Virosh Wedding: ಅದ್ಧೂರಿಯಾಗಿ ನೆರವೇರಿದ ರಶ್ಮಿಕಾ, ವಿಜಯ್‌ ಕಲ್ಯಾಣ

Virosh Wedding: ಅದ್ಧೂರಿಯಾಗಿ ನೆರವೇರಿದ ರಶ್ಮಿಕಾ, ವಿಜಯ್‌ ಕಲ್ಯಾಣ

ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ (Rashmika Mandanna), ವಿಜಯ್‌ ದೇವರಕೊಂಡ (Vijay Devarakonda) ಇಂದು (ಫೆ.26) ಅದ್ಧೂರಿಯಾಗಿ ಮದುವೆ ಜರುಗಿದೆ. ಉದಯಪುರದ ಐಟಿಸಿ ಹೋಟೆಲ್‌ನಲ್ಲಿ ವಿರೋಷ್‌ ಮದುವೆ ನೆರವೇರಿದೆ.

ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳ ಸಕ್ಸಸ್‌ ಕೊಟ್ಟು, ಸ್ಟಾರ್ ನಟಿಯ ಪಟ್ಟ ಇರೋವಾಗಲೇ ರಶ್ಮಿಕಾ ಅವರು ಬಹುಕಾಲದ ಗೆಳೆಯ ದೇವರಕೊಂಡ ಜೊತೆ ಮದುವೆಯಾಗಿದ್ದಾರೆ. ಇಂದು ಬೆಳಗ್ಗೆ 8 ಗಂಟೆಗೆ ಶುಭ ಮುಹೂರ್ತದಲ್ಲಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ತೆಲುಗು ಮತ್ತು ಕೊಡವ ಪದ್ಧತಿಯಂತೆ ಮದುವೆ ಜರುಗಿದೆ. ಈ ಮದುವೆಗೆ ಕುಟುಂಬಸ್ಥರು, ಆಪ್ತರಷ್ಟೇ ಭಾಗಿಯಾಗಿದ್ದಾರೆ.

ಮದುವೆಯಲ್ಲಿ ಸ್ಟಾರ್‌ ನಟಿ ಸಮಂತಾ (Samantha), ಸಂದೀಪ್‌ ರೆಡ್ಡಿ ವಂಗಾ, ಶ್ರಾವ್ಯ ವರ್ಮಾ, ಆಶಿಕಾ ರಂಗನಾಥ್‌, ಕಲ್ಯಾಣಿ ಪ್ರಿಯದರ್ಶನ್‌, ಡೈರೆಕ್ಟರ್‌ ರಾಹುಲ್‌, ಇಶಾ ರೆಬ್ಬಾ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.

ನಿನ್ನೆ (ಫೆ.25) ಹಳದಿ ಶಾಸ್ತ್ರ, ಸಂಗೀತ ಕಾರ್ಯಕ್ರಮ ಜರುಗಿದೆ. ಮಾ.4ರಂದು ಹೈದರಾಬಾದ್‌ನಲ್ಲಿ ವಿರೋಷ್‌ ಆರತಕ್ಷತೆ ಜರುಗಲಿದೆ.

News Desk Sandalwood Times

error: Content is protected !!