Pavazha Malli: ಆಲ್ಬಂ ಸಾಂಗ್‌ನಿಂದ ಧೂಳೆಬ್ಬಿಸಿದ ಕನ್ನಡದ ʻಮುಗಿಲುಪೇಟೆʼ ನಟಿ

Pavazha Malli: ಆಲ್ಬಂ ಸಾಂಗ್‌ನಿಂದ ಧೂಳೆಬ್ಬಿಸಿದ ಕನ್ನಡದ ʻಮುಗಿಲುಪೇಟೆʼ ನಟಿ

ನ್ನಡದ ʻಮುಗಿಲುಪೇಟೆʼ ಚಿತ್ರದ (Mugilupete) ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಕಯಾದು ಲೋಹರ್‌ ಮತ್ತೆ ಸುದ್ದಿಯಲ್ಲಿದ್ದಾರೆ. Pavazha Malli ಎಂಬ ಆಲ್ಬಂ ಸಾಂಗ್‌ನಿಂದ ನಟಿ ಟ್ರೆಂಡ್‌ನಲ್ಲಿದ್ದಾರೆ. ಗಾಯಕ ಸಾಯಿ ಅಭ್ಯಂಕರ್ (Sai  Abhyankkar) ಜತೆ ಕಯಾದು (Kayadu Lohar) ಹೆಜ್ಜೆ ಹಾಕಿದ್ದಾರೆ.

 

View this post on Instagram

 

A post shared by Sai Abhyankkar (@abhyankkar)

ʻಡ್ಯೂಡ್‌ʼ ಚಿತ್ರದ (Dude) ಮೂಲಕ ಸಕ್ಸಸ್‌ ಕಂಡಿರೋ ಚೆಂದುಳ್ಳಿ ಚೆಲುವೆ ಕಯಾದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಸಾಯಿ ಅಭ್ಯಂಕರ್‌ ಜೊತೆ ಮಸ್ತ್‌ ಆಗಿ ಹೆಜ್ಜೆ ಹಾಕಿದ್ದಾರೆ. ಹಳ್ಳಿ ಹುಡುಗಿ ಗೆಟಪ್‌ನಲ್ಲಿ ನಟಿ ಮಿಂಚಿದ್ದಾರೆ. ಯೂಟ್ಯೂಬ್‌ನಲ್ಲಿ ೩೫ ಮಿಲಿಯನ್‌ಗೂ ಅಧಿಕ ವಿವ್ಸ್‌ ಆಗಿ ೪೦ ಮಿಲಿಯನ್‌ ಕಡೆ ಮುನ್ನುಗ್ಗುತ್ತಿದೆ. ಈ ಮೂಲಕ ಸಾಂಗ್‌ ಟ್ರೆಂಡ್‌ ಸೃಷ್ಟಿ ಮಾಡಿದೆ.

ಗಾಯಕ ಸಾಯಿ ಅಭ್ಯಂಕರ್ ಹೊಸ ಸಿಂಗಲ್ ಆಲ್ಬಂನೊಂದಿಗೆ ಮರಳಿದ್ದಾರೆ. ಹೊಸ ಟ್ರ್ಯಾಕ್ ಮೂಲಕ ನಿರ್ಮಾಪಕ ಮತ್ತು ಸಂಯೋಜಕರಾಗಿದ್ದಾರೆ. ಇದಕ್ಕೆ ವಿವೇಕ್ ಸಾಹಿತ್ಯ ಬರೆದಿದ್ದಾರೆ. ಸಲಾರ್‌ ನಟಿ ಶ್ರುತಿ ಹಾಸನ್ ಹಾಡಿದ್ದಾರೆ. ವಿಆರ್ ಚೆನ್ನೈನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ವೀಡಿಯೊವನ್ನು ರಿಲೀಸ್ ಮಾಡಿದ್ದಾರೆ.

ಇನ್ನೂʻಪಾವಝಾ ಮಲ್ಲಿʼ ಎಂಬ ಪದಕ್ಕೆ ಇಂಗ್ಲಿಷ್‌ನಲ್ಲಿ ಕೋರಲ್ ಜಾಸ್ಮಿನ್ ಎಂದು ಅರ್ಥ ಇದೆ. ಒಟ್ನಲ್ಲಿ Pavazha Malli ಹಾಡಿನ ಹಾವಳಿ ಹೆಚ್ಚಾಗಿದೆ.

News Desk Sandalwood Times

error: Content is protected !!