Virosh Reception: ಕರ್ನಾಟಕದ ಶ್ರೇಷ್ಠ ಪರಂಪರೆ ಮೈಸೂರು ಸಿಲ್ಸ್‌ ಸೀರೆಯಲ್ಲಿ ಮಿಂಚಿದ ರಶ್ಮಿಕಾ

Virosh Reception: ಕರ್ನಾಟಕದ ಶ್ರೇಷ್ಠ ಪರಂಪರೆ ಮೈಸೂರು ಸಿಲ್ಸ್‌ ಸೀರೆಯಲ್ಲಿ ಮಿಂಚಿದ ರಶ್ಮಿಕಾ

ನ್ನಡದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್‌ ದೇವರಕೊಂಡ (Vijay Devarakonda) ಮದುವೆ ಆರತಕ್ಷತೆ ಅದ್ಧೂರಿಯಾಗಿ ಹೈದರಾಬಾದ್‌ ಮಾ.4ರಂದು ಜರುಗಿತು. ಈ ವೇಳೆ, ರಶ್ಮಿಕಾ ಕರ್ನಾಟಕದ ಶ್ರೇಷ್ಠ ಪರಂಪರೆ ಮೈಸೂರು ಸಿಲ್ಕ್‌ ಸೀರೆಯಲ್ಲಿ ಮಿಂಚಿದ್ರೆ, ವಿಜಯ್‌ ಶರ್ಟ್‌ ಮತ್ತು ಪಂಚೆಯುಟ್ಟು ಹೈಲೆಟ್‌ ಆಗಿದ್ದಾರೆ.

ಆರತಕ್ಷತೆಯಲ್ಲಿ ಕರ್ನಾಟಕದ ಹೆಮ್ಮೆ ಮೈಸೂರು ಸಿಲ್ಕ್‌ ಸೀರೆಯುಟ್ಟು ಅದಕ್ಕೆ ಒಪ್ಪುವ ಆಭರಣ ಧರಿಸಿ ರಶ್ಮಿಕಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಮದುವೆಯಲ್ಲಿ ನಟಿ ತೆಲುಗು ಅಮ್ಮಾಯಿಯಂತೆ ಮಿಂಚಿದ್ರು. ಈಗ ಕನ್ನಡತಿಯಾಗಿ ಕರ್ನಾಟಕದ ಪರಂಪರೆಯನ್ನು ಸೀರೆ ಉಡುವ ಮೂಲಕ ತಮ್ಮ ಪ್ರೀತಿಯನ್ನು ತೋರಿಸಿದ್ದಾರೆ ನಟಿ. ಇದು ಕನ್ನಡಿಗರ ಮನಗೆದ್ದಿದೆ.

ಇನ್ನೂ ಕರ್ನಾಟಕದ ಅಳಿಯ ಆಗಿರೋ ವಿಜಯ್‌ ಅವರು ಸಿಲ್ಕ್‌ ಶರ್ಟ್‌ ಮತ್ತು ಪಂಚೆ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಈ ವೇಳೆ, ಕೊಡಗಿನ ರಶ್ಮಿಕಾ ಅವರ ತಾಯಿ ಸುಮನ ಮಂದಣ್ಣಾ (Sumana Mandanna) ಅವರು ಕೊಡವ ಶೈಲಿಯ ಸೀರೆಯುಟ್ಟು ಹೈಲೆಟ್‌ ಆಗಿದ್ದಾರೆ.

ಈ ಕಾರ್ಯಕ್ರಮಕ್ಕೆ ಕನ್ನಡದ ಶ್ರೀಲೀಲಾ, ಆಶಿಕಾ ರಂಗನಾಥ್‌, ದೀಕ್ಷಿತ್‌ ಶೆಟ್ಟಿ, ಕೃತಿ ಶೆಟ್ಟಿ, ಅನುಷಾ ರೈ, ವರ್ಷ ಬೊಳ್ಳಮ್ಮ, ಕರ್ನಾಟಕದ ಡಿಸಿಎಂ ಡಿಕೆಶಿ ಅವರು ಭಾಗಿಯಾಗಿ ವಿರೋಷ್‌ ಜೋಡಿಗೆ ವಿಶ್‌ ಮಾಡಿದ್ದಾರೆ.

News Desk Sandalwood Times

error: Content is protected !!