ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸಂಜನಾ ಬುರ್ಲಿ
ಪುಟ್ಟಕ್ಕನ ಮಕ್ಕಳು, ಗಂಧದಗುಡಿ ಸೀರಿಯಲ್ ಖ್ಯಾತಿಯ ಸಂಜನಾ ಬುರ್ಲಿ (Sanjana Burli) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿ ಸಂಜನಾಗೆ (Samarth) ಡಾಕ್ಟರ್ ಸಮರ್ಥ ತಾಳಿ ಕಟ್ಟಿ ಮುತ್ತಿಟ್ಟಿದ್ದಾರೆ. ಮದುವೆಯ (Wedding) ಸುಂದರ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಇತ್ತೀಚೆಗೆ ನಟಿ ಸರಳವಾಗಿ ಸಮರ್ಥ್ ಜತೆ ಎಂಗೇಜ್‌ಮೆಂಟ್ ಮಾಡಿಕೊಂಡರು. ಗುರುಹಿರಿಯರು ನಿಶ್ಚಿಯಿಸಿದ ಮದುವೆ ಇದಾಗಿದ್ದು, ಮಾ.25ರಂದು ಬೆಂಗಳೂರಿನ ರೆಸಾರ್ಟ್‌ವೊಂದರಲ್ಲಿ ನಟಿ ಹಸೆಮಣೆ ಏರಿದ್ದಾರೆ. ಖುಷಿ ಖುಷಿಯಾಗಿ ಸಮರ್ಥ್ ಜತೆ ಸಂಜನಾ ಮದುವೆಯಾಗಿದ್ದಾರೆ.
View this post on Instagram
ಈ ಮದುವೆಗೆ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ಬಿಗ್ ಬಾಸ್ ಮೋಕ್ಷಿತಾ ಪೈ (Mokshitha Pai), ಪುಟ್ಟಕ್ಕನ ಮಕ್ಕಳು ಹಾಗೂ ಗಂಧದಗುಡಿ ಸೀರಿಯಲ್ ಟೀಮ್ ಕೂಡ ಭಾಗಿಯಾಗಿದೆ. ನವಜೋಡಿಗೆ ಶುಭಕೋರಿದ್ದಾರೆ.

