ʼಸ್ಲಂಡಾಗ್ 33 ಟೆಂಪಲ್ ರೋಡ್ʼ ಚಿತ್ರ- ಮಸ್ತ್‌ ಆಗಿದೆ ದುನಿಯಾ ವಿಜಯ್ ಲುಕ್

ʼಸ್ಲಂಡಾಗ್ 33 ಟೆಂಪಲ್ ರೋಡ್ʼ ಚಿತ್ರ- ಮಸ್ತ್‌ ಆಗಿದೆ ದುನಿಯಾ ವಿಜಯ್ ಲುಕ್

ದುನಿಯಾ ವಿಜಯ್ (Duniya Vijay) ಅವರು ಇಂದು (ಜ.20) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟನ 52ನೇ ಬರ್ತ್‌ಡೇ ಅಂಗವಾಗಿ ‘ಸ್ಲಂಡಾಗ್ 33 ಟೆಂಪಲ್ ರೋಡ್’ (Slumdog 33 Temple Road) ಚಿತ್ರದಲ್ಲಿನ ದುನಿಯಾ ವಿಜಯ್ ಲುಕ್ ಅನ್ನು ಚಿತ್ರತಂಡ ರಿವೀಲ್ ಮಾಡಿದೆ.

ವಿಜಯ್ ಸೇತುಪತಿ (Vijay Sethupathi) ನಟನೆಯ ʻಸ್ಲಂಡಾಗ್ 33 ಟೆಂಪಲ್ ರೋಡ್’ ಚಿತ್ರದಲ್ಲಿ ಕನ್ನಡದ ನಟ ದುನಿಯಾ ವಿಜಯ್ ವಿಲನ್ ಆಗಿ ಅಬ್ಬರಿಸುತ್ತಿದ್ದಾರೆ. ಕಾಲಿವುಡ್ ನಟನ ಎದುರು ದುನಿಯಾ ವಿಜಯ್ ಪಾತ್ರ ಕೂಡ ಪವರ್‌ಫುಲ್ ಆಗಿದೆ. ಕ್ಯಾಪ್ ಧರಿಸಿ ಸ್ಲೀವ್‌ಲೆಸ್ ಟೀ ಶರ್ಟ್‌ನಲ್ಲಿ ವಿಜಯ್ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ.

 

View this post on Instagram

 

A post shared by Puri Connects (@puriconnects)

ಇನ್ನೂ ಇತ್ತೀಚೆಗೆ ಪುರಿ ಜಗನ್ನಾಥ್ ಹಾಗೂ ವಿಜಯ್ ಸೇತುಪತಿ ಕಾಂಬೋದ ಹೊಸ ಸಿನಿಮಾದ ಟೈಟಲ್ ರಿವೀಲ್ ಮಾಡಲಾಯ್ತು. ಜ.16ರಂದು ವಿಜಯ್ ಸೇತುಪತಿ ಬರ್ತಡೇ ವಿಶೇಷವಾಗಿ ಶೀರ್ಷಿಕೆ ಬಿಡುಗಡೆ ಮಾಡಿದರು. ಈ ಸಿನಿಮಾಗೆ ʻಸ್ಲಂಡಾಗ್-33 ಟೆಂಪಲ್ ರೋಡ್ʼ ಎಂಬ ಟೈಟಲ್ ಇಡಲಾಗಿದೆ.

ಟೈಟಲ್ ಜೊತೆಗೆ ಚಿತ್ರತಂಡ ವಿಜಯ್ ಸೇತುಪತಿ ಅವರ ಫಸ್ಟ್ ಲುಕ್ ಕೂಡ ಚಿತ್ರತಂಡ ರಿಲೀಸ್ ಮಾಡಿತ್ತು. ಕೈಯಲ್ಲಿ ರಕ್ತಸಿಕ್ತ ಕತ್ತಿ ಹಿಡಿದು, ಹರಿದ ಬಟ್ಟೆ ತೊಟ್ಟು ಹೊಸ ಅವತಾರದಲ್ಲಿ ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ದೊಡ್ಡ ತಾರಾಬಳಗವಿದೆ. ಸಂಯುಕ್ತ ನಾಯಕಿಯಾಗಿ ನಟಿಸುತ್ತಿದ್ದು, ಟಬು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬ್ರಹ್ಮನಂದ್ ಹಾಗೂ ವಿಟಿವಿ ಗಣೇಶ್ ಕೂಡ ತಾರಾಬಳಗದಲ್ಲಿದ್ದಾರೆ.

ಪುರಿ ಜಗನ್ನಾಥ್ ಅವರು ತಮ್ಮದೇ ಪುರಿ ಕನೆಕ್ಸ್ಟ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಜೆಬಿ ನಾರಾಯಣ್ ರಾವ್ ಕೊಂಡ್ರೊಲ್ಲಾ ಅವರ ಜೆಬಿ ಮೋಷನ್ ಪಿಕ್ಚರ್ಸ್ ಬ್ಯಾನರ್ ಸಹಯೋಗದಲ್ಲಿ ಚಾರ್ಮಿ ಕೌರ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಅರ್ಜುನ್ ರೆಡ್ಡಿ, ಅನಿಮಲ್ ಚಿತ್ರಗಳಿಗೆ ಸಂಗೀತ ಒದಗಿಸಿರುವ ಹರ್ಷವರ್ದನ್ ರಾಮೇಶ್ವರ್ ಈ ಚಿತ್ರಕ್ಕೂ ಮ್ಯೂಸಿಕ್ ನೀಡಿದ್ದಾರೆ. ಈ ಪ್ಯಾನ್ ಇಂಡಿಯಾ ಸಿನಿಮಾ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

News Desk Sandalwood Times

error: Content is protected !!