ಬಹುಕಾಲದ ಗೆಳತಿಯೊಂದಿಗೆ ʻಮನದ ಕಡಲುʼ ನಟ ಸುಮುಖ್‌ ಡೆಸ್ಟಿನೇಷನ್‌ ವೆಡ್ಡಿಂಗ್‌

ಬಹುಕಾಲದ ಗೆಳತಿಯೊಂದಿಗೆ ʻಮನದ ಕಡಲುʼ ನಟ ಸುಮುಖ್‌ ಡೆಸ್ಟಿನೇಷನ್‌ ವೆಡ್ಡಿಂಗ್‌

ʻಮನದ ಕಡಲುʼ ಮೂಲಕ (Manada Kadalu) ಗಮನ ಸೆಳೆದ ಸುಮುಖ್‌ (Sumukha) ಅವರು ಹಸೆಮಣೆ ಏರಿದ್ದಾರೆ. ಬಹುಕಾಲದ ಗೆಳತಿ ಮೈತ್ರಿ (Maitri Uka) ಜೊತೆ ನಟ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಸ್ಯಾಂಡಲ್‌ವುಡ್‌ನ ಯಂಗ್‌ ಹೀರೋ ಸುಮುಖ್‌ ಮದುವೆಯಾಗಿರೋದು ನಿಜಕ್ಕೂ ಅನೇಕರಿಗೆ ಅಚ್ಚರಿ ಮೂಡಿಸಿದೆ. ಮುಂಬೈನ ಬೆಡಗಿ ಮೈತ್ರಿ ಉಕಾ ಜತೆ ನಟನ ಮದುವೆ ಜರುಗಿದೆ.

ಇಬ್ಬರೂ ಇಷ್ಟಪಟ್ಟಂತೆ ಕುಟುಂಬಸ್ಥರ ಸಮ್ಮುಖದಲ್ಲಿ ರಿಷಿಕೇಶದಲ್ಲಿ ಸುಮುಖ್-‌ ಮೈತ್ರಿ ಮದುವೆಯಾಗಿದ್ದಾರೆ. ಹೆಚ್ಚು ಆಡಂಬರವಿಲ್ಲದೇ ಆಪ್ತರ ಸಮ್ಮುಖದಲ್ಲಿ ಮದುವೆ ನಡೆದಿದೆ.

ಕಳೆದ ವರ್ಷ ರಾಶಿಕಾ ಶೆಟ್ಟಿ ಜೊತೆ ʻಮನದ ಕಡಲುʼ ಸಿನಿಮಾ ಮಾಡಿದ್ರು ಸುಮುಖ್‌. ಈ ಸಿನಿಮಾಗೆ ರಾಕಿಂಗ್‌ ಸ್ಟಾರ್‌ ಯಶ್‌ (Yash) ಬೆಂಬಲ ಸೂಚಿಸಿದ್ದರು.

News Desk Sandalwood Times

error: Content is protected !!