Rashmika- Vijay Reception- ಸೌತ್, ಬಾಲಿವುಡ್ ಮಂದಿಯಿಂದ ಡಬಲ್ ಆಯ್ತು ಸಂಭ್ರಮ
ಕರ್ನಾಟಕದ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಮದುವೆ ಆರತಕ್ಷತೆಗೆ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿದೆ. ಕನ್ನಡದ ತಾರೆಯರು, ಸೌತ್ ಮತ್ತು ಬಾಲಿವುಡ್ ಮಂದಿಯ ದಂಡೇ ವಿರೋಷ್ ಫಂಕ್ಷನ್‌ಗೆ ಹಾಜರಿ ಹಾಕಿದೆ. ಯಾರೆಲ್ಲಾ ಬಂದಿದ್ರು ಇಲ್ಲಿದೆ ವಿವರ.

ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಅವರು ಆಗಮಿಸಿ ಟಾಲಿವುಡ್ ರಿಯಲ್ ಕಪಲ್ ವಿಜಯ್- ರಶ್ಮಿಕಾ ಶುಭ ಕೋರಿ ತೆರಳಿದರು. ಅವರ ಕುಟುಂಬದ ಜತೆಗೂ ಫೋಟೋ ಕ್ಲಿಕ್ಕಿಸಿಕೊಂಡರು.

`ಪುಷ್ಪ 2′ ಮೂಲಕ ಹಿಟ್ ಫೇರ್ ಆಗಿರೋ ಪುಷ್ಪರಾಜ್ ಅಲಿಯಾಸ್ ಅಲ್ಲು ಅರ್ಜುನ್ (Allu Arjun) ಅವರು ಶ್ರೀವಲ್ಲಿ ಅಲಿಯಾಸ್ ರಶ್ಮಿಕಾ ವಿಜಯ್‌ಗೆ ಸಂಭ್ರಮದಿಂದ ಶುಭಕೋರಿದ್ರು.
ಬಾಲಿವುಡ್‌ನ ಕಾಕ್‌ಟೈಲ್ 2ನಲ್ಲಿ ಕೃತಿ ಸನೋನ್ (Kriti Sanon) ಜೊತೆ ರಶ್ಮಿಕಾ ನಟಿಸಿದ್ದಾರೆ. ಈ ಹಿನ್ನೆಲೆ ಅವರೊಂದಿಗೆ ಶ್ರೀವಲ್ಲಿಗೆ ಉತ್ತಮ ಸ್ನೇಹ ಒಡನಾಟವಿದೆ. ಹಾಗಾಗಿ ಮುಂಬೈನಿಂದ ಬಂದು ನವಜೋಡಿ ಪರಮ ಸುಂದರಿ ವಿಶ್ ಮಾಡಿದ್ದಾರೆ.

ಶ್ರೀಲೀಲಾ (Sreeleela) ಕೂಡ ಕನ್ನಡದವರೇ. ಅವರು ರಶ್ಮಿಕಾ ಹಾದಿಯಲ್ಲಿ ಹೆಜ್ಜೆ ಇಡ್ತಿದ್ದಾರೆ. ಕನ್ನಡ, ತೆಲುಗು ಬಳಿಕ ಬಾಲಿವುಡ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ರಶ್ಮಿಕಾ- ವಿಜಯ್ ಮದುವೆ ಆರತಕ್ಷತೆ ಸಂಭ್ರಮದಲ್ಲಿ ಅವರು ಭಾಗಿಯಾಗಿದ್ದಾರೆ.

ಬಾಲಿವುಡ್‌ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ (Karan Johar), ಮೃಣಾಲ್ ಠಾಕೂರ್(Mrunal Thakur), ನಾಗಾರ್ಜುನ ಅಕ್ಕಿನೇನಿ ಕುಟುಂಬ, ವರಲಕ್ಷ್ಮಿ ಶರತ್‌ಕುಮಾರ್, ಕೃತಿ ಶೆಟ್ಟಿ, ಸುಕುಮಾರ್, ರವಿತೇಜ, ಆಶಿಕಾ ರಂಗನಾಥ್, ನಾನಿ ಸೇರಿದಂತೆ ಆಗಮಿಸಿ ವಿರೋಷ್ ಸಂಭ್ರಮ ಡಬಲ್ ಮಾಡಿದ್ದಾರೆ.

