ಹಾಟ್ ಅವತಾರ ತಾಳಿದ ಸಾನ್ಯಾ ಅಯ್ಯರ್
ಬಿಗ್ ಬಾಸ್ (BBK 10) ಬೆಡಗಿ ಸಾನ್ಯಾ ಅಯ್ಯರ್ (Saanya Iyer) ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಹಾಟ್ ಅವತಾರದಲ್ಲಿ ನಟಿ ಮಿಂಚಿದ್ದಾರೆ. ಸಾನ್ಯಾ ಹೊಸ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಲೈಟ್ ಬಣ್ಣದ ಮಾಡರ್ನ್ ಗೌನ್‌ನಲ್ಲಿ ನಟಿ ಇತ್ತೀಚೆಗೆ ಮಸ್ತ್ ಫೋಟೋಶೂಟ್ ಮಾಡಿಸಿದ್ದಾರೆ. ಸಾನ್ಯಾ ಮೈ ಮಾಟಕ್ಕೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ.

ಟಿವಿ ಪರದೆಯಲ್ಲಿ ಪುಟ್ಟ ಗೌರಿಯಾಗಿ ಮಿಂಚಿದ್ದ ನಟಿ ಸಾನ್ಯಾ. ಆ ನಂತರ ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಸ್ಪರ್ಧಿಯಾಗಿ ಮನಗೆದ್ದರು. ಬಿಗ್ ಮನೆಯಲ್ಲಿ ರೂಪೇಶ್ ಶೆಟ್ಟಿ (Roopesh Shetty) ಜೊತೆಗಿನ ಸ್ನೇಹದ ವಿಚಾರವಾಗಿ ಸಾನ್ಯಾ ಮುನ್ನೆಲೆಗೆ ಬಂದಿದ್ದರು. ಇಬ್ಬರ ನಡುವಿನ ಒಡನಾಟ ನೋಡಿ ಕರ್ನಾಟಕ ಜನತೆ ಮೆಚ್ಚಿಕೊಂಡಿದ್ದರು.

ಹೀಗೆ ಇದ್ದರೂ ಕೂಡ ಇಬ್ಬರ ನಡುವೆ ಲವ್ ಇದ್ಯಾ ಎಂದು ಕೇಳಿದ್ರೆ? ನಾವು ಇಬ್ಬರೂ ಫ್ರೆಂಡ್ಸ್ ಅಷ್ಟೇ ಎಂಬ ಉತ್ತರ ಬಂದಿತ್ತು. ಇಂದಿಗೂ ಇಬ್ಬರ ಸ್ನೇಹದ ಬಗ್ಗೆ ಸೈಲೆಂಟ್ ಆಗಿದ್ದಾರೆ.

ಆ ನಂತರ ಸಾನ್ಯಾ `ಗೌರಿ’ ಚಿತ್ರದ ಮೂಲಕ ಗೌರಿಯಾಗಿ ದೊಡ್ಡ ಪರದೆಯಲ್ಲಿ ಮಿಂಚಿದ್ದರು. ಸಮರ್ಜಿತ್ ಲಂಕೇಶ್‌ಗೆ ನಾಯಕಿಯಾಗಿ ಸಾಥ್ ನೀಡಿದ್ರು.

ಸದ್ಯ ಬಗ್ಗೆಯ ಕಥೆ ಕೇಳುವಲ್ಲಿ ಮತ್ತು ಫಿಟ್‌ನೆಸ್ ಕಡೆ ಹೆಚ್ಚು ಗಮನ ಕೊಡ್ತಿದ್ದಾರೆ. ಅದ್ಯಾವಾಗ ಹೊಸ ಚಿತ್ರದ ಬಗ್ಗೆ ಅಪ್‌ಡೇಟ್ ಕೊಡ್ತಾರೆ ಅಂತ ಫ್ಯಾನ್ಸ್ ಕಾಯ್ತಿದ್ದಾರೆ.

