ಮುನಿಸು ಮರೆತು ಜೊತೆಯಾದ್ರ ಸ್ಟಾರ್‌ ನಟಿಯರು?- ನಯನತಾರಾ, ತ್ರಿಶಾ ಫೋಟೋ ವೈರಲ್

ಮುನಿಸು ಮರೆತು ಜೊತೆಯಾದ್ರ ಸ್ಟಾರ್‌ ನಟಿಯರು?- ನಯನತಾರಾ, ತ್ರಿಶಾ ಫೋಟೋ ವೈರಲ್

ಸೌತ್‌ನ ಸ್ಟಾರ್ ನಟಿಯರು ನಯನತಾರಾ (Nayanthara) ಮತ್ತು ತ್ರಿಶಾ (Trisha Krishnan) ಮುನಿಸು ಮರೆತು ದುಬೈನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ಇಬ್ಬರು ಸ್ಟಾರ್ ನಟಿಯರ ನಡುವೆ ಬಾಂಧವ್ಯ ಸರಿಯಿಲ್ಲ ಎಂಬ ವದಂತಿಗೆ ಬ್ರೇಕ್ ಬಿದ್ದಿದೆ.

ಇಬ್ಬರು ಸ್ಟಾರ್ ನಟಿಯರು ಜೊತೆಯಾಗಿ ಸುತ್ತಾಡೋದು ದೂರದ ಮಾತು. ಹೀಗಿರುವಾಗ ದುಬೈನಲ್ಲಿ ನಯನತಾರಾ ಮತ್ತು ತ್ರಿಶಾ ಜೊತೆಯಾಗಿ ಕಾಲ ಕಳೆದಿದ್ದಾರೆ. ಖಾಸಗಿ ಯಾಚ್‌ನಲ್ಲಿ ಸುತ್ತಾಟ ನಡೆಸಿದ್ದಾರೆ. ಸೂರ್ಯಾಸ್ತವನ್ನು ನೋಡುತ್ತಾ ನಟಿಯರು ಎಂಜಾಯ್ ಮಾಡಿದ್ದಾರೆ. ಸದ್ಯ ಇಬ್ಬರ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

 

View this post on Instagram

 

A post shared by N A Y A N T H A R A (@nayanthara)

ನಯನತಾರಾ ಮತ್ತು ತ್ರಿಶಾ ಜೊತೆಯಾಗಿ ಕಾಲ ಕಳೆದಿರೋ ಫೋಟೋ ನೋಡಿ ಫ್ಯಾನ್ಸ್ ಖುಷಿಪಡ್ತಿದ್ದಾರೆ. ಇಬ್ಬರು ಜೊತೆಯಾಗಿ ಸಿನಿಮಾ ಮಾಡಿ ಎಂದು ಫ್ಯಾನ್ಸ್ ಮನವಿ ಮಾಡಿದ್ದಾರೆ.

ಕೆಲ ವರ್ಷಗಳಿಂದ ನಯನತಾರಾ ಮತ್ತು ತ್ರಿಶಾ ನಡುವೆ ಬಾಂಧವ್ಯ ಸರಿಯಿಲ್ಲ. ಇಬ್ಬರ ನಡುವೆ ಜಗಳ ಆಗಿದೆ ಎಂಬ ಸುದ್ದಿ ಇತ್ತು. ಆದರೆ ಇದರ ಬಗ್ಗೆ ನಟಿಯರು ಯಾವುದೇ ರಿಯಾಕ್ಷನ್ ಕೊಟ್ಟಿರಲಿಲ್ಲ. ಆದರೀಗ ಇಬ್ಬರು ಶೇರ್ ಮಾಡಿರುವ ಈ ಪೋಸ್ಟ್‌ನಿಂದ ಎಲ್ಲಾ ವದಂತಿಗೆ ಬ್ರೇಕ್ ಬಿದ್ದಿದೆ.

News Desk Sandalwood Times

error: Content is protected !!