ʻದಿಲ್‌ದಾರ್‌ʼ ಆಗಿ ಎಂಟ್ರಿ ಕೊಟ್ಟ ಶ್ರೇಯಸ್ ಮಂಜು- ಮಸ್ತ್‌ ಆಗಿದೆ ಟೀಸರ್‌

ʻದಿಲ್‌ದಾರ್‌ʼ ಆಗಿ ಎಂಟ್ರಿ ಕೊಟ್ಟ ಶ್ರೇಯಸ್ ಮಂಜು- ಮಸ್ತ್‌ ಆಗಿದೆ ಟೀಸರ್‌

‘ಪಡ್ಡೆಹುಲಿ’ಯಾಗಿ ಪ್ರೇಕ್ಷಕರನ್ನೆಲ್ಲ ಸೆಳೆದುಕೊಂಡಿರುವ ಶ್ರೇಯಸ್ ಮಂಜುಗೆ (Shreyas Manju) ಏ.5ರಂದು ಹುಟ್ಟುಹಬ್ಬದ ಹಿನ್ನೆಲೆ ನಟ ʻದಿಲ್‌ದಾರ್‌ʼ ಚಿತ್ರದ ಟೀಸರ್‌ ರಿಲೀಸ್‌ ಮಾಡಿದ್ದಾರೆ. ಈ ಮೂಲಕ ಚಿತ್ರತಂಡ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಆರಂಭದಿಂದಲೂ ಆಕ್ಷನ್ ಲುಕ್ಕಲ್ಲಿ ಮಿಂಚುತ್ತಾ ಬಂದಿರುವ ಶ್ರೇಯಸ್ ಮಂಜು, ಸದರಿ ಟೀಸರ್‌ನಲ್ಲಿ ಮತ್ತೊಂದು ಮಟ್ಟದ ಆಕ್ಷನ್ ಅವತಾರದಲ್ಲಿ ವಿಜೃಂಭಿಸಿದ್ದಾರೆ. ಈ ಟೀಸರ್‌ಗೀಗ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

 

View this post on Instagram

 

A post shared by Shreyas Manju (@shreyaskmanju5)

ದಿಲ್‌ದಾರ್ ಮಧು ಗೌಡ ಗಂಗೂರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಇದೀಗ ಬಹತೇಕ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಬಿಡುಗಡೆಯ ಸನ್ನಾಹದಲ್ಲಿದೆ. ಈ ಸಿನಿಮಾ ಈವತ್ತಿನ ಹೊಸ ತಲೆಮಾರಿಗೆ ನೇರಾನೇರ ಹೊಂದಿಕೆಯಾಗುವಂಥಾ ವಿಶಿಷ್ಟ ಕಥೆಯನ್ನೊಳಗೊಂಡಿದೆ ಎಂಬುದು ನಿರ್ದೇಶಕರ ಮಾತು. ಈ ಬರ್ತ್‌ಡೇ ಟೀಸರ್ ಮೂಲಕ ಒಟ್ಟಾರೆ ಸಿನಿಮಾ ಮೂಡಿ ಬಂದಿರುವ ರೀತಿ ಮತ್ತು ನಾಯಕ ಶ್ರೇಯಸ್ ಮಂಜು ಅವರ ಖಡಕ್ ಲುಕ್ ಸ್ಪಷ್ಟವಾಗಿಯೇ ಅನಾವರಣಗೊಂಡಿದೆ.

 

View this post on Instagram

 

A post shared by Shreyas Manju (@shreyaskmanju5)

ಏನ್ಸಿಯೆಂಟ್ ಮೂವೀಸ್ ಬ್ಯಾನರ್‌ನಡಿಯಲ್ಲಿ ಡಾ.ಆರ್ ಸಂತೋಷ್ ಕುಮಾರ್ (ಎಸ್‌ವಿಟಿ) ದಿಲ್‌ದಾರ್ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ನಟ ಶರಣ್ (Sharan) ಅವರ ತಂಗಿ ಮಗಳಾದ ಕೀರ್ತಿ ಕೃಷ್ಣ (Keerthi Krishna) ಈ ಚಿತ್ರದ ಮೂಲಕವೇ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಸಾಧು ಕೋಕಿಲಾ, ಚಂದ್ರಪ್ರಭ, ಕಾರ್ತಿಕ್, ಚಿಲ್ಲರ್ ಮಂಜು ಮುಂತಾದ ಹಾಸ್ಯ ನಟರ ದಂಡೇ ಈ ಚಿತ್ರದಲ್ಲಿದೆ. KGF ಖ್ಯಾತಿಯ ಆಂಡ್ರೋ ಅವಿನಾಶ್, ಭಜರಂಗಿ ಲೋಕಿ, ಅರ್ಪಿತ್ ಖಳನಟರಾಗಿ ಅಬ್ಬರಿಸಿದ್ದಾರೆ. ಈಗಾಲೇ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳನ್ನು ಮುಗಿಸಿಕೊಂಡಿರುವ ಚಿತ್ರತಂಡ, ಶೀಘ್ರದಲ್ಲಿಯೇ ಬಿಡುಗಡೆ ದಿನಾಂಕವನ್ನು ಅನಾವರಣಗೊಳಿಸಲಿದೆ.

News Desk Sandalwood Times

error: Content is protected !!