ಸ್ವರ್ಗದಂತಿದೆ ವಿರೋಶ್ Haldi ಸಂಭ್ರಮದ ಝಲಕ್- ಫೋಟೋಸ್ ವೈರಲ್
ಕೂರ್ಗ್ ಬ್ಯೂಟಿ ರಶ್ಮಿಕಾ ಮಂದಣ್ಣ(Rashmika Mandanna), ವಿಜಯ್ ದೇವರಕೊಂಡ (Vijay Devarakonda) ಮದುವೆಯ ಹಳದಿ (Haldi) ಶಾಸ್ತ್ರ ಅದ್ಧೂರಿಯಾಗಿ ಜರುಗಿದೆ. ಅದರ ಸುಂದರ ಫೋಟೋಗಳನ್ನು ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಉದಯಪುರದಲ್ಲಿ ವಿರೋಷ್ ಜೋಡಿಯ ಸಂಗೀತ್, ಮೆಹಂದಿ, ಹಳದಿ ಮತ್ತು ಮದುವೆಯ ಸಂಭ್ರಮ ಅದ್ಧೂರಿಯಾಗಿ ಜರುಗಿತ್ತು.

ಹಳದಿ ಶಾಸ್ತ್ರವೂ ಹೋಳಿಯಂತಿತ್ತು ಎಂದು ವಧು ರಶ್ಮಿಕಾ ಖುಷಿಯಿಂದ ಹೇಳಿಕೊಂಡಿದ್ದಾರೆ. ಅದಷ್ಟೇ ಅಲ್ಲ, ಅಂದು ನನ್ನ ತಂಡದ ಬೆಂಬಲದಿಂದ ನಾನು ಎಲ್ಲಾ ಗೇಮ್‌ಗಳನ್ನು ಗೆದ್ದಿದ್ದೆ, ಪತಿ ವಿಜು ಕೂಡ ನನ್ನ ಟೀಮ್ ಅನ್ನೇ ಸೇರಿಕೊಂಡಿದ್ರು ಎಂದು ಹೇಳಿದ್ದಾರೆ.
View this post on Instagram
ಗಿಳಿ ಹಸಿರು ಬಣ್ಣದ ಧಿರಿಸಿನಲ್ಲಿ ಶ್ರೀವಲ್ಲಿ ರಶ್ಮಿಕಾ ಮಂದಣ್ಣ ಮಿಂಚಿದ್ರೆ, ಲೈಟ್ ಬಣ್ಣದ ಶೆರ್ವಾನಿಯಲ್ಲಿ ದೇವರಕೊಂಡ ಕಂಗೊಳಿಸಿದ್ರು. ಅರಿಶಿಣ ನೀರಿನಲ್ಲಿ ಇಬ್ಬರೂ ಮಿಂದೆದ್ದರು.

ಹಳದಿ ಶಾಸ್ತ್ರದ ನಡೆಯುವ ಸ್ಥಳಕ್ಕೆ ನವಜೋಡಿಗಳಾದ ವಿರೋಶ್ ದೋಣಿ ಪ್ರಯಾಣ ಏಂಜಾಯ್ ಮಾಡಿಕೊಂಡು ಬಂದಿದ್ದಾರೆ. ಆ ನಂತರ ದೋಣಿ ಇಳಿದು ಹೆಜ್ಜೆ ಹಾಕಿದ್ದಾರೆ.

ಮಗ ವಿಜಯ್, ಸೊಸೆ ರಶ್ಮಿಕಾ ಮಂದಣ್ಣಗೆ ಹಳದಿ ಹಚ್ಚಿ ಮಾಧವಿ ಸಂಭ್ರಮಿಸಿದ್ದಾರೆ.

ಎರಡು ಕಣ್ಗಳಂತೆ ಇರುವ ಅಮ್ಮ ಮತ್ತು ಪತ್ನಿ ರಶ್ಮಿಕಾ ಅವರನ್ನ ತಬ್ಬಿದ ವಿಜಯ್ ದೇವರಕೊಂಡ.

7 ವರ್ಷಗಳ ಸುದೀರ್ಘ ಪ್ರೀತಿಗೆ ಫೆ.26ರಂದು ವಿಜಯ್- ರಶ್ಮಿಕಾ ಹಸೆಮಣೆ ಏರಿದರು. ಉದಯಪುರದಲ್ಲಿ ಈ ಮದುವೆ ಸಂಭ್ರಮ ಅದ್ಧೂರಿಯಾಗಿ ಜರುಗಿತ್ತು. ಈ ಸಂಭ್ರಮಕ್ಕೆ ಕನ್ನಡದ ನಟಿ ಆಶಿಕಾ ರಂಗನಾಥ್ ಹಾಜರಿ ಹಾಕಿದ್ರು.

ವಿರೋಶ್ ಮದುವೆ ಆರತಕ್ಷತೆ ಹೈದರಾಬಾದ್‌ನಲ್ಲಿ ಮಾ.4ರಂದು ನಡೆದಿತ್ತು. ಈ ಸಂಭ್ರಮಕ್ಕೆ ಸೌತ್ ಸಿನಿಮಾರಂಗ, ಬಾಲಿವುಡ್ ಸ್ಟಾರ್‌ಗಳ ದಂಡೇ ಹರಿದು ಬಂದಿತ್ತು.

ಅಂದಹಾಗೆ, ವಿಜಯ್, ರಶ್ಮಿಕಾ ಜೋಡಿಯಾಗಿ ʻರಣಬಾಲಿʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ಒಂದು ಸಾಂಗ್ ರಿಲೀಸ್ ಆಗಿದ್ದು, ಇನ್ನೂ ಚಿತ್ರೀಕರಣ ಬಾಕಿಯಿದೆ.

