ಪತಿಯೊಡನೆ ದೆಹಲಿ ಪ್ರವಾಸದಲ್ಲಿ ನಟಿ ವೈಷ್ಣವಿ ಗೌಡ
ಕನ್ನಡದ ನಟಿ ವೈಷ್ಣವಿ ಗೌಡ (Vaishnavi Gowda) ಅವರು ಪತಿಯೊಡನೆ ದೆಹಲಿಯಲ್ಲಿ ರೌಂಡ್ಸ್. ಜಾಲಿ ಮೂಡ್‌ನಲ್ಲಿರೋ ವೈಷ್ಣವಿ ಅವರು ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.
ಮದುವೆ ಬಳಿಕ ಪತಿ ಅನುಕೂಲ್ ಜೊತೆ ಹೊಸ ಜಾಗಗಳಿಗೆ ಭೇಟಿ ನೀಡ್ತಿದ್ದಾರೆ. ಡೆಲ್ಲಿಯ ಕುತುಬ್ ಮಿನಾರ್, ಗುರುನಾನಕ್ ಮಂದಿರ, ಇಂಡಿಯಾ ಗೇಟ್ ಸೇರಿದಂತೆ ಹಲವೆಡೆ ನಟಿ ಭೇಟಿ ನೀಡಿದ್ದಾರೆ.
View this post on Instagram
ಉತ್ತರ ಭಾರತದ ಶೈಲಿಯಲ್ಲಿಯೇ ಮದುವೆ ಜರುಗಿತ್ತು. ವೈಷ್ಣವಿ ಗೌಡ ಅವರ ಪತಿ ಮನೆಯ ಸಂಪ್ರದಾಯದ ಪ್ರಕಾರ ತಾಳಿ ಕಟ್ಟುವಂತಿಲ್ಲ. ಬೈತಲೆಗೆ ಕುಂಕುಮ ಇಡುವ ಪದ್ಧತಿ ಮಾತ್ರ ಇರೋದು. ಇದೇ ಸಂಪ್ರದಾಯದ ಪ್ರಕಾರ ವೈಷ್ಣವಿ ಅವರು ತಾಳಿ ಹಾಕಿಕೊಂಡಿಲ್ಲ. ಈ ವಿಚಾರ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿತ್ತು.
View this post on Instagram
ನಟಿಯ ಪತಿ ಇಂಡಿಯನ್ ಏರ್‌ಪೋರ್ಸ್‌ನಲ್ಲಿ ಕೆಲಸ ಮಾಡ್ತಿರೋ ಫ್ಲೈಟ್ ಲೆಫ್ಟಿನೆಂಟ್ ಆಗಿದ್ದಾರೆ. ಅನುಕೂಲ್ ಅವರೊಂದಿಗೆ ಕಳೆದ ವರ್ಷ ಜೂನ್ 4ರಂದು ವೈಷ್ಣವಿ ಹಸೆಮಣೆ ಏರಿದರು.

