ಫೆ.14ರಂದು ಮೃಣಾಲ್ ಠಾಕೂರ್ ಜೊತೆ ಧನುಷ್ ಮದುವೆ?

ಫೆ.14ರಂದು ಮೃಣಾಲ್ ಠಾಕೂರ್ ಜೊತೆ ಧನುಷ್ ಮದುವೆ?

ಕಾಲಿವುಡ್ ಸ್ಟಾರ್ ನಟ ಧನುಷ್ (Dhanush) ಅವರು ಮೃಣಾಲ್ ಠಾಕೂರ್ (Mrunal Thakur) ಜೊತೆ ಫೆ.14ರಂದು 2ನೇ ಮದುವೆಗೆ (Wedding) ಸಿದ್ಧರಾಗಿದ್ದಾರೆ ಎನ್ನಲಾದ ವಿಚಾರವೊಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಧನುಷ್ ಎರಡನೇ ಮದುವೆ ವಿಷ್ಯವಾಗಿ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಆಗಾಗ ಧನುಷ್ ಮತ್ತು ಮೃಣಾಲ್ ಡೇಟಿಂಗ್ ವಿಚಾರ ಕೇಳಿ ಬರುತ್ತಿತ್ತು. ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಆದರೆ ಇಬ್ಬರೂ ಈ ಬಗ್ಗೆ ಸ್ಪಷ್ಟನೆ ಕೊಡೋ ಕೆಲಸ ಮಾಡ್ತಿಲ್ಲ. ಕಳೆದ ವರ್ಷ ಮೃಣಾಲ್ ನಟಿಸಿದ್ದ `ಸನ್ ಆಫ್ ಸರ್ದಾರ್ 2′ ಪ್ರೀಮಿಯರ್ ಶೋನಲ್ಲಿ ಧನುಷ್ ಭಾಗವಹಿಸಿದ್ದರು. ಇತ್ತ ಧನುಷ್ ನಟಿಸಿದ್ದ ಸಿನಿಮಾ ಪಾರ್ಟಿಯಲ್ಲಿ ನಟಿ ಕಾಣಿಸಿಕೊಂಡಿದ್ದರು. ಹಾಗಾಗಿ ಇಬ್ಬರ ಸಂಬಂಧದ ಬಗ್ಗೆ ಪುಕಾರು ಹರಿದಾಡಿದ್ದವು.

ಸದ್ಯ ಹರಿದಾಡುತ್ತಿರುವ ವಿಚಾರ ಏನಂದ್ರೆ, ಇದೇ ಫೆ.14ರಂದು ಧನುಷ್ ಮತ್ತು ಮೃಣಾಲ್ ಠಾಕೂರ್ ಹಸೆಮಣೆ ಏರಲು ರೆಡಿಯಾಗಿದ್ದಾರೆ ಎನ್ನಲಾಗಿದೆ.‌ ಈ ಜೋಡಿ ಕುಟುಂಬ, ಆಪ್ತ ಬಳಗದ ಮುಂದೆ ಮದುವೆ ಆಗೋ ಪ್ಲ್ಯಾನ್ ಮಾಡಲಾಗಿದೆಯಂತೆ. ಅಷ್ಟಕ್ಕೂ ಈ ಸುದ್ದಿ ಬಗ್ಗೆ ಇಬ್ಬರೂ ಕ್ಲ್ಯಾರಿಟಿ ಕೊಡ್ತಾರಾ ಕಾಯಬೇಕಿದೆ. ಇನ್ನೂ ಇದು ಧನುಷ್‌ಗೆ 2ನೇ ಮದುವೆಯಾಗಿದ್ರೆ, ನಟಿಗೆ ಮೊದಲ ಮದುವೆ ಆಗಿರಲಿದೆ.

ಅಂದಹಾಗೆ, 2004ರಲ್ಲಿ ರಜನೀಕಾಂತ್ (Rajinikanth) ಪುತ್ರಿ ಐಶ್ವರ್ಯಾ ಜೊತೆ ಧನುಷ್ ಮದುವೆಯಾದರು. ಇವರಿಗೆ ಇಬ್ಬರೂ ಗಂಡು ಮಕ್ಕಳಿದ್ದಾರೆ. 2022ರಲ್ಲಿ ಪರಸ್ಪರ ಒಪ್ಪಿಗೆಯ ಮೇರೆಗೆ ಧನುಷ್ ಮತ್ತು ಐಶ್ವರ್ಯಾ ಡಿವೋರ್ಸ್ ಪಡೆದರು. ಈ ಮೂಲಕ 18 ವರ್ಷಗಳ ದಾಂಪತ್ಯಕ್ಕೆ ಬ್ರೇಕ್ ಹಾಕಿದರು.

News Desk Sandalwood Times

error: Content is protected !!