BBK 12: ‘ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ’- ಗಿಲ್ಲಿ ಗೆಲುವಿಗೆ ಕಾವ್ಯ ಸಂಭ್ರಮ

BBK 12: ‘ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ’- ಗಿಲ್ಲಿ ಗೆಲುವಿಗೆ ಕಾವ್ಯ ಸಂಭ್ರಮ

ʻಜೀರೋದಿಂದ ಹೀರೋ ಆದೆ’ ಎಂದು ಗಿಲ್ಲಿಗೆ ಹಾರೈಸಿದ ಕಾವ್ಯ

‘ಬಿಗ್ ಬಾಸ್ ಕನ್ನಡ 12’ರ (Bigg Boss Kannada 12) ಆಟಕ್ಕೆ ಅದ್ಧೂರಿಯಾಗಿ ತೆರೆಬಿದ್ದಿದೆ. ಈ ಶೋನ ವಿನ್ನರ್ ಆಗಿ ಹಳ್ಳಿ ಹೈದ ಗಿಲ್ಲಿ (Gilli Nata) ಗೆದ್ದು ಬೀಗಿದ್ದಾರೆ. ಈ ಬೆನ್ನಲ್ಲೇ ಸ್ನೇಹಿತ ಗಿಲ್ಲಿ ಗೆಲುವಿಗೆ ಸಹಸ್ಪರ್ಧಿ ಕಾವ್ಯ ಶೈವ (Kavya Shaiva) ಇನ್ಸ್ಟಾಗ್ರಾಂನಲ್ಲಿ ಶುಭಹಾರೈಸಿದ್ದಾರೆ.

ದೊಡ್ಮನೆಯಲ್ಲಿ ಗಿಲ್ಲಿ ಮತ್ತು ಕಾವ್ಯ ನಡುವೆ ಉತ್ತಮ ಬಾಂಧವ್ಯವಿತ್ತು. ಗಿಲ್ಲಿ ಜೊತೆಗಿನ ಒಡನಾಟ ಅಭಿಮಾನಿಗಳಿಗೆ ಇಷ್ಟವಾಗಿತ್ತು. ಗಿಲ್ಲಿಯಿಂದ ಕಾವ್ಯ ಅನ್ನೋ ಮಾತು ಕೂಡ ಇತರೆ ಸ್ಪರ್ಧಿಗಳಿಂದ ಕೇಳಿ ಬಂದಿತ್ತು. ಆದರೆ ಟೀಕೆಗೆ ಕಿವಿ ಕೊಡದೇ ಫಿನಾಲೆ ತಲುಪಿದ್ದರು ಕಾವ್ಯ. ಈಗ ಗಿಲ್ಲಿ ʻಬಿಗ್ ಬಾಸ್’ ವಿನ್ನರ್ ಆಗಿದ್ದಾರೆ. ಇದೇ ಖುಷಿಯಲ್ಲಿ ಕಾವ್ಯ ಅವರು ಗಿಲ್ಲಿಗೆ ಸ್ಪೆಷಲ್ ಆಗಿ ವಿಶ್ ಮಾಡಿದ್ದಾರೆ.

ನಟಿ ಇನ್ಸ್ಟಾಗ್ರಾಂನಲ್ಲಿ, ಸುದೀಪ್ ಅವರು ಗಿಲ್ಲಿ ಕೈ ಎತ್ತಿದ ಫೋಟೋ ಹಾಗೂ ಗಿಲ್ಲಿ ಪಕ್ಕದಲ್ಲಿ ಕುಳಿತ ಫೋಟೋಗಳನ್ನು ಕಾವ್ಯಾ ಹಂಚಿಕೊಂಡಿದ್ದಾರೆ. ʻಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ’ ಎಂಬ ಅಡಿಬರಹ ಮೂಲಕ ಪೋಸ್ಟ್ ಆರಂಭಿಸಿದ್ದಾರೆ. ʻಹೇ, ಗಿಲ್ಲಿ ಕಂಗ್ರಾಜ್ಯುಲೇಷನ್ ಕಣೋ. ನೀನು ಇದಕ್ಕೆ ಅರ್ಹ’ ಎಂದು ಕಾವ್ಯಾ ಬರೆದಿದ್ದಾರೆ.

ʻಜೀರೋದಿಂದ ಹೀರೋ ಆದೆ. ಇನ್ನೂ ದೂರ ಸಾಗಬೇಕಿದೆ. ಆದಷ್ಟು ಬೇಗ ಆ್ಯಕ್ಷನ್- ಕಟ್ ಹೇಳೋ ಹಾಗಾಗ್ಲಿ. ತುಂಬಾ ತುಂಬಾ ಒಳ್ಳೇದಾಗ್ಲಿ’ ಎಂದು ಕಾವ್ಯಾ ಅವರು ಗಿಲ್ಲಿಗೆ ಮನಸಾರೆ ಹಾರೈಸಿದ್ದಾರೆ.

News Desk Sandalwood Times

error: Content is protected !!