BBK 12: ಸುದೀಪ್, ಶಿವಣ್ಣನ ಮನೆಗೆ ʼಬಿಗ್ ಬಾಸ್’ ವಿನ್ನರ್ ಗಿಲ್ಲಿ ಭೇಟಿ

BBK 12: ಸುದೀಪ್, ಶಿವಣ್ಣನ ಮನೆಗೆ ʼಬಿಗ್ ಬಾಸ್’ ವಿನ್ನರ್ ಗಿಲ್ಲಿ ಭೇಟಿ

ʻಬಿಗ್ ಬಾಸ್ ಕನ್ನಡ 12′ ವಿನ್ನರ್ (BBK 12 Winner) ಗಿಲ್ಲಿ (Gilli Nata) ಇದೀಗ ಕಿಚ್ಚ ಸುದೀಪ್ (Kichcha Sudeep) ಮತ್ತು ಶಿವರಾಜ್‌ಕುಮಾರ್ (Shivarajkumar) ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.

ʻಬಿಗ್ ಬಾಸ್’ ಶೋ ಮುಗಿದ ಬೆನ್ನಲ್ಲೇ ಗಿಲ್ಲಿ ನಟ, ಹುಟ್ಟುರಾದ ಮಳವಳ್ಳಿಗೆ ಭೇಟಿ ಕೊಟ್ಟಿದ್ದರು. ಹುಟ್ಟೂರಿನಲ್ಲಿ ಗಿಲ್ಲಿಗೆ ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತಿಸಿದ್ದರು. ಈ ಬೆನ್ನಲ್ಲೇ ಇದೀಗ ಸುದೀಪ್ ಮತ್ತು ಶಿವಣ್ಣ ಅವರ ಮನೆಗೆ ಗಿಲ್ಲಿ ತೆರಳಿ ಆಶೀರ್ವಾದ ಪಡೆದಿದ್ದಾರೆ. ಈ ವೇಳೆ, ಗಿಲ್ಲಿ ಜೊತೆ ಅವರ ಸಹೋದರ ಮತ್ತು ಮಾಜಿ ಬಿಗ್‌ ಬಾಸ್‌ ಸ್ಪರ್ಧಿ ತುಕಾಲಿ ಸಂತೋಷ್‌ ಕೂಡ ಇದ್ದರು. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ.

ಇನ್ನೂ ʻಬಿಗ್ ಬಾಸ್’ ಗೆದ್ದಿರೋ ಗಿಲ್ಲಿ 50 ಲಕ್ಷ ರೂ. ಜೊತೆ ಐಷಾರಾಮಿ ಕಾರು ಲಭಿಸಿದೆ.

News Desk Sandalwood Times

Related articles

error: Content is protected !!