ಎರಡನ್ನು ಬ್ಯಾಲೆನ್ಸ್ ಮಾಡ್ತಾರೆ ಅನ್ನೋದು ಸಿನಿ ವಿಶ್ಲೇಷಕರ ಅಭಿಪ್ರಾಯ.

