ಮದುವೆ ಬೆನ್ನಲ್ಲೇ ರಿಲೀಸ್ಗೆ ರೆಡಿಯಾಯ್ತು ರಶ್ಮಿಕಾ ಮಂದಣ್ಣ ನಟನೆಯ ಬಾಲಿವುಡ್ ಚಿತ್ರ
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಅವರು ವಿಜಯ್ (Vijay Devarakonda) ಜೊತೆ ಮದುವೆಯಾಗಿ ವೈವಾಹಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಂಭ್ರಮದ ನಡುವೆ ಅವರು ನಟಿಸಿರೋ ಬಾಲಿವುಡ್ ಚಿತ್ರದ ಕಾಕ್ಟೈಲ್ 2 (Cocktail 2) ರಿಲೀಸ್ ಡೇಟ್ ಜತೆ ಫಸ್ಟ್ ಲುಕ್ ರಿವೀಲ್ ಆಗಿದೆ.
ಶಾಹಿದ್ ಕಪೂರ್(Shahid Kapoor), ಕೃತಿ ಸನೋನ್ (Kriti Sanon), ರಶ್ಮಿಕಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮೂವರ ಫಸ್ಟ್ ಲುಕ್ ರಿವೀಲ್ ಆಗಿದೆ. ಮೂವರ ಸ್ಟೈಲೀಶ್ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಹಲ್ಚಲ್ ಎಬ್ಬಿಸಿದೆ. ಮಾ.18ರಂದು ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡೋದಾಗಿ ಚಿತ್ರತಂಡ ಹೇಳಿದೆ.
View this post on Instagram
ಕಾಕ್ಟೈಲ್ 2 ರೊಮ್ಯಾಂಟಿಕ್ ಲವ್ ಸ್ಟೋರಿ. ಆದರೆ ಇಲ್ಲೋಂದು ಮಸ್ತ್ ಆಗಿರೋ ಟ್ವಿಸ್ಟ್ ಅನ್ನು ಡೈರೆಕ್ಟರ್ ಕೊಟ್ಟಿದ್ದಾರೆ. ಕೃತಿ- ರಶ್ಮಿಕಾ ಲೆಸ್ಬಿಯನ್ ಜೋಡಿಗಳಾಗಿ ನಟಿಸಿದ್ದಾರೆ. ಹಾಗಾದ್ರೆ ಶಾಹಿದ್, ರಶ್ಮಿಕಾ, ಕೃತಿ ಈ ಮೂವರ ಜರ್ನಿ ಹೇಗೆ ಮೂಡಿ ಬಂದಿದೆ ಅನ್ನೋದನ್ನು ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.

ನಟಿಯ ಮದುವೆ ಬಳಿಕ ರಿಲೀಸ್ಗೆ ರೆಡಿಯಿರೋ ಮೊದಲ ಚಿತ್ರ ಇದಾಗಿದೆ. ಜೂನ್ 19ರಂದು ಥಿಯೇಟರ್ನಲ್ಲಿ ಅಬ್ಬರಿಸಲಿದೆ. ಅನಿಮಲ್, ಛಾವಾ ಮೂಲಕ ಸಕ್ಸಸ್ ಕಂಡಿರೋ ರಶ್ಮಿಕಾ, ಕಾಕ್ಟೈಲ್ 2ನಿಂದ ಮತ್ತೆ ಗೆಲುವು ಸಿಗುತ್ತಾ ಎಂದು ಕಾದುನೋಡಬೇಕಿದೆ.

