2026-27 Rashmika Mandanna ಫುಲ್ ಬ್ಯುಸಿ- ಸದ್ಯಕ್ಕಿಲ್ಲ ವಿರೋಶ್ ಹನಿಮೂನ್
ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಮದುವೆ ವಿಜಯ್ ದೇವರೊಂಡ (Vijay Devarakonda) ಜೊತೆ ಫೆ.26ರಂದು ಅದ್ಧೂರಿಯಾಗಿ ಜರುಗಿದೆ. ಸದ್ಯ ಫ್ಯಾನ್ಸ್ ಮೀಟ್, ತಮ್ಮದೇ ಆರತಕ್ಷತೆ ಮತ್ತು ಅಲ್ಲು ಸಿರೀಶ್ ಮದುವೆ ಅಂತ ಬ್ಯಾಕ್ ಟು ಬ್ಯಾಕ್ ಕಾರ್ಯಕ್ರಮದಲ್ಲಿ ವಿರೋಶ್ ಬ್ಯುಸಿಯಾಗಿದ್ದಾರೆ. ಹೀಗಾಗಿ ಪರ್ಸನಲ್ ಕೆಲಸಕ್ಕೆ ಬ್ರೇಕ್ ಹಾಕಿ ಮತ್ತೆ ಶೂಟಿಂಗ್‌ಗೆ ವಿರೋಶ್ ದಂಪತಿ ವಾಪಸ್ ಆಗಲಿದ್ದಾರೆ.

ಹೌದು.. 2026-27ರಲ್ಲಿ ರಶ್ಮಿಕಾ ಫುಲ್ ಬ್ಯುಸಿಯಾಗಿದ್ದಾರೆ. ಸ್ಟಾರ್ ಗಿರಿ ಇರೋವಾಗಲೇ ನಟಿ ಹಸಮಣೆ ಏರಿದ್ರೂ ಕೂಡ ಅವರಿಗಿರೋ ಬೇಡಿಕೆ ಕಮ್ಮಿಯಾಗಿಲ್ಲ. ಸದ್ಯಕ್ಕೆ ಹನಿಮೂನ್ ಮುಂದಕ್ಕೆ ಹಾಕಿ ವಿಜಯ್- ರಶ್ಮಿಕಾ ಜೋಡಿ ರಣಬಾಲಿ ಸಿನಿಮಾಗೆ ಶೂಟಿಂಗ್ ಭಾಗಿಯಾಗ್ತಿದ್ದಾರೆ. ಇದೇ ಮಾ.೯ರಿಂದ ಕೆಲಸ ಶುರುವಾಗಲಿದೆ. ನವಜೋಡಿಯ ವರ್ಕ್ ಕಮೀಟ್‌ಮೆಂಟ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

ಯಾವೆಲ್ಲಾ ಚಿತ್ರ ನಟಿಯ ಕೈಯಲ್ಲಿದೆ ಅನ್ನೋದಾದ್ರೆ ಇಲ್ಲಿದೆ ವಿವರ. ವಿಜಯ್ ಜತೆ ರಣಬಾಲಿ, ಶಾಹಿದ್ ಕಪೂರ್ & ಕೃತಿ ಸನೋನ್ ಜತೆ ಕಾಕ್‌ಟೈಲ್ 2 ಚಿತ್ರ, ಪುಷ್ಪ 3 ಸಿನಿಮಾ, ರಣಬೀರ್ ಜತೆ ಅನಿಮಲ್ ಪಾರ್ಕ್, ಮೈಸಾ ಪ್ಯಾನ್ ಇಂಡಿಯಾ ಚಿತ್ರ, AA22xA6- ಅಲ್ಲು & ಅಟ್ಲಿ ಜೊತೆ ಮತ್ತೊಂದು ಚಿತ್ರ ಮಾಡಲು ನಟಿ ಒಪ್ಪಿದ್ದಾರೆ. ಇದರಲ್ಲಿ ಅಲ್ಲು ಅರ್ಜುನ್‌ಗೆ ರಶ್ಮಿಕಾ ವಿಲನ್ ಆಗಿ ನಟಿಸಲಿದ್ದಾರೆ.

ಒಟ್ನಲ್ಲಿ ರಶ್ಮಿಕಾ ಮಂದಣ್ಣ ಇನ್ನೂ 2 ವರ್ಷ ಅಲ್ಲಾಡೋ ಹಾಗೇ ಅಷ್ಟು ಸಿನಿಮಾಗಳು ಅವರ ಭತ್ತಳಿಕೆಯಲ್ಲಿದೆ. ಲಕ್ಕಿ ನಟಿಯಾಗಿರೋ ರಶ್ಮಿಕಾ ಮತ್ತೆ ಗೆಲುವು ಸಾಧಿಸುತ್ತಾರಾ? ಅಂತ ಕಾದುನೋಡಬೇಕಿದೆ.

