2ನೇ ಮಗುವಿನ ನಿರೀಕ್ಷೆಯಲ್ಲಿ ʼಜವಾನ್’ ಡೈರೆಕ್ಟರ್ ಅಟ್ಲಿ ದಂಪತಿ

2ನೇ ಮಗುವಿನ ನಿರೀಕ್ಷೆಯಲ್ಲಿ ʼಜವಾನ್’ ಡೈರೆಕ್ಟರ್ ಅಟ್ಲಿ ದಂಪತಿ

‘ಜವಾನ್’ (Jawan) ಡೈರೆಕ್ಟರ್ ಅಟ್ಲಿ (Atlee) ಮತ್ತು ಪತ್ನಿ ಪ್ರಿಯಾ (Priya Mohan) ದಂಪತಿ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. 2ನೇ ಮಗುವಿನ ನಿರೀಕ್ಷೆಯಲ್ಲಿರೋದಾಗಿ ಅಟ್ಲಿ ದಂಪತಿ ಅನೌನ್ಸ್ ಮಾಡಿದ್ದಾರೆ.

ನಮ್ಮ ಮನೆಗೆ ಹೊಸ ಸದಸ್ಯ ಬರುತ್ತಿರೋದಾಗಿ ಅಟ್ಲಿ ದಂಪತಿ ಸೋಷಿಯಲ್‌ ಮೀಡಿಯಾದಲ್ಲಿ ಸಿಹಿಸುದ್ದಿ ನೀಡಿದ್ದಾರೆ. ಪ್ರಿಯಾ ಅವರ ಬೇಬಿ ಬಂಪ್ ಫೋಟೋಶೂಟ್ ಹಂಚಿಕೊಂಡಿದ್ದಾರೆ. ಪತಿ ಮತ್ತು ಮಗನ ಜೊತೆ ಪ್ರಿಯಾ ಫೋಟೋಗೆ ಪೋಸ್ ನೀಡಿದ್ದಾರೆ.

ಇನ್ನೂ ಅಟ್ಲಿ ಮತ್ತು ಪ್ರಿಯಾ ಅವರು 2014ರಲ್ಲಿ ಮದುವೆಯಾದರು. ಈ ಜೋಡಿಗೆ ಈಗಾಗಲೇ ಒಬ್ಬ ಮಗನಿದ್ದಾರೆ. ಅಟ್ಲಿ ಅವರು ಜವಾನ್, ರಾಜ ರಾಣಿ, ತೇರಿ, ಬಿಗಿಲ್ ಸಿನಿಮಾಗಳನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಪ್ರಿಯಾ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ.

News Desk Sandalwood Times

Related articles

error: Content is protected !!