‘ಕಂಟ್ರಿ ಮೇಡ್ ಭಾಗ 2ʼ ಚಿತ್ರದ ಟೈಟಲ್ ಲಾಂಚ್‌ ಮಾಡಿದ ರಿಯಲ್‌ ಸ್ಟಾರ್

‘ಕಂಟ್ರಿ ಮೇಡ್ ಭಾಗ 2ʼ ಚಿತ್ರದ ಟೈಟಲ್ ಲಾಂಚ್‌ ಮಾಡಿದ ರಿಯಲ್‌ ಸ್ಟಾರ್

ಹೊಸ ಬಗೆಯ ವಿಭಿನ್ನ ಕಥೆ ಕೊಡೋದ್ರಲ್ಲಿ ಡೈರೆಕ್ಟರ್ ಅರವಿಂದ್‌ ಕೌಶಿಕ್‌ (Aravind Kaushik) ಯಾವಾಗಲೂ ಮುಂದು. ಈಗ ʻಕಂಟ್ರಿ ಮೇಡ್‌ ಭಾಗ 2ʼರ ಅಂತಹ ವಿಭಿನ್ನ ಸಿನಿಮಾವನ್ನು ಹೇಳೋಕೆ ಅವರು ಹೊರಟಿದ್ದಾರೆ. ಈ ಸಿನಿಮಾದ ಟೈಟಲ್‌ ಅನ್ನು ನಟ ಉಪೇಂದ್ರ (Upendra) ಲಾಂಚ್‌ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

ʻಕಂಟ್ರಿ ಮೇಡ್ ಭಾಗ 2ʼ (Country Made Part 2) ಸಿನಿಮಾ. ನಮ್ಮೂರಲ್ಲಿ ನೊಣಗಳು ಜಾಸ್ತಿ ಯಾಕೆ ಅಂದ್ರೆ ನಮ್ಮೂರಲ್ಲಿ ಹೆಣಗಳು ಜಾಸ್ತಿ ಎನ್ನುತ್ತಲೇ ಅರವಿಂದ್ ಕೌಶಿಕ್ ಒಂದು ಕಂಟ್ರಿ ಮೇಡ್ ಕಥೆ ಹೇಳಲು ಹೊರಟಿದ್ದಾರೆ. ಸಿನಿಮಾ ಮಾಡಲು ಸಿಕ್ಕಾಪಟ್ಟೆ ದೊಡ್ಡ ಬಜೆಟ್‌, ದೊಡ್ಡ ತಾರಾಗಣದೊಂದಿಗೆ ಒಂದೊಳ್ಳೆ ಕಥೆ , ತಾಜಾ ನಿರೂಪಣೆಯ ಶೈಲಿ, ಜನರ ಮನಸಲ್ಲಿ ಉಳಿಯುವಂಥ ಪಾತ್ರಗಳು ಹೀಗೆ ಎಲ್ಲವನ್ನೂ ಒಟ್ಟಿಗೂಡಿಸಿಕೊಂಡು ಒಂದು ಉತ್ಸಾಹಿ ತಂಡದೊಂದಿಗೆ ಬಹಳ ವರ್ಷಗಳ ಕಾಲ ಸಿನೆಮಾ ಸಂಭಾಷಣೆಗಳಲ್ಲಿ ಸೇರಿಕೊಳ್ಳಬೇಕು ಎಂಬ ಆಶಯದೊಂದಿಗೆ ಮಾಡಿರುವ ಸಿನಿಮಾನೇ ಕಂಟ್ರಿ ಮೇಡ್.


ಇದೊಂದು ದೈವದ ದೈತ್ಯರ ಒಪ್ಪಂದಗಳ ಕಥೆ ಎನ್ನುತ್ತಲೇ ಕುತೂಹಲ ಮೂಡಿಸಿದ್ದಾರೆ. ಮನುಷ್ಯ ಮನಸ್ಸುಗಳಲ್ಲಿನ ರಾಕ್ಷಸ ಪ್ರವೃತ್ತಿ ಮತ್ತು ಭಾವನೆಗಳನ್ನು ಬಿಂಬಿಸುವ ಕಥಾಹಂದರವನ್ನು ಅರವಿಂದ್‌ ಕೌಶಿಕ್‌ ಹೊತ್ತು ತಂದಿದ್ದಾರೆ. ʻಪೆಂಡಾಲ್ಪುರʼ ಎಂಬ ಕಾಲ್ಪನಿಕ ಊರನ್ನು ಸೃಷ್ಟಿಸಿ. ಅಲ್ಲಿ ದೈವ ಮತ್ತು ದೈತ್ಯರ ನಡುವಿನ ಒಪ್ಪಂದಗಳ ಕುರಿತಾದ ಕಥಾಹಂದರವನ್ನು ಕಂಟ್ರಿ ಮೇಡ್ ಮುಖೇನ ತೆರೆಗೆ ತರುತ್ತಿದ್ದಾರೆ.

ʻಹುಲಿರಾಯʼ ಮತ್ತು ʻಅರ್ಧಂಬರ್ಧ ಪ್ರೇಮಕಥೆʼ ಚಿತ್ರಗಳ ಛಾಯಾಗ್ರಾಹಕ ಸೂರ್ಯ ರವರ ಕೆಲಸ, ಅರ್ಜುನ್ ರಾಮು ರವರ ಸಂಗೀತ ಸಂಯೋಜನೆ, ಜೊತೆಗೆ ಉಮೇಶ್ ಮಠಪತಿ, ಸೂರ್ಯ ,ಅರವಿಂದ್ ಕೌಶಿಕ್ ಹಾಗೂ ಚಂದನ್ ಗೌಡ ರವರ ನಿರ್ಮಾಣ ಚಿತ್ರಕ್ಕೆ ಇದೆ. ಸತೀಶ್ ಬ್ರಹ್ಮಾವರ ರ ನಿರ್ಮಾಣ ನಿರ್ವಹಣೆ ಚಿತ್ರಕ್ಕೆ ಇದೆ. ಸಂತೋಷ್ ರಾಧಾಕೃಷ್ಣನ್ ಈ ಚಿತ್ರಕ್ಕೆ VFX ಹಾಗು ಪೋಸ್ಟರ್ ಗಳನ್ನ ಸಂಯೋಜಿಸಿದ್ದಾರೆ.

ಈ ಸಿನಿಮಾ ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ರಿಯಲ್ ಸ್ಟಾರ್ ಉಪೇಂದ್ರ ಅವರು ಚಿತ್ರದ ಟೈಟಲ್ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಚಿತ್ರದಲ್ಲಿ ಅಭಿಲಾಷ್ ದ್ವಾರಕೀಶ್, ರಾಘವ ರಾಮ್, ಪ್ರದೀಪ್ ರೋಷನ್, ಕುಲದೀಪಕ, ಗೌರವ್ ಆರ್ಯನ್ , ಕುಲದೀಪ್, ಸುಜಿತ್ ಶೆಟ್ಟಿ, ಅಶ್ವಿತ ಗೌಡ, ಅಪೂರ್ವ ಶ್ರೀ, ಸುಧಾ ಪ್ರಸನ್ನ,ರೇಣುಕಾ ಮುಂತಾದವರು ನಟಿಸಿದ್ದಾರೆ.

News Desk Sandalwood Times

error: Content is protected !!