ರಶ್ಮಿಕಾ ಮಂದಣ್ಣಗೆ ಕಂಡೀಷನ್‌ ಹಾಕಿದ ವಿಜಯ್‌ ದೇವರಕೊಂಡ ತಾಯಿ- ಏನದು?

ರಶ್ಮಿಕಾ ಮಂದಣ್ಣಗೆ ಕಂಡೀಷನ್‌ ಹಾಕಿದ ವಿಜಯ್‌ ದೇವರಕೊಂಡ ತಾಯಿ- ಏನದು?

ನ್ನಡದ ‘ಕಿರಿಕ್‌ ಪಾರ್ಟಿ’ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಬಹುಕಾಲದ ಗೆಳೆಯ ವಿಜಯ್‌ ದೇವರಕೊಂಡ (Vijay Devarakonda) ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ರಶ್ಮಿಕಾಗೆ ವಿಜಯ್‌ ತಾಯಿ ಷರತ್ತು ಹಾಕಿದ್ದಾರೆ ಎನ್ನಲಾದ ವಿಚಾರವೊಂದು ಚರ್ಚೆಯಾಗ್ತಿದೆ.

ತಮ್ಮ ಮನೆಯ ಸೊಸೆ ಹೇಗಿರಬೇಕು ಎಂದು ವಿಜಯ್‌ ತಾಯಿ ಮಾಧವಿ ಷರತ್ತುಗಳನ್ನು ಹೇಳಿರೋ ಹಳೆಯ ವಿಡಿಯೋವೊಂದು ವೈರಲ್‌ ಆಗ್ತಿದೆ. ಅದರಲ್ಲಿ ಸೊಸೆ, ತನ್ನ ಮಗನನ್ನು ಪ್ರೀತಿಸಬೇಕು. ಕುಟುಂಬದ ಜೊತೆ ನಿಲ್ಲಬೇಕೆಂದು ಹೇಳಿದ್ದಾರೆ. ಅವನ ವೃತ್ತಿಯನ್ನು ಅರ್ಥಮಾಡಿಕೊಂಡು ಬೆಂಬಲಿಸಬೇಕು. ಸೊಸೆಯ ಜಾತಿ, ಧರ್ಮಕ್ಕಿಂತ ಆಕೆಯ ಗುಣ ಮುಖ್ಯ ಎಂದು ಮಾತನಾಡಿದ್ದಾರೆ. ಕೆಲ ವರ್ಷಗಳ ಹಿಂದೆ ʻಗೀತಾ ಗೋವಿಂದಂʼ ಸಕ್ಸಸ್‌ (Geetha Govindam) ಮೀಟ್‌ನಲ್ಲಿ ವಿಜಯ್‌ ತಾಯಿ ಮಾತನಾಡಿದ್ದಾರೆ.

ವಿಜಯ್‌ ಮದುವೆ ಅಧಿಕೃತ ಆಗ್ತಿದ್ದಂತೆ ಮಾಧವಿ ಆಡಿರೋ ಮಾತುಗಳು ಚರ್ಚೆಗೆ ಗ್ರಾಸವಾಗಿದೆ. ಕೊನೆಗೂ ಅವರು ಆಸೆಪಟ್ಟಂತೆಯೇ ರಶ್ಮಿಕಾರಂತಹ ಸೊಸೆ ಸಿಕ್ಕಿದ್ದಾರೆ ಎಂದು ವಿರೋಷ್‌ ಫ್ಯಾನ್ಸ್‌ ಹೇಳ್ತಿದ್ದಾರೆ.

ಇನ್ನೂ ಕಾರ್ಯಕ್ರಮವೊಂದರಲ್ಲಿ ರಶ್ಮಿಕಾ ಮಾತನಾಡುವಾಗ, ವಿಜಯ್‌ ತಾಯಿ ಮಾಧವಿ ಅವರನ್ನು ನನ್ನ 2ನೇ ತಾಯಿ ಇದ್ದಂತೆ ಅವರು ಎಂದು ಬಣ್ಣಿಸಿದ್ದರು. ರಶ್ಮಿಕಾ ನಟಿಸಿರುವ ಸಿನಿಮಾ ಪ್ರೀಮಿಯರ್ ಶೋ ಆಗಮಿಸಿ ಚಿತ್ರ ವೀಕ್ಷಿಸಿದ್ದರು ಮಾಧವಿ. ಹೀಗಾಗಿ ಇಬ್ಬರ ನಡುವೆ ಉತ್ತಮ ಒಡನಾಟವಿದೆ.

ಇದೇ ಫೆ.26ರಂದು ವಿಜಯ್‌ ಜೊತೆ ರಶ್ಮಿಕಾ ಉದಯಪುರದಲ್ಲಿ ಮದುವೆ ಆಗ್ತಿದ್ದಾರೆ. ಮಾ.4ರಂದು ಹೈದರಾಬಾದ್‌ ಆರತಕ್ಷತೆ ಜರುಗಲಿದೆ. ವಿರೋಷ್‌ ಮದುವೆ ಸಂಭ್ರಮಕ್ಕೆ ಇಡೀ ಭಾರತೀಯ ಚಿತ್ರರಂಗವೇ ಸಾಕ್ಷಿಯಾಗಲಿದೆ.

News Desk Sandalwood Times

error: Content is protected !!