ಫ್ಯಾನ್ಸ್‌ಗೆ ಸಿಹಿಸುದ್ದಿ- 2ನೇ ಮಗುವಿಗೆ ಜನ್ಮ ನೀಡಿದ Sonam Kapoor
ಬಾಲಿವುಡ್ ಬೆಡಗಿ ಸೋನಮ್ ಕಪೂರ್ (Sonam Kapoor) ಮತ್ತೆ ಅಮ್ಮನಾದ ಖುಷಿಯಲ್ಲಿದ್ದಾರೆ. 2ನೇ ಮಗುವಿಗೆ ಅವರು ಜನ್ಮ ನೀಡಿದ್ದಾರೆ. ಈ ಖುಷಿಯ ಸುದ್ದಿಯನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈ ಬಾರಿಯು ಸೋನಮ್, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸಂತೋಷದಿಂದ ನಮ್ಮ ಮಗುವಿನ ಆಗಮನ ಬಗ್ಗೆ ಘೋಷಿಸುತ್ತೇವೆ. ನಮ್ಮ ಫ್ಯಾಮಿಲಿ ದೊಡ್ಡದಾಗಿದೆ. ಅವನ ಆಗಮನದಿಂದ ಹೃದಯಗಳು ಖುಷಿಯಿಂದ ತುಂಬಿದೆ. ವಾಯು ತನ್ನ ತಮ್ಮನನ್ನು ಸ್ವಾಗತಿಸಲು ಖುಷಿಯಾಗಿದ್ದಾನೆ. ನಾಲ್ಕು ಜನರ ಒಂದು ಫ್ಯಾಮಿಲಿಯಾಗಿ ಹೊಸ ಅಧ್ಯಾಯ ಆರಂಭಿಸುತ್ತಿದ್ದೇವೆ. ಪ್ರೀತಿಯಿಂದ ಸೋನಮ್, ಆನಂದ್, ವಾಯು ಎಂದು ಸೋನಮ್ ಬರೆದುಕೊಂಡಿದ್ದಾರೆ.
View this post on Instagram
2018ರಲ್ಲಿ ಸೋನಮ್- ಆನಂದ್ (Anand Ahuja) ಅದ್ದೂರಿಯಾಗಿ ಮದುವೆಯಾದರು. 2022ರಲ್ಲಿ ಮೊದಲ ಗಂಡು ಮಗುವಿಗೆ ಸೋನಮ್ ಜನ್ಮ ನೀಡಿದರು. ಮಗನಿಗೆ ವಾಯು ಎಂದು ನಾಮಕರಣ ಮಾಡಿದರು. ಈಗ ಎರಡನೇ ಮಗುವಿನ ಆಗಮನದ ಸಂಭ್ರಮದಲ್ಲಿದ್ದಾರೆ ಕಪೂರ್ ಫ್ಯಾಮಿಲಿ.

