Anant Nag: ಮತ್ತೆ ಬಾಲಿವುಡ್‌ನತ್ತ ಕನ್ನಡದ ಲೆಜೆಂಡರಿ ನಟ

Anant Nag: ಮತ್ತೆ ಬಾಲಿವುಡ್‌ನತ್ತ ಕನ್ನಡದ ಲೆಜೆಂಡರಿ ನಟ

ನ್ನಡದ ಖ್ಯಾತ ನಟ ಅನಂತ್‌‌ ನಾಗ್ (Anant Nag) ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಹೊಸ ಗೆಟಪ್‌ನಲ್ಲಿ ಅನಂತ್‌ ನಾಗ್‌ ಬಾಲಿವುಡ್‌ ಪ್ರಾಜೆಕ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಲವು ವರ್ಷಗಳ ಬಳಿಕ ಬಾಲಿವುಡ್‌ಗೆ ಅವರು ಮರಳಿದ್ದಾರೆ.

ಇತ್ತೀಚೆಗೆ ಅನಂತ್‌ ನಾಗ್‌ ಅವರು ಸಿನಿಮಾಗಳಲ್ಲಿ ನಟಿಸೋದು ಕಮ್ಮಿಯಾಗಿದೆ. ಕೆಜಿಎಫ್‌ ಬಳಿಕ ಅವರು ಸಿಕ್ಕಾಪಟ್ಟೆ ಸೆಲೆಕ್ಟೀವ್‌ ಆಗಿದ್ದಾರೆ. ಹೀಗಿರುವಾಗ ಒಟಿಟಿಯಲ್ಲಿ ಬರುವ ಬಾಲಿವುಡ್‌ನ Family Business ವೆಬ್‌ ಸರಣಿಯಲ್ಲಿ ನಟಿಸಿದ್ದಾರೆ. ಅದರಲ್ಲಿ ಶ್ರೀಮಂತ ಉದ್ಯಮಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಅನಂತ್‌ ನಾಗ್‌ ಜೊತೆ ಬಾಲಿವುಡ್‌ ನಟರಾದ ಅನಿಲ್‌ ಕಪೂರ್ (Anil Kapoor), ವಿಜಯ್‌ ವರ್ಮಾ‌ (Vijay Varma) ನಟಿಸಿದ್ದಾರೆ. ಸದ್ಯ ವೆಬ್‌ ಸರಣಿಯ ಟ್ರೈಲರ್‌ ರಿಲೀಸ್‌ ಆಗಿ ಕನ್ನಡದ ನಟನ ಲುಕ್‌ ಹಾಗೂ ಪಾತ್ರದ ಬಗ್ಗೆ ಫ್ಯಾನ್ಸ್‌ಗೆ ಕುತೂಹಲ ಮೂಡಿಸಿದೆ. ಈ ವೆಬ್‌ ಸರಣಿಯ ರಿಲೀಸ್‌ ಡೇಟ್‌ ಇನ್ನೂ ರಿವೀಲ್‌ ಆಗಬೇಕಿದೆ.

ಈ ಹಿಂದೆ ಅಂಕುರ್‌, ನಿಶಾಂತ್‌ ಸೇರಿದಂತೆ ಹಲವು ಹಿಂದಿ ಚಿತ್ರಗಳಲ್ಲಿ ಅನಂತ್‌ ನಾಗ್‌ ನಟಿಸಿದ್ರು. ತೆಲುಗು, ತಮಿಳು, ಮರಾಠಿ, ಮಲಯಾಳಂ, ಇಂಗ್ಲೀಷ್‌ ಭಾಷೆಯಲ್ಲಿಯೂ ಅವರು ನಟಿಸಿದ್ದಾರೆ.

News Desk Sandalwood Times

error: Content is protected !!