Priyanka Chopra: ಬಾಲಿವುಡ್ನಿಂದ ಹೊರಬೇಕು ಎಂಬುದು ನನ್ನ ನಿರ್ಧಾರವಾಗಿರಲಿಲ್ಲ- ನಟಿ ಸ್ಫೋಟಕ ಹೇಳಿಕೆ
ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ (Priyanka Chopra) ಸದ್ಯ ಮಹೇಶ್ ಬಾಬು (Mahesh Babu) ಜೊತೆಗಿನ ‘ವಾರಣಾಸಿ’ (Varanasi) ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ, ಬಾಲಿವುಡ್ ಸಿನಿಮಾದಲ್ಲಿ ನಟಿಸದೇ ಇರಲು ಕಾರಣವೇನು ಎಂದು ವಿವರಿಸಿದ್ದಾರೆ.

ಪ್ರಿಯಾಂಕಾ ಸಂದರ್ಶನವೊಂದರಲ್ಲಿ ಮಾತನಾಡಿ, ಹಾಲಿವುಡ್ ವೃತ್ತಿ ಜೀವನದ ಬಗ್ಗೆ ಹೇಳಿದ್ದು, ಬಾಲಿವುಡ್ನಿಂದ ಹೊರಬರಬೇಕು ಎಂಬುದು ನನ್ನ ನಿರ್ಧಾರವಾಗಿರಲಿಲ್ಲ. ಆದರೆ ನನಗಿಲ್ಲಿ ಅವಕಾಶಗಳು ದೊರೆಯಲಿಲ್ಲ. ಹಿಂದಿ ಚಿತ್ರರಂಗದಲ್ಲಿ ತಾವು ಸೀಮಿತರಾಗಿದ್ದೇವೆಂದು ಭಾವಿಸಿ ಹಾಲಿವುಡ್ನಲ್ಲಿ ಅವಕಾಶಗಳನ್ನು ಹುಡುಕಿದೆ ಎಂದಿದ್ದಾರೆ.
View this post on Instagram
ನನ್ನ ಮೊದಲ ಆಯ್ಕೆ ಬಾಲಿವುಡ್ ಆಗಿತ್ತು ಎಂದಿರುವ ಪ್ರಿಯಾಂಕಾ, ಇಲ್ಲಿ ಕೆಲಸ ಮಾಡುವಾಗ ನನಗಿಲ್ಲಿ ಅವಕಾಶಗಳು ಕಡಿಮೆ ಎಂದು ಅನಿಸಲಾರಂಭಿಸಿತು. ನನ್ನ ಕರಿಯರ್ ಅನ್ನು ವಿಸ್ತರಿಸುವ ಸಲುವಾಗಿ ಹಾಲಿವುಡ್ನಲ್ಲಿ (Hollywood) ಅವಕಾಶಗಳನ್ನು ನಾನು ಅನ್ವೇಷಿಸಬೇಕೆಂದು ಅಂದುಕೊಂಡೆ. ಅಮೆರಿಕಾಕ್ಕೆ ಕೆಲಸ ಹುಡುಕಿಕೊಂಡು ನಾನು ಬಂದೆ, ಸುಮಾರು 12 ವರ್ಷಗಳ ಬಳಿಕ ಹಾಲಿವುಡ್ನಲ್ಲಿ ಗಟ್ಟಿಯಾಗಿ ತಳವೂರಿದ್ದೇನೆ ಎಂದಿದ್ದಾರೆ.
View this post on Instagram
ಹಲವು ವರ್ಷಗಳ ಬಳಿಕ ಈಗ ತೆಲುಗು ಸಿನಿಮಾ ಮೂಲಕ ಭಾರತೀಯ ಸಿನಿಮಾದಲ್ಲಿ ಪಿಗ್ಗಿ ನಟಿಸಿದ್ದಾರೆ. ರಾಜಮೌಳಿ ನಿರ್ದೇಶನ ಮಾಡಿದ್ದಾರೆ. ವಾರಣಾಸಿಯಲ್ಲಿ ಮಹೇಶ್ ಜೊತೆ ಪಿಗ್ಗಿ ಲೀಡ್ ರೋಲ್ನಲ್ಲಿ ನಟಿಸಿದ್ದಾರೆ.

