Yash ಫ್ಯಾನ್ಸ್‌ಗೆ ಶಾಕ್‌- Toxic ಮಾ.19ಕ್ಕೆ ರಿಲೀಸ್‌ ಆಗಲ್ಲ, ಮತ್ತೆ ಯಾವಾಗ?

Yash ಫ್ಯಾನ್ಸ್‌ಗೆ ಶಾಕ್‌- Toxic ಮಾ.19ಕ್ಕೆ ರಿಲೀಸ್‌ ಆಗಲ್ಲ, ಮತ್ತೆ ಯಾವಾಗ?

ರಾಕಿಂಗ್‌ ಸ್ಟಾರ್‌ ಯಶ್‌ (Yash) ಅವರ ‘ಟಾಕ್ಸಿಕ್‌’ (Toxic) ಚಿತ್ರದ ದರ್ಶನಕ್ಕೆ ಕಾಯುತ್ತಿದ್ದ ಫ್ಯಾನ್ಸ್‌ಗೆ ಇದು ಶಾಕಿಂಗ್‌ ನ್ಯೂಸ್. ಮಾ.೧೯ರಂದು ರಿಲೀಸ್‌ ಆಗಬೇಕಿದ್ದ ಸಿನಿಮಾ ಮುಂದಕ್ಕೆ ಹೋಗಿದೆ. ಜೂನ್ 4ರಂದು ರಿಲೀಸ್‌ ಮಾಡೋದಾಗಿ ತಂಡ ತಿಳಿಸಿದೆ.


ಯುದ್ಧ ಪರಿಣಾಮ ರಿಲೀಸ್‌ ಡೇಟ್‌ ಮುಂದಕ್ಕೆ ಹಾಕಿರೋದಾಗಿ ಯಶ್‌ & ಟೀಮ್‌ ಪತ್ರದ ಮೂಲಕ ತಿಳಿಸಿದ್ದಾರೆ. ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧ ಭೀತಿ ನಿರ್ಮಾಣ ಆಗಿದೆ. ಈ ಬಿಕ್ಕಟ್ಟು ಸದ್ಯಕ್ಕಂತೂ ಪರಿಹಾರ ಆಗುವ ಲಕ್ಷಣ ಕಾಣಿಸುತ್ತಿಲ್ಲ. ಅಬುದಾಬಿ ಮೊದಲಾದ ಕಡೆಗಳಲ್ಲಿ ದಾಳಿ ಆಗುತ್ತಿದೆ. ಈ ಕಾರಣವನ್ನು ನೀಡಿ ಟಾಕ್ಸಿಕ್ ಮುಂದಕ್ಕೆ ಹಾಕಿರೋದಾಗಿ ತಂಡ ಮಾಹಿತಿ ಕೊಟ್ಟಿದೆ.

ಯಶ್‌ ಹಂಚಿಕೊಂಡ ಆ ಪೋಸ್ಟ್‌ನಲ್ಲಿ ಏನಿದೆ?

ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಚಿತ್ರವನ್ನು ನಾವು ಜಾಗತಿಕ ಪ್ರೇಕ್ಷಕರಿಗಾಗಿ ಸಿನಿಮಾ ನಿರ್ಮಿಸುವ ಆಶಯದೊಂದಿಗೆ ರೂಪಿಸಿದ್ದೇವೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಿಸಲಾದ ಈ ಸಿನಿಮಾ, ದೇಶದ ಹಾಗೂ ವಿದೇಶದ ಪ್ರೇಕ್ಷಕರನ್ನು ತಲುಪುವ ದೃಢ ವಿಶ್ವಾಸದೊಂದಿಗೆ ಸಿದ್ಧವಾಗಿದೆ.

ಹಲವು ವರ್ಷಗಳ ಶ್ರಮದ ನಂತರ, ನಮ್ಮ ಚಿತ್ರವನ್ನು ಮಾರ್ಚ್ 19ರಂದು ನಿಮ್ಮ ಮುಂದೆ ತರಲು ನಾವು ಉತ್ಸುಕರಾಗಿದ್ದೆವು. ಆದರೆ, ಪ್ರಸ್ತುತ ಜಗತ್ತಿನಲ್ಲಿ (ವಿಶೇಷವಾಗಿ ಮಧ್ಯಪ್ರಾಚ್ಯದಲ್ಲಿ) ಉಂಟಾಗಿರುವ ಅನಿಶ್ಚಿತತೆಯು, ಚಿತ್ರವನ್ನು ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಿಗೆ ತಲುಪಿಸುವ ನಮ್ಮ ಗುರಿಯ ಮೇಲೆ ಪರಿಣಾಮ ಬೀರಿದೆ.

ಆದ್ದರಿಂದ, ನಮ್ಮ ಪಾಲುದಾರರ ಮತ್ತು ಪ್ರೇಕ್ಷಕರ ಹಿತದೃಷ್ಟಿಯಿಂದ, ಚಿತ್ರದ ಬಿಡುಗಡೆಯ ದಿನಾಂಕವನ್ನು ಮರುನಿಗದಿಪಡಿಸುವ ಕಠಿಣ ಹಾಗೂ ಎಚ್ಚರಿಕೆಯ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ. ನಿಮ್ಮ ತಿಳುವಳಿಕೆ ಮತ್ತು ತಾಳ್ಮೆಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ ಹಾಗೂ ನಿಮ್ಮ ಪ್ರೀತಿ ಮತ್ತು ಬೆಂಬಲ ಹೀಗೆಯೇ ಇರಲಿ ಎಂದು ಆಶಿಸುತ್ತೇವೆ.

 

View this post on Instagram

 

A post shared by Yash (@thenameisyash)

ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್. ಈಗ ಜಗತ್ತಿನಾದ್ಯಂತ ಇಂಗ್ಲಿಷ್ ಮತ್ತು ಭಾರತೀಯ ಭಾಷೆಗಳಲ್ಲಿ 2026ರ ಜೂನ್ 4ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಈ ಸಿನಿಮಾದಲ್ಲಿ ಯಶ್‌ ಜೊತೆ ಕಿಯಾರಾ ಅಡ್ವಾಣಿ (Kaira Advani), ನಯನತಾರಾ, ರುಕ್ಮಿಣಿ ವಸಂತ್‌, ಹುಮಾ ಖುರೇಶಿ, ಬಾಲಾಜಿ ಮನೋಹರ್‌ ಸೇರಿದಂತೆ ಅನೇಕರು ನಟಿಸಿದ್ದಾರೆ.

News Desk Sandalwood Times

error: Content is protected !!